ಉದ್ಧಟತನ ತೋರಿದ ಪಾಕಿಸ್ತಾನ; ಕದನ ವಿರಾಮ ಉಲ್ಲಂಘಿಸಿ ಮತ್ತೆ ಡ್ರೋನ್ ದಾಳಿ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಶನಿವಾರ ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಗೆ ಬಂದಿದೆ ಎಂದು ಭಾರತ ಘೋಷಣೆ ಮಾಡಿತ್ತು. ಆದರೆ ಪಾಕಿಸ್ತಾನ ಮತ್ತೊಮ್ಮೆ ನರಿ ಬುದ್ದಿ ತೋರಿಸಿದೆ. ಶನಿವಾರ ರಾತ್ರಿ ಹಲವು ಕಡೆಗಳಲ್ಲಿ ಮತ್ತೊಮ್ಮೆ ಡ್ರೋನ್ ದಾಳಿ ಮಾಡಿದ್ದು ರಕ್ಷಣಾ ಪಡೆಗಳು ಡ್ರೋನ್‌ಗಳನ್ನು ಹೊಡದುರುಳಿಸಿವೆ.
ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘಿಸಿದೆ. ಉಧಂಪುರದ ಮೇಲೆ ಡ್ರೋನ್‌ಗಳ ದಾಳಿ ನಡೆದಿದೆ. ವಾಯುದಾಳಿ ಬೆನ್ನಲ್ಲೇ ಸೈರನ್‌ಗಳನ್ನು ಮೊಳಗಿಸಲಾಗಿದೆ ಮತ್ತು ಬ್ಲ್ಯಾಕೌಟ್ ಜಾರಿಗೊಳಿಸಲಾಗಿದೆ. ಹಲವಾರು ಗಡಿ ಜಿಲ್ಲೆಗಳು ಕತ್ತಲೆಯಲ್ಲಿ ಮುಳುಗಿವೆ.

ಪಾಕಿಸ್ತಾನ ಭಾರತದೊಂದಿಗೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ ನಂತರ ಶ್ರೀನಗರದಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಆರಂಭಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಶ್ರೀನಗರದ ಹಲವು ಕಡೆಗಳಲ್ಲಿ ಸ್ಫೋಟಗಳು ಕೇಳಿಬಂದವು, ಶೆಲ್ ದಾಳಿ ಮತ್ತು ವಾಯುದಾಳಿ ನಡೆದಿದೆ ಎಂದು ವರದಿಯಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಒಪ್ಪಂದ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. "ಕದನ ವಿರಾಮಕ್ಕೆ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳು ಕೇಳಿಬಂದವು!!!" ಎಂದು ಒಮರ್ ಅಬ್ದುಲ್ಲಾ ಆಘಾತ ವ್ಯಕ್ತಪಡಿಸಿದ್ದಾರೆ.
This is no ceasefire. The air defence units in the middle of Srinagar just opened up. pic.twitter.com/HjRh2V3iNW
— Omar Abdullah (@OmarAbdullah) May 10, 2025
ಪಾಕಿಸ್ತಾನ ಭಾರತದೊಂದಿಗೆ ಕದನ ವಿರಾಮ ಉಲ್ಲಂಘಿಸಿದ ನಂತರ ಪಂಜಾಬ್‌ನ ಹೋಶಿಯಾರ್‌ಪುರ ಮತ್ತು ಫಿರೋಜ್‌ಪುರದಲ್ಲಿ ತುರ್ತಾಗಿ ಬ್ಲ್ಯಾಕೌಟ್ ಜಾರಿ ಮಾಡಲಾಗಿದೆ. ಕದನ ವಿರಾಮ ಘೋಷಣೆ ಮಾಡಿದ ಬಳಿಕ ಬ್ಲ್ಯಾಕ್‌ಔಟ್‌ಗಳನ್ನು ರದ್ದುಗೊಳಿಸಲಾಗಿತ್ತು, ಆದರೆ ಪಾಕಿಸ್ತಾನ ಶೆಲ್ ದಾಳಿ ಮತ್ತು ವಾಯುದಾಳಿ ಮಾಡಿದ ಬೆನ್ನಲ್ಲೇ ಬ್ಲ್ಯಾಕ್‌ಔಟ್ ಜಾರಿ ಮಾಡಲಾಗಿದೆ.












Click it and Unblock the Notifications