ಹಳೆ ಮತ್ತು ಹೊಸ ತೆರಿಗೆ ಪದ್ಧತಿ: 2025-26ರ ಆರ್ಥಿಕ ವರ್ಷಕ್ಕೆ ಯಾವುದು ಉತ್ತಮ?

ಬೆಂಗಳೂರು, ಏಪ್ರಿಲ್ 02: ಕೇಂದ್ರ ಸರ್ಕಾರ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತಂದಿದೆ. 2024ರ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದಂತೆ 1961ರ ಆದಾಯ ತೆರಿಗೆ ಕಾಯ್ದೆಯ ಸಮಗ್ರ ಪರಾಮರ್ಶೆ ನಡೆಸುವುದಾಗಿ 2024ರ ಜುಲೈ ತಿಂಗಳ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಆದಾಯ ತೆರಿಗೆ ಪಾವತಿ ಮಾಡುವವರು ಹಳೆಯ ಅಥವ ಹೊಸ ಪದ್ಧತಿ ಇದರಲ್ಲಿ ಯಾವುದು ಉತ್ತಮ ಎಂದು ಸದಾ ಚಿಂತಿಸುತ್ತಾರೆ. ಹಳೆ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಹಲವು ವ್ಯತ್ಯಾಸಗಳಿವೆ. ಹೊಸ ತೆರಿಗೆ ವ್ಯವಸ್ಥೆ ಈಗ ಡೀಫಾಲ್ಟ್ ವ್ಯವಸ್ಥೆಯಾಗಿದೆ, ಆದರೆ ಹಳೆಯ ತೆರಿಗೆ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಸರ್ಕಾರ ಹೇಳಿದೆ.

Old Vs New Tax Regime Which Is Better For 2025-26

ಹೊಸ ತೆರಿಗೆ ಪದ್ಧತಿಯಿಂದ 17,500 ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವೇತನ ಪಡೆಯುವವರಿಗೆ ಹೊಸ ತೆರಿಗೆ ಪದ್ಧತಿ ಅನುಕೂಲವಾಗಲಿದೆ, ಅವರಿಗೆ ಹೆಚ್ಚಿನ ಉಳಿತಾಯವಾಗಲಿದೆ. ಈ ಪದ್ಧತಿಗಳನ್ನು ಸ್ಟ್ರ್ಯಾಂಡರ್ಡ್‌ ಡಿಡಕ್ಷನ್‌ 75 ಸಾವಿರಕ್ಕೆ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2024ರ ಏಪ್ರಿಲ್‌ 1ರಿಂದಲೇ ಹೊಸ ತೆರಿಗೆ ಪದ್ಧತಿಯು ಪದ್ಧತಿಯು ಜಾರಿಗೆ ಬಂದಿದೆ. 2025-26ನೇ ಅಸೆಸ್ಮೆಂಟ್ ಸಾಲಿಗೆ ಅನ್ವಯವಾಗಲಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಹಿಂದಿನಂತೆಯೇ ಆದಾಯ ತೆರಿಗೆ ಮಿತಿ 3 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. 3-7 ಲಕ್ಷ ರೂ. ಶೇ 5ರಷ್ಟು, 7-10 ಲಕ್ಷ ಶೇ 10ರಷ್ಟು, 10-12 ಲಕ್ಷ ಶೇ 15ರಷ್ಟು, 12-15 ಲಕ್ಷ ರೂ. ತನಕ ಶೇ 20ರಷ್ಟು ಮತ್ತು 15 ಲಕ್ಷಕ್ಕೂ ಹೆಚ್ಚಿನ ಆದಾಯಕ್ಕೆ ಶೇ 30 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಕೇಂದ್ರ ಸರ್ಕಾರ ಹಳೆ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈಗಲೂ ಆದಾಯ ತೆರಿಗೆ ಮಿತಿ 2.5 ಲಕ್ಷದಷ್ಟಿದೆ. ಶೇ 5ರ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷ. 5-10 ಲಕ್ಷಕ್ಕೆ ಶೇ 20ರಷ್ಟು, 10 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ಇದೆ. ಈ ಪದ್ಧತಿಯಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ಕೊಡಲಾಗಿದೆ.

ಹಿರಿಯ ನಾಗರಿಕರಿಗೆ 2.5 ಲಕ್ಷ ತನಕ ಯಾವುದೇ ತೆರಿಗೆ ಇಲ್ಲ. 2.5- 3 ಲಕ್ಷದ ತನಕ ಶೇ 5. 3 ಲಕ್ಷ 5 ಲಕ್ಷ ತನಕ ಶೇ 5. 5 ಲಕ್ಷದಿಂದ 10 ಲಕ್ಷದ ತನಕ ಶೇ 20, 10 ಲಕ್ಷದ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ಇದೆ. ಇದೇ ರೀತಿಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ 5-10 ಲಕ್ಷದ ತನಕ ಶೇ 20, 10 ಲಕ್ಷದ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿನಾಯಿತಿ ಇದೆ.

2025-26ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿಯಡಿ 12 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯಕ್ಕೆ ಯಾವುದೇ (ಅಂದರೆ ಬಂಡವಾಳ ಲಾಭದಂತಹ ವಿಶೇಷ ದರದ ಆದಾಯವನ್ನು ಹೊರತುಪಡಿಸಿ ತಿಂಗಳಿಗೆ ಸರಾಸರಿ ರೂ. 1 ಲಕ್ಷ ಆದಾಯ) ಆದಾಯ ತೆರಿಗೆ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.

12.75 ಲಕ್ಷ ರೂಪಾಯಿವರೆಗೆ ವೇತನ ಪಡೆಯುವವರಿಗೆ ತೆರಿಗೆ ಪ್ರಮಾಣಿತ ಕಡಿತ ರೂ. 75,000 ರೂಪಾಯಿ ಆಗಿದೆ. ಸ್ಲ್ಯಾಬ್ ದರ ಕಡಿತದಿಂದಾಗಿ ದೊರೆಯುವ ಪ್ರಯೋಜನದ ಜೊತೆಗೆ ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಇದರಿಂದ ಅವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.

ಹೊಸ ರಚನೆಯು ಮಧ್ಯಮ ವರ್ಗದವರ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಅವರ ಕೈಯಲ್ಲಿ ಹೆಚ್ಚಿನ ಹಣವನ್ನು ಉಳಿಸುತ್ತದೆ. ಮನೆಯ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+