ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ವಿಧಿವಶ

By Mahesh
|
Google Oneindia Kannada News

ಅಹಮದಾಬಾದ್, ಜ. 21: ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ(97) ಗುರುವಾರ ವಿಧಿವಶರಾಗಿದ್ದಾರೆ. ಭರತನಾಟ್ಯ, ಕಥಕ್ಕಳಿ ಹಾಗೂ ಮೋಹಿನಿಯಾಟ್ಟಂನಲ್ಲಿ ಪರಿಣಿತರಾಗಿದ್ದ ಮೃಣಾಲಿನಿ ಅವರು ವಿಶ್ವಕವಿ ರವೀಂದ್ರನಾಥ ಠಾಗೋರ್ ಸ್ಥಾಪಿಸಿದ ಶಾಂತಿನಿಕೇತನದ ವಿದ್ಯಾರ್ಥಿನಿಯಾಗಿದ್ದರು.

ಭಾರತದ ಬಾಹ್ಯಾಕಾಶ ಯೋಜನೆಗಳ ನಿರ್ಮಾತೃ ಡಾ. ವಿಕ್ರಮ್ ಸಾರಾಭಾಯಿ ಅವರನ್ನು ವರಿಸಿದ ಮೃಣಾಲಿನಿ ಅವರ ಪುತ್ರಿ ಮಲ್ಲಿಕಾ ಸಾರಾಭಾಯಿ ಅವರು ಕೂಡಾ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಪ್ರಸಿದ್ಧಿ ಪಡೆದಿದ್ದಾರೆ.

Noted danseuse and Padma Bhushan recipient Mrinalini Sarabhai passed away

ಪದ್ಮಭೂಷಣ ಪುರಸ್ಕೃತೆ ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ (97) ಅವರು ಗುರುವಾರ ನಿಧನರಾಗಿದ್ದಾರೆ.
ವಯೋ ಸಹಜ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಮೃಣಾಲಿನಿ ಅವರನ್ನು ಅಹಮದಾಬಾದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ನನ್ನ ತಾಯಿ ತಮ್ಮ ನೃತ್ಯ ಜಗತ್ತನ್ನು ನಮ್ಮ ಪಾಲಿಗೆ ಉಳಿಸಿ ನಮ್ಮಗಲಿದ್ದಾರೆ ಎಂದು ಮಲ್ಲಿಕಾ ಅವರು ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

My mother Mrinalini Sarabhai has just left for her eternal dance

Posted by Mallika Sarabhai on20 January 2016

ಭಾರತ ಸರ್ಕಾರವು 1992ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಮೃಣಾಲಿನಿ ಸಾರಾಭಾಯಿ ಅವರ ಹಿರಿಯ ಸಹೋದರಿ ಲಕ್ಷ್ಮೀ ಸೆಹಗಲ್ ಅವರು ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು. ಮೃಣಾಲಿನಿ ಸಾರಾಭಾಯಿ ಅವರ ಕುರಿತಂತೆ ವಿಶಿಷ್ಟ ವಿಡಿಯೋ ಇಲ್ಲಿದೆ ನೋಡಿ:

English summary
Noted danseuse and Padma Bhushan recipient Mrinalini Sarabhai passed away today(Jan.21) morning in Ahmedabad. She was 97. Mrinalini Sarabhai was founder of the Darpan Dance Academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X