Get Updates
Get notified of breaking news, exclusive insights, and must-see stories!

ದೇಶಿ ಉದ್ಯಮಕ್ಕೆ ಬೆಂಬಲ; ಸರ್ಕಾರಿ ಖರೀದಿಯಲ್ಲಿ ಜಾಗತಿಕ ಟೆಂಡರ್ ಇಲ್ಲ

ನವದೆಹಲಿ, ಮೇ 13 : ದೇಶಿಯಾ ತಯಾರಿಕೆಗಳನ್ನು ಉತ್ತೇಜಿಸಲು ದೇಶಿಯ ವಸ್ತುಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶಿಯ ಕೈಗಾರಿಕೆಗಳಿಗೆ ಎದುರಾಗುವ ಸ್ಪರ್ಧೆಯನ್ನು ಕಡಿಮೆ ಮಾಡಲು ಸರ್ಕಾರ ಉಪಕ್ರಮವನ್ನು ಘೋಷಣೆ ಮಾಡಿದೆ.

Recommended Video

      20 ಲಕ್ಷ ಕೋಟಿಯಲ್ಲಿ ಯಾರಿಗೆ ಎಷ್ಟು ಎಂದು ವಿವರಿಸಿದ ನಿರ್ಮಲ ಸೀತಾರಾಮನ್ | Nirmala Sitharaman

      ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪತ್ರಿಕಾಗೋಷ್ಠಿ ನಡೆಸಿದರು. ದೇಶವನ್ನು ಉದ್ದೇಶಿಸಿ ನರೇಂದ್ರ ಮೋದಿ ಮಂಗಳವಾರ ಭಾಷಣ ಮಾಡಿದಾಗ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ವಿವರ ನೀಡಿದರು.

      "ಇನ್ನು ಮುಂದೆ 200 ಕೋಟಿಗಳಷ್ಟು ಸರ್ಕಾರಿ ಖರೀದಿಗಳಲ್ಲಿ ಜಾಗತಿಕ ಟೆಂಡರ್‌ಗೆ ಅವಕಾಶ ನೀಡುವುದಿಲ್ಲ. ಈ ಕುರಿತು ಕಾನೂನಿಗೂ ಅಗತ್ಯ ತಿದ್ದುಪಡಿಗಳನ್ನು ತರಲಾಗುತ್ತದೆ" ಎಂದು ಹಣಕಾಸು ಸಚಿವರು ಘೋಷಣೆ ಮಾಡಿದರು.

      No Global Tender In Govt Procurement Upto Rs 200 Crore

      "ಜಾಗತಿಕ ಟೆಂಡರ್‌ಗೆ ಅವಕಾಶ ನೀಡದಿದ್ದರೆ ದೇಶದಲ್ಲಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಇದರಿಂದಾಗಿ ಮೇಕ್ ಇನ್ ಇಂಡಿಯಾಗೂ ಉತ್ತೇಜನ ಸಿಗಲಿದೆ. ಇದು ಭಾರತವನ್ನು ಸ್ವಾವಲಂಬಿಯಾಗಿಯೂ ಮಾಡುತ್ತದೆ" ಎಂದು ವಿವರಿಸಿದರು.

      "ಭಾರತದ ಉದ್ಯಮವನ್ನು ಉಳಿಸಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಗೆಕಗಳಿಗೆ ಎದುರಾಗುವ ಸ್ಪರ್ಧೆಗೆ ತಡೆ ಬೀಳಲಿದೆ. ಇದಕ್ಕಾಗಿ ಹಣಕಾಸು ನಿಯಮಗಳಲ್ಲಿ ಬದಲಾವಣೆ ತರಲಾಗುತ್ತದೆ" ಎಂದು ಸಚಿವರು ತಿಳಿಸಿದರು.

      ಲಾಕ್ ಡೌನ್ ಪರಿಣಾಮ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಉದ್ಯಮಗಳ ಉಳಿವಿಗೆ ಹಲವಾರು ಉಪ ಕ್ರಮಗಳನ್ನು ಘೋಷಣೆ ಮಾಡಿದ ಹಣಕಾಸು ಸಚಿವರು, "ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಚಿಂತಿಸುವ ಅಗತ್ಯವಿಲ್ಲ. ಇವುಗಳ ವ್ಯಾಖ್ಯಾನವೇ ಈಗ ಬದಲಾಗಿದೆ" ಎಂದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+