ಸೇನಾ ಸಭೆಯಲ್ಲಿ ಅಶ್ಲೀಲ ವಿಡಿಯೋ: ತನಿಖೆಗೆ ಆದೇಶ

ಅಮೃತಸರ, ಜೂನ್ 13 : ಸೇನಾ ವಿಚಾರಗಳ ಕುರಿತು ಚರ್ಚೆಗಾಗಿ ಏರ್ಪಡಿಸಿದ್ದ ಸಭೆಯಲ್ಲೇ ಅಧಿಕಾರಿಯೊಬ್ಬರ ಲ್ಯಾಪ್ ಟಾಪ್ ನಲ್ಲಿ ಅಶ್ಲೀಲ ಚಿತ್ರದ ವಿಡಿಯೋ ಪ್ರಸಾರವಾಗಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಂಜಾಬ್ ನ ಫಿರೋಜ್ಪುರ ಜಿಲ್ಲೆಯಲ್ಲಿರುವ 77 ಬೆಟಾಲಿಯನ್ ಪಡೆ ಮುಖ್ಯ ಕಚೇರಿಯಲ್ಲಿ ಭಾನುವಾರಏರ್ಪಡಿಸಲಾಗಿತ್ತು. 8 ಮಹಿಳಾ ಸಿಬ್ಬಂದಿ ಸೇರಿದಂತೆ ಇತರರು ಇದ್ದ ಸಭೆಯಲ್ಲಿ ಅಧಿಕಾರಿಯೊಬ್ಬರು ತಮ್ಮ ಲ್ಯಾಪ್ ಟಾಪ್ ಮೂಲಕ ಪ್ರೆಸೆಂಟೇಷನ್ ನೀಡಲು ಮುಂದಾಗಿದ್ದಾರೆ. ಈ ವೇಳೆ ಅಶ್ಲೀಲ ವಿಡಿಯೋಗಳು ಪ್ರಸಾರವಾಗಿದೆ. ಕೆಲ ಸೆಕೆಂಡ್ ಗಳ ಕಾಲ ವಿಡಿಯೋ ಪ್ಲೇ ಆಗಿದ್ದರಿಂದ ಅಧಿಕಾರಿ ಮುಜುಗರಕ್ಕೀಡಾದರು.

Obscene Video Plays At Border Security Force (BSF) Meet, Inquiry Ordered

ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದನ್ನು ಪಂಜಾಬ್ ಗಡಿಯ ಬಿಎಸ್ಎಫ್ ಐಜಿ ಮುಕುಲ್ ಗೋಯಲ್ ಅವರು ದೃಢಪಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಯೊಬ್ಬರ ಅಧಿಕೃತ ಲ್ಯಾಪ್ ಟಾಪ್ ನಲ್ಲಿ ಇಂತಹ ಕೆಟ್ಟ ಸಂಗ್ರಹಗಳಿರಬಾರದು.

ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ತನಿಖೆಗೆ ಆದೇಶಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+