ಕಕ್ಕಸು ಕಟ್ಟಿಸಿಕೊಡದ ಗಂಡನನ್ನು ಎತ್ತಿ ಬಿಸಾಕಿದ ಹೆಂಡತಿ
ಪಾಟ್ನಾ, ಮೇ 12: ಕುಡಿದು ಬರುವ ಗಂಡ, ಕಿರುಕುಳ ನೀಡುವ ಪತಿ, ಪರಸ್ತ್ರೀ ಸಂಗ ಮಾಡುವವನಿಗೆ ವಿಚ್ಛೇದನ ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಮನೆಯಲ್ಲಿ ಶೌಚಾಲಯ ಕಟ್ಟಿಸದ ಗಂಡನಿಗೆ ಡೈವೋರ್ಸ್ ನೀಡಿ ಸುದ್ದಿ ಮಾಡಿದ್ದಾಳೆ.
ಬಿಹಾರದ ವೈಶಾಲಿ ಜಿಲ್ಲೆಯ ಪಹಾರ್ ಪುರದ ಸುನೀತಾ ದೇವಿ ಶೌಚಾಲಯ ಕಟ್ಟಲು ನಿರಾಕರಿಸಿದ ಗಂಡನಿಗೆ ವಿಚ್ಛೇದನ ನೀಡಿ ಭಾರತಕ್ಕೆ ಮಾದರಿ ಮಹಿಳೆ ಯಾಗಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಇಲ್ಲಿ 'ಕತ್ತೆ'ಗಳು ಮಾತ್ರ ಉಚ್ಚೆ ಹೊಯ್ಯುತ್ತವೆ, ಛೀ!]
ಗ್ರಾಮ ಪಂಚಾಯಿತಿಯಿಂದ ಮಂಜೂರಾಗಿದ್ದ ಶೌಚಾಲಯ ನಿರ್ಮಿಸಲು ಗಂಡ ವಿಫಲನಾಗಿದ್ದ. ಗ್ರಾಮ ಪಂಚಾಯಿತಿ ನಿರ್ಮಲ ಗ್ರಾಮ ಎಂಬ ಹೆಗ್ಗಳಿಕೆಗೂ ಪಾತ್ರವಾಗುವುದರಲ್ಲಿತ್ತು.

ನಾನು ಕಳೆದ ನಾಲ್ಕು ವರ್ಷದಿಂದ ಶೌಚಾಲಯ ಕಟ್ಟುವಂತೆ ಗಂಡನಲ್ಲಿ ಕೇಳಿಕೊಳ್ಳುತ್ತಾ ಬಂದಿದ್ದೆ. ರಾತ್ರಿ ಸಮಯದಲ್ಲಿ ಅಥವಾ ಬಹಳ ದೂರಕ್ಕೆ ಬಹಿರ್ದೆಸೆಗೆ ತೆರಳುವ ಸ್ಥಿತಿಯಿಂದ ರೋಸಿಹೋಗಿದ್ದೆ. ಅಲ್ಲದೇ ಕೆಲ ಭೂ ಮಾಲೀಕರು ಇದನ್ನೆ ಬಳಸಿಕೊಂಡು ಕಿರುಕುಳ ನೀಡಲು ಮುಂದಾಗುತ್ತಿದ್ದರು ಎಂದು ದಿಟ್ಟ ಮಹಿಳೆ ಕರಾಳ ಅನುಭವ ಬಿಚ್ಚಿಡುತ್ತಾರೆ.[ದುಬೈನಲ್ಲಿ ಸಂಸಾರ ಮುರಿದ ವಾಟ್ಸಾಪ್ ಸಂದೇಶ]
ಶೌಚಾಲಯ ನಿರ್ಮಾಣ ನನ್ನಿಂದ ಸಾಧ್ಯವಿಲ್ಲ. ಇದಕ್ಕೆ ನಿನ್ನ ಪಾಲಕರ ಸಹಕಾರ ಬೇಕಾದರೆ ಪಡೆದಿಕೋ ಎಂದು ಹೇಳುತ್ತಿದ್ದ ಗಂಡ ನನ್ನ ಸಲಹೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದರು. ಹಾಗಾಗಿ ವಿಚ್ಛೇದನವೇ ಅಂತಿಮ ಎಂಬ ತೀರ್ಮಾನಕ್ಕೆ ಬಂದೆ ಎಂದು ಸುನೀತಾ ದೇವಿ ತಿಳಿಸಿದ್ದಾರೆ.












Click it and Unblock the Notifications