ಲೈಂಗಿಕತೆ, ಮಾಂಸ ಸೇವನೆಯಿಂದ ದೂರವಿರಿ: ಹೀಗೊಂದು ಸಲಹೆ!

ಗರ್ಭಿಣಿಯರು ಮಾಂಸ ಸೇವನೆ, ಲೈಂಗಿಕತೆಗಳಿಂದ ದೂರವಿರಬೇಕೆಂದು ಯೋಗ, ನ್ಯಾಚುರೋಪತಿ ಸಂಶೋಧನಾ ಮಂಡಳಿಯ ಮುಖ್ಯಸ್ಥ ಡಾ. ಈಶ್ವರ ಆಚಾರ್ಯ ಹೇಳಿದ್ದರು. ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಆಯುಷ್ ಇಲಾಖೆ, ಇದು ಕೇವಲ ಸಲಹೆಯಷ್ಟೇ, ಕಡ್ಡಾಯವೇನಿಲ್ಲ

ನವದೆಹಲಿ, ಜೂನ್ 14: ಮಾಂಸ ಸೇವನೆಯಿಂದ, ಲೈಂಗಿಕತೆಯಿಂದ ದೂರವಿರಿ... ಹೀಗೆಂದು ಕೇಂದ್ರ ಆಯುಷ್ (ಆಯುರ್ವೇದ, ಯೋಗ ಹಾಗೂ ನ್ಯಾಚುರೋಪತಿ, ಯುನಾನಿ, ಸಿದ್ಧೌಷಧ ಹಾಗೂ ಹೋಮಿಯೋಪತಿ) ಇಲಾಖೆ ಹೇಳಿದೆ.

ಗೋ ಮಾಂಸವನ್ನು ಪರೋಕ್ಷವಾಗಿ ನಿಷೇಧ ಹೇರಿರುವ ಈಗ ಮಾಂಸ ತಿನ್ನಬೇಡಿ ಎನ್ನುವ ಮೂಲಕ ಮತ್ತೆ ಆಹಾರ ಸಂಸ್ಕೃತಿಯಲ್ಲಿ ರಾಜಕೀಯ ಮಾಡಲು ಹೊರಟಿದೆಯೇ ಎಂದು ಕೆಲವರು ಆಲೋಚಿಸಬಹುದು.

'No sex, No meat' during pregnancy is 'suggestion': Ministry of AYUSH

ಆದರೆ, ವಿಷಯ ಅದಲ್ಲ. ಇಲಾಖೆಯು ಹೀಗೊಂದು ಸಲಹೆ ನೀಡಿರುವುದು ಗರ್ಭಿಣಿಯರಿಗೆ. ಲೈಂಗಿಕತೆ, ಮಾಂಸ ಸೇವನೆಯಿಂದ ದೂರವಿರುವುದಷ್ಟೇ ಅಲ್ಲ, ಕೆಟ್ಟ ಸಹವಾಸಗಳಿಂದಲೂ ದೂರ ಇರಬೇಕೆಂದು ಸಲಹೆ ನೀಡಿದೆ.

ಅಸಲಿಗೆ, ಇಂಥದ್ದೊಂದು ಸಲಹೆಯನ್ನು ಜನರ ಮುಂದಿಟ್ಟಿದ್ದು ಯೋಗ ನ್ಯಾಚುರೋಪತಿ ಸಂಶೋಧನಾ ಮಂಡಳಿಯ ಅಧ್ಯಕ್ಷರಾದ ಡಾ. ಈಶ್ವರ ಅಯ್ಯರ್ ಅವರು ಎಎನ್ಐನೊಂದಿಗೆ ಮಾತನಾಡುವಾಗ ಇಂಥದ್ದೊಂದು ಸಲಹೆ ಇಟ್ಟಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.

ಈಗ, ಆಯುಷ್ ಇಲಾಖೆಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ''ಗರ್ಭಿಣಿಯರು ಲೈಂಗಿಕತೆ, ಮಾಂಸ ಸೇವನೆಯಿಂದ ದೂರವಿರಬೇಕು. ಇದು ಕೇವಲ ಸಲಹೆಯಷ್ಟೇ. ಪಾಲಿಸಲೇಬೇಕಾದ ಕಡ್ಡಾಯವೇನಿಲ್ಲ'' ಎಂದು ತಿಳಿಸುವ ಮೂಲಕ ಮುಂದಾಗಬಹುದಾದ ಚರ್ಚೆಯ ಮ್ಯಾರಥಾನ್ ಗೆ ತಡೆ ಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+