Get Updates
Get notified of breaking news, exclusive insights, and must-see stories!

9 ವರ್ಷಗಳ ಹಿಂದೆ ಕದ್ದ ದೇವರ ಆಭರಣ ವಾಪಸ್- ಕಳ್ಳನ ಜೀವನದಲ್ಲಿ ನಡೆದಿತ್ತು ದೈವದಾಟ

ಒಂಬತ್ತು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಕದ್ದ ಆಭರಣಗಳನ್ನು ಕಳ್ಳನೊಬ್ಬ ಮತ್ತೆ ವಾಪಸ್ಸು ತಂದಿಟ್ಟ ವಿಚಿತ್ರ ಘಟನೆಯೊಂದು ಓಡಿಶಾದಲ್ಲಿ ನಡೆದಿದೆ. ಓಡಿಶಾದ ಭುವನೇಶ್ವರದ ಹೊರವಲಯದಲ್ಲಿರುವ ದೇವಾಲಯದಿಂದ ಬೆಳ್ಳಿ ಆಭರಣಗಳನ್ನು ಕದ್ದಿದ್ದ ವ್ಯಕ್ತಿಯೊಬ್ಬರು ಲಿಖಿತ ಟಿಪ್ಪಣಿಯ ಮೂಲಕ ತನ್ನ ಅಪವಿತ್ರ ಕೃತ್ಯಕ್ಕೆ ಕ್ಷಮೆಯಾಚಿಸುವಂತೆ ಹೇಳಿ ಎಲ್ಲವನ್ನೂ ಹಿಂದಿರುಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 2014 ರಲ್ಲಿ ಭುವನೇಶ್ವರದ ಗೋಪಿನಾಥಪುರ ಗ್ರಾಮದ ರಾಧಾ-ಕೃಷ್ಣ ದೇವಾಲಯದ ಹಲವಾರು ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. ಕದ್ದ ಆಭರಣಗಳಲ್ಲಿ ಶಿರಸ್ತ್ರಾಣ, ಕಿವಿಯೋಲೆಗಳು, ಬಳೆಗಳು ಮತ್ತು ಕೊಳಲು ಸೇರಿದೆ. ಪೊಲೀಸರಿಗೆ ದೂರು ನೀಡಿದರೂ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. ಆದರೆ ಒಂಬತ್ತು ವರ್ಷಗಳ ಬಳಿಕ ಕಳ್ಳ ಕದ್ದ ಆಭರಣಗಳನ್ನು ದೇವಸ್ಥಾನಕ್ಕೆ ವಾಪಸ್ಸು ನೀಡಿದ್ದಾನೆ. ಇದರೊಂದಿಗೆ ಹಿಂದಿಯಲ್ಲಿ ಚೀಟಿಯನ್ನೂ ಬರೆದಿಟ್ಟಿದ್ದಾನೆ.

Repentance after reading Bhagavad Gita

ಧೌಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಚಿತ್ತರಂಜನ್‌ ರೌತ್‌ ಮಾತನಾಡಿ, ಕ್ಷಮಾಪಣೆಯ ಚೀಟಿಯೊಂದಿಗೆ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಭರಣಗಳ ಚೀಲವನ್ನು ದೇವಸ್ಥಾನದ ಪಕ್ಕದ ಮನೆಯೊಂದರ ಹೊರಗೆ ಇರಿಸಲಾಗಿದ್ದು, ಈ ಹಿಂದೆ ಕಳ್ಳರು ಅದನ್ನು ಕದ್ದೊಯ್ದಿದ್ದರು.

ಕ್ಷಮಾಪಣೆಯ ಚೀಟಿಯಲ್ಲಿ "ನನಗೆ ಇತ್ತೀಚೆಗೆ ಭಗವದ್ಗೀತಾ ಓದಿದ ಬಳಿಕ ಪಶ್ವಾತ್ತಾಪವಾಯಿತು. ದೇವಸ್ಥಾನದಲ್ಲಿ ಯಜ್ಞ ನಡೆಯುತ್ತಿದ್ದಾಗ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ಆಭರಣಗಳನ್ನು ಕದ್ದ ನಂತರ ನಾನು ಒಂಬತ್ತು ವರ್ಷಗಳಲ್ಲಿ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದೆ. ಅದಕ್ಕಾಗಿಯೇ ನಾನು ದೇವಸ್ಥಾನದಲ್ಲಿ ಕದ್ದ ಎಲ್ಲಾ ಆಭರಣಗಳನ್ನು ವಾಪಸ್ಸು ನೀಡಲು ನಿರ್ಧರಿಸಿದ್ದೇನೆ'' ಎಂದು ಆಭರಣ ಕದ್ದ ವ್ಯಕ್ತಿ ಹೇಳಿದ್ದಾನೆ. ಆದಾಗ್ಯೂ, ಅವರು ತಮ್ಮ ಹೆಸರನ್ನು ಟಿಪ್ಪಣಿಯಲ್ಲಿ ನೀಡಿಲ್ಲ ಎಂದು ಧೌಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚಿತ್ತರಂಜನ್ ರೌತ್ ಹೇಳಿದ್ದಾರೆ.

Repentance after reading Bhagavad Gita

ಕಳ್ಳತನವಾದ ಆಭರಣಗಳನ್ನು ವಶಪಡಿಸಿಕೊಳ್ಳುವುದು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ದೇವಾಲಯದ ಅರ್ಚಕ ಕೈಲಾಶ್ ಪಾಂಡಾ ಹೇಳಿದ್ದಾರೆ. "ಆಭರಣಗಳು ಈ ರೀತಿ ಮತ್ತೆ ಕಾಣಿಸಿಕೊಳ್ಳುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಘಟನೆಯ ನಂತರ ನಾವು ದೇವತೆಗಳಿಗೆ ಹೊಸ ಆಭರಣಗಳನ್ನು ಖರೀದಿಸಿದ್ದೆವು. ಇದು ದೈವಿಕ ಹಸ್ತಕ್ಷೇಪವಲ್ಲದೆ ಬೇರೇನೂ ಅಲ್ಲ" ಎಂದು ಪಾಂಡ ಹೇಳಿದರು.

ಒಡಿಶಾದ INTACH (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್) ನ ಅಬಿಲ್ ಧೀರ್, ದೇವಾಲಯದ ವಿಗ್ರಹ ಕಳ್ಳತನ ಮತ್ತು ಕದ್ದ ಕಲಾಕೃತಿಗಳನ್ನು ಮರುಪಡೆಯಲು ವಿಫಲವಾದ ಎರಡೂ ಪಟ್ಟಿಯಲ್ಲಿ ಒಡಿಶಾ ಅಗ್ರಸ್ಥಾನದಲ್ಲಿರುವುದರಿಂದ ಪ್ರಾಚೀನ ಕಾಯಿದೆಯು ಹೆಚ್ಚು ಕಠಿಣವಾಗಬೇಕು ಎಂದು ಒತ್ತಾಯಿಸಿದ್ದರು.

Repentance after reading Bhagavad Gita

"ಪ್ರಾಚ್ಯವಸ್ತುಗಳ ಕಾಯಿದೆಯು ಯಾವುದೇ ದಂಡ ವಿಧಿಸುವ ನಿಬಂಧನೆಗಳನ್ನು ಹೊಂದಿಲ್ಲ. ಪರಂಪರೆಯ ಕಳ್ಳತನಗಳಿಗೆ ಲಭ್ಯವಿರುವ ಏಕೈಕ ವಿಭಾಗವೆಂದರೆ IPC ಸೆಕ್ಷನ್ 370 ಮಾತ್ರ. ಇದು ಪ್ರಧಾನವಾಗಿ ಮನೆ ಒಡೆಯುವ ಕಳ್ಳತನದೊಂದಿಗೆ ವ್ಯವಹರಿಸುತ್ತದೆ. ಈ ಸೆಕ್ಷನ್ ಪ್ರಕಾರ ಗರಿಷ್ಠ ಆರು ವರ್ಷಗಳು ಮತ್ತು 3,000 ದಂಡವನ್ನು ಹೊಂದಿದೆ. ಇದನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಮಾಡಬೇಕಾಗಿದೆ'' ಎಂದು ಧೀರ್ ಹೇಳಿದರು.

ಆದರೆ ಈ ಒತ್ತಾಯ ನಡುವೆ ಈ ಬೆಳವಣೆಗೆ ಕಂಡು ಬಂದಿದೆ. ಒಟ್ಟಿನಲ್ಲಿ ಒಂಬತ್ತು ವರ್ಷಗಳ ಹಿಂದೆ ಕದ್ದ ಆಭರಣ ದೇವಸ್ಥಾನಕ್ಕೆ ವಾಪಸ್ ಬಂದಿದೆ. ಅದೂ ಕೂಡ ಭಗವದ್ಗೀತೆ ಓದಿದ ನಂತರ ಇದು ನಡೆದಿದೆ ಅಂದರೆ ನಿಜಕ್ಕು ಇದೊಂದು ಪವಾಡವೇ ಸರಿ. f

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+