'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಇಂಡಿಯಾ ಒಕ್ಕೂಟ ವಿರೋಧ!
ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (INDIA) ದ ನಾಯಕರು ಮುಂಬೈನಲ್ಲಿ ಚಭೆ ನಡೆಸುತ್ತಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಯೋಜನೆಗಳನ್ನು ರೂಪಿಸಲು ಚರ್ಚೆ ಮಾಡುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವ ನಿರ್ಣಯವನ್ನು ಮೈತ್ರಿಕೂಟ ಪ್ರಕಟಿಸಿದೆ.
ವಿರೋಧ ಪಕ್ಷದ ಮೂರನೇ ಸುತ್ತಿನ ಸಭೆಯಲ್ಲಿ ಔಪಚಾರಿಕ ಮಾತುಕತೆಯ ಸಂದರ್ಭದಲ್ಲಿ, ಇಂಡಿಯಾ ಬಣದ ನಾಯಕರು ಜಂಟಿ ಹೇಳಿಕೆ ನೀಡಿದ್ದು, "ನಾವು, ಇಂಡಿಯಾ ಒಕ್ಕೂಟದ ಪಕ್ಷಗಳು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸಲು ನಿರ್ಧರಿಸಿದ್ದೇವೆ" ಎಂದು ಘೋಷಿಸಿದರು.

ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆ ವ್ಯವಸ್ಥೆಗಳನ್ನು ತಕ್ಷಣವೇ ಪ್ರಾರಂಭಿಸಲಾಗುವುದು ಮತ್ತು ಕೊಡು-ಕೊಳ್ಳುವಿಕೆಯ ಸಹಕಾರದ ಮನೋಭಾವದಲ್ಲಿ ಶೀಘ್ರವಾಗಿ ಮುಕ್ತಾಯಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
"ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳ ಕುರಿತು ದೇಶದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಆಯೋಜಿಸಲು ಈ ಮೂಲಕ ನಿರ್ಧರಿಸುತ್ತೇವೆ. ನಾವು, ಇಂಡಿಯಾ ಪಕ್ಷಗಳು, ಒಗ್ಗಟ್ಟಿನ ಭಾರತ, ಗೆಲ್ಲಲಿದೆ ಭಾರತ ಎಂಬ ಥೀಮ್‌ನೊಂದಿಗೆ ನಮ್ಮ ಸಂಬಂಧಿತ ಸಂವಹನ ಮತ್ತು ಮಾಧ್ಯಮ ಕಾರ್ಯತಂತ್ರಗಳು ಮತ್ತು ಪ್ರಚಾರಗಳನ್ನು ಸಂಘಟಿಸಲು ಈ ಮೂಲಕ ಸಂಕಲ್ಪ ಮಾಡಿದ್ದೇವೆ," ಒಕ್ಕೂಟ ಹೇಳಿದೆ.
ಒಂದು ರಾಷ್ಟ್ರ ಒಂದು ಚುನಾವಣೆಗೆ ವಿರೋಧ
ಒಂದು ರಾಷ್ಟ್ರ, ಒಂದು ಚುನಾವಣೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದರು, ಇದು ದೇಶದ ಒಕ್ಕೂಟ ರಚನೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಸಿಪಿಐ ಮುಖಂಡ ಡಿ ರಾಜಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಯಾವಾಗಲೂ ಮಾತನಾಡುತ್ತಾರೆ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸದೆ ಸರ್ಕಾರ ಏಕಪಕ್ಷೀಯ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್, ದೇಶವು ಈಗಾಗಲೇ ಒಂದಾಗಿದೆ ಮತ್ತು ಯಾರೂ ಅದನ್ನು ಪ್ರಶ್ನಿಸುತ್ತಿಲ್ಲ. "ನಾವು ನ್ಯಾಯಸಮ್ಮತ ಚುನಾವಣೆಯನ್ನು ಬಯಸುತ್ತೇವೆ, 'ಒಂದು ರಾಷ್ಟ್ರ ಒಂದು ಚುನಾವಣೆ' ಅಲ್ಲ. ನ್ಯಾಯಸಮ್ಮತ ಚುನಾವಣೆಯ ನಮ್ಮ ಬೇಡಿಕೆಯಿಂದ ಗಮನವನ್ನು ಬೇರೆಡೆ ಸೆಳೆಯಲು 'ಒಂದು ರಾಷ್ಟ್ರ ಒಂದು ಚುನಾವಣೆ'ಯ ಆದೇಶ ತರಲಾಗುತ್ತಿದೆ,'' ಎಂದು ಅವರು ಹೇಳಿದರು.
ಸಂಸತ್ತಿನ ವಿಶೇಷ ಅಧಿವೇಶನ ಕರೆದ ಬಗ್ಗೆ ಮಾತನಾಡಿದ, ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, "ಇಂದು, ದೇಶವು ರೈತರ ಸಮಸ್ಯೆಗಳನ್ನು ಎದುರಿಸುತ್ತಿದೆ, ಹೆಚ್ಚುತ್ತಿರುವ ನಿರುದ್ಯೋಗ, ಚೀನಾದ ಆಕ್ರಮಣಕಾರಿ ನೀತಿ, ವಿಶೇಷ ಅಧಿವೇಶನವು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದರೆ ಅದು ಸ್ವಾಗತಾರ್ಹ, ಈ ವಿಷಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇದನ್ನು ಬಳಸಿದರೆ, ಇದು ಬಿಜೆಪಿಯ ಆತಂಕವನ್ನು ತೋರಿಸುತ್ತದೆ, ಹಣದುಬ್ಬರ, ಭ್ರಷ್ಟಾಚಾರ, ಹೆಚ್ಚುತ್ತಿರುವ ನಿರುದ್ಯೋಗ, ಮಹಿಳಾ ಮೀಸಲಾತಿ ಕುರಿತು ಸಮಿತಿಯನ್ನು ಯಾವಾಗ ರಚಿಸಲಾಗುವುದು ಎಂದು ನಾನು ಕೇಂದ್ರ ಸರ್ಕಾರವನ್ನು ಕೇಳಲು ಬಯಸುತ್ತೇನೆ ಎಂದು ಹೇಳಿದರು.
ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ
ಇಂಡಿಯಾ ಒಕ್ಕೂಟದ ಸಭೆಯಲ್ಲಿ ಅಭಿನಂದನಾ ನಿರ್ಣಯವನ್ನೂ ಅಂಗೀಕರಿಸಲಾಯಿತು. ಇಸ್ರೋದ ಯಶಸ್ವಿ ಚಂದ್ರಯಾನ-3 ಮಿಷನ್ ಕುರಿತು ಪ್ರತಿಕ್ರಿಯೆ ನೀಡಿದ ಒಕ್ಕೂಟದ ಸಭೆ. "ನಾವು, ಇಂಡಿಯಾ ಒಕ್ಕೂಟದ ಪಕ್ಷಗಳು ಇಡೀ ಇಸ್ರೋದ ಹಿಂದಿನ ಮತ್ತು ಈಗಿನ ವಿಜ್ಞಾನಿಗಳನ್ನು ನಮ್ಮ ದೇಶವನ್ನು ಹೆಮ್ಮೆಪಡಿಸಿದ ಅತ್ಯುತ್ತಮ ಸಾಧನೆಗಳಿಗಾಗಿ ಅಭಿನಂದಿಸುತ್ತೇವೆ. ಚಂದ್ರಯಾನ-3 ಜಗತ್ತನ್ನು ರೋಮಾಂಚನಗೊಳಿಸಿದೆ. ನಾಳೆ ಆದಿತ್ಯ-ಎಲ್1 ಉಡಾವಣೆಗಾಗಿ ಉತ್ಸುಕತೆಯಿಂದ ನೋಡುತ್ತಿದೆ. ಇಸ್ರೋದ ಅಸಾಧಾರಣ ಸಾಧನೆಗಳು ನಮ್ಮ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬಲಪಡಿಸುತ್ತದೆ ಮತ್ತು ನಮ್ಮ ಯುವಕರಿಗೆ ವೈಜ್ಞಾನಿಕ ಪ್ರಯತ್ನದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ನಿರ್ಣಯ ಕೈಗೊಂಡಿದ್ದು, ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಶುಕ್ರವಾರದಂದು ಒಕ್ಕೂಟದ ಲೋಗೋ ಅನಾವರಣವನ್ನು ರದ್ದುಗೊಳಿಸಲಾಗಿದೆ ಎಂದು ರಾವುತ್ ಹೇಳಿದ್ದಾರೆ. "ಮೈತ್ರಿಯಲ್ಲಿ ಲೋಗೋ ಬಹಳ ಮುಖ್ಯವಾದ ಭಾಗವಾಗಿದೆ, ನಮ್ಮ ಸಭೆಯಲ್ಲಿ ಚರ್ಚಿಸಲಾಗುವುದು ಆದರೆ ಇಂದು ಲೋಗೊ ಅನಾವರಣಗೊಳ್ಳುವುದಿಲ್ಲ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಸಮನ್ವಯ ಸಮಿತಿಯ ಭಾಗವಾಗಲು ಆಯಾ ಪಕ್ಷಗಳಿಂದ ಒಂದು ಹೆಸರನ್ನು ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಿಧ ಪಕ್ಷಗಳ ನಾಯಕರನ್ನು ಕೇಳಿದ್ದಾರೆ. ಅಕ್ಟೋಬರ್ 2 ರೊಳಗೆ ಬಣವು ತನ್ನ ಪ್ರಣಾಳಿಕೆಯನ್ನು ಹೊರತರಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನೌಪಚಾರಿಕ ಭೋಜನ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಅವರ ದೆಹಲಿ ಕೌಂಟರ್ ಅರವಿಂದ್ ಕೇಜ್ರಿವಾಲ್ ಮುಂದಿನ ತಿಂಗಳ ಕೊನೆಯಲ್ಲಿ ಲೋಕಸಭೆ ಚುನಾವಣೆಗೆ ಪಕ್ಷಗಳ ನಡುವೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವಂತೆ ಕೇಳಿದ್ದಾರೆ.












Click it and Unblock the Notifications