Get Updates
Get notified of breaking news, exclusive insights, and must-see stories!
Live

No-Confidence Motion LIVE: ನರೇಂದ್ರ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ

ನವದೆಹಲಿ, ಜುಲೈ 26: 2003ರ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಬುಧವಾರ (ಜುಲೈ 26) ಅವಿಶ್ವಾಸ ನಿರ್ಣಯ ಮಂಡನೆ ಆಗಿದೆ. ಕೇಂದ್ರದ ಮೋದಿ ಸರ್ಕಾರದ ದುರಹಂಕಾರವನ್ನು ಮುರಿಯಲು ಮತ್ತು ಮಣಿಪುರದ ಬಗ್ಗೆ ಮಾತನಾಡುವಂತೆ ಮಾಡಲು ಕೊನೆಯ ಅಸ್ತ್ರವನ್ನಾಗಿ ಇದನ್ನು ಬಳಸುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸುತ್ತೇವೆ ಎಂದು ವಿಪಕ್ಷಗಳು ಹೇಳಿವೆ. ಅವಿಶ್ವಾಸ ಗೊತ್ತುವಳಿಯ ನಡಾವಳಿಯ ಲೈವ್ ಅನ್ನು ಈ ಪುಟದಲ್ಲಿ ನೀಡಲಾಗುವುದು.

No-confidence Motion Live Updates in Kannada: Get Latest News Highlights on Parliament Monsoon Session Today

Jul 28, 2023, 3:51 pm IST

ಸದನ ಸೋಮವಾರಕ್ಕೆ ಮುಂದೂಡಿಕೆ

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಗದ್ದಲ ಹೆಚ್ಚಾದ ಹಿನ್ನಲೆಯಲ್ಲಿ ಸದನವನ್ನು ಸೋಮವಾರಕ್ಕೆ (ಜುಲೈ 31) ಮುಂದೂಡಲಾಗಿದೆ. ರಾಜ್ಯಸಭೆಯ ಚೇರ್ಮನ್ ಜಗದೀಪ್ ಧಂಕರ್ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮುಂದೂಡಿದ್ದಾರೆ.
Jul 28, 2023, 11:30 am IST

ಸದನ ಮುಂದೂಡಿಕೆ

ವಿಪಕ್ಷಗಳ ನಾಯಕರು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಗದ್ದಲದ ಕಾರಣಕ್ಕಾಗಿ ಲೋಕಸಭಾ ಅಧಿವೇಶನವನ್ನು ಸ್ಪೀಕರ್ ಮುಂದೂಡಿದ್ದಾರೆ.
Jul 28, 2023, 10:45 am IST

ಮೈತ್ರಿಕೂಟದ ಸದಸ್ಯರ ಪ್ರತಿಭಟನೆ

ಸಂಸತ್ತಿನ ಹೊರಗಡೆ I N D I A ಮೈತ್ರಿಕೂಟದ ಸದಸ್ಯರ ಪ್ರತಿಭಟನೆ. ಮಣಿಪುರದಲ್ಲಿನ ಹಿಂಸಾಚಾರದ ಕುರಿತಂತೆ ಪ್ರಧಾನಿ ಮೋದಿ ಹೇಳಿಕೆಯನ್ನು ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
Jul 28, 2023, 10:37 am IST

I N D I A ಮೈತ್ರಿಕೂಟದ ಸದಸ್ಯರು ಎರಡು ದಿನಗಳ ಕಾಲ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ
Jul 28, 2023, 10:29 am IST

ಕಾಂಗ್ರೆಸ್ ನಾಯಕ ಮಣಿಕಾಮ್ ಠಾಗೋರ್

ಮಣಿಪುರದಲ್ಲಿನ ಅಶಾಂತಿಯಿಂದಾಗಿ ಪ್ರಧಾನಮಂತ್ರಿಗಳು ಅಲ್ಲಿಗೆ ಭೇಟಿ ನೀಡಬೇಕಿತ್ತು, ಆದರೆ ಅವರಿಂದ ಆ ಕೆಲಸ ಆಗುತ್ತಿಲ್ಲ. ಹಾಗಾಗಿ, ಸಂಸದರ ನಿಯೋಗವೊಂದು ಮಣಿಪುರಕ್ಕೆ ಈ ವಾರಾಂತ್ಯದಲ್ಲಿ ಭೇಟಿ ನೀಡಲಿದೆ. ನಿಯೋಗದಲ್ಲಿ ಯಾರು ಯಾರು ಇರಲಿದ್ದಾರೆ ಎನ್ನುವುದು ಇಂದಿನ ಮೀಟಿಂಗ್ ನಂತರ ಬಹಿರಂಗ ಪಡಿಸಲಾಗುವುದು ಎಂದ ಮಣಿಕಾಮ್ ಠಾಗೋರ್
Jul 27, 2023, 9:33 pm IST

ಮಣಿಪುರದ ವಿಚಾರದಲ್ಲಿ ಪ್ರಧಾನಿ ಹೇಳಿಕೆ ನೀಡಲೇಬೇಕು

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲೇ ಬೇಕೆಂದು ಬಿಜೆಪಿ ವಿರೋಧಿ ಒಕ್ಕೂಟದ ಸದಸ್ಯರ ಪ್ರಯತ್ನ ಮುಂದುವರಿಯಲಿದೆ. ಅಲ್ಲಿನ ಹಿಂಸಾಚಾರ ಇತರ ರಾಜ್ಯಗಳಿಗೆ ಹರಡುವ ಮುನ್ನ ಪ್ರಧಾನಿ ಹೇಳಿಕೆ ನೀಡಲಿ ಎಂದು ಉದ್ಧವ್ ಠಾಕ್ರೆ ಬಣದ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
Jul 27, 2023, 5:11 pm IST

ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023ಗೆ ರಾಜ್ಯಸಭೆಯಲ್ಲಿ ಆಂಗೀಕಾರ

ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023 ಅನ್ನು ರಾಜ್ಯಸಭೆ ಅಂಗೀಕರಿಸಿದೆ, ಇದು ಪೈರಸಿಗಾಗಿ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸುವ ಮಸೂದೆಯಾಗಿದೆ. ರಾಜ್ಯಸಭೆಯಲ್ಲಿ ಸಿನೆಮ್ಯಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023 ಕುರಿತು ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, “ಪೈರಸಿ ಎನ್ನುವುದು ಕ್ಯಾನ್ಸರ್ ಇದ್ದಂತೆ, ಸರ್ಕಾರ ಈ ಮಸೂದೆಯ ಮೂಲಕ ಅದನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಮುಂದಾಗಿದೆ" ಎಂದು ಹೇಳಿದ್ದಾರೆ.
Jul 27, 2023, 4:30 pm IST

ಲೋಕಸಭೆಯಲ್ಲಿ ಜನ ವಿಶ್ವಾಸ್ ಮಸೂದೆ ಮಂಡನೆ

ಮಣಿಪುರ ವಿಷಯದ ಬಗ್ಗೆ ಪ್ರತಿಪಕ್ಷಗಳ ಘೋಷಣೆಗಳ ನಡುವೆ ಸದನ ಮಧ್ಯಾಹ್ನ 3 ಗಂಟೆಗೆ ಪುನರಾರಂಭಗೊಂಡಿತು. ಜಂಟಿ ಸಮಿತಿಯು ವರದಿ ಮಾಡಿದಂತೆ ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2023 ಅನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.
Jul 27, 2023, 4:07 pm IST

'ಸಂಸತ್ತಿನಲ್ಲಿ ಮಾತಿಲ್ಲ, ಆದರೆ ರಾಜಸ್ಥಾನದಲ್ಲಿ ರಾಜಕೀಯ ಮಾತಾಡುತ್ತಾರೆ': ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಸಂಸತ್ತಿನಲ್ಲಿ (ಮಣಿಪುರ ವಿಷಯದ ಬಗ್ಗೆ) ಮಾತನಾಡಲು ಪ್ರಧಾನಿ ಮೋದಿ ಬಯಸುವುದಿಲ್ಲ ಆದರೆ ರಾಜಸ್ಥಾನದಲ್ಲಿ ರಾಜಕೀಯ ಭಾಷಣ ಮಾಡುತ್ತಾರೆ ಎಂದು ಹೇಳಿದ್ದಾರೆ.
Jul 27, 2023, 3:45 pm IST

ಪ್ರಲ್ಹಾದ್ ಜೋಶಿ ಮಸೂದೆ ಮಂಡನೆ

ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಕಡಲಾಚೆಯ ಪ್ರದೇಶಗಳ ಖನಿಜ ಕಾನೂನನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆಯ ಸಚಿವ ಪ್ರಲ್ಹಾದ್ ಜೋಶಿ ಮಸೂದೆಯನ್ನು ಮಂಡಿಸಿದರು.
Jul 27, 2023, 3:28 pm IST

ಮಣಿಪುರಕ್ಕೆ ಭೇಟಿ ನೀಡಲಿರುವ ವಿಪಕ್ಷದ ನಾಯಕರು
Jul 27, 2023, 3:13 pm IST

ಮೋದಿ ಸರ್ಕಾರ ಅಧಿಕಾರದಲ್ಲಿ ಇರಬಾರದು

ಮಣಿಪುರದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಅರಿತುಕೊಳ್ಳಬೇಕು ಮತ್ತು ಇನ್ನು ಮುಂದೆ ಅಧಿಕಾರದಲ್ಲಿ ಉಳಿಯಬಾರದು, ಮಣಿಪುರದ ಇಂದಿನ ಪರಿಸ್ಥಿತಿಗೆ ಬಿಜೆಪಿಯ ವೋಟ್ ಬ್ಯಾಂಕ್ ರಾಜಕೀಯವೇ ಕಾರಣ ಎಂದ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್.
Jul 27, 2023, 1:11 pm IST

'ರಾಷ್ಟ್ರೀಯ ಹಿತಾಸಕ್ತಿ ಬಂದಾಗ ರಾಜಕೀಯವನ್ನು ಬದಿಗಿರಿಸಿ' ಜೈಶಂಕರ್

ಭಾರತದ ವಿದೇಶಾಂಗ ನೀತಿಯ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ರಾಜ್ಯಸಭೆಯಲ್ಲಿ ಭಾಷಣ ಮಾಡುವಾಗ, ಮಣಿಪುರ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿಯವರ ಪ್ರತಿಕ್ರಿಯೆಯನ್ನು ಕೋರುತ್ತಿರುವ ಪ್ರತಿಪಕ್ಷ ನಾಯಕರು ಜೋರಾಗಿ ಘೋಷಣೆಗಳನ್ನು ಕೂಗುವ ಮೂಲಕ ಅಡ್ಡಿಪಡಿಸಿದರು. ತಮ್ಮ ಭಾಷಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೈಶಂಕರ್,' ಇಂದಿನ ಪ್ರತಿಪಕ್ಷಗಳ ನಡವಳಿಕೆಯನ್ನು ಗಮನಿಸಬೇಕು. ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ರಾಜಕೀಯ ಬಿಡಬೇಕು, ರಾಜಕೀಯವನ್ನು ಬದಿಗಿಡಬೇಕು' ಎಂದು ಹೇಳಿದರು.
Jul 27, 2023, 12:23 pm IST

ವಿರೋಧ ಪಕ್ಷದ ಕಪ್ಪು ಬಟ್ಟೆ ಬಗ್ಗೆ ಪಿಯೂಷ್ ಗೋಯಲ್ ಕಿಡಿ

ಭಾರತದ ವಿದೇಶಾಂಗ ನೀತಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಇಎಎಂ ಜೈಶಂಕರ್ ಹೇಳಿಕೆಯನ್ನು ಅನುಸರಿಸಿ, ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್ ಅವರು ವಿರೋಧ ಪಕ್ಷದ ಸಂಸದರು ಧರಿಸಿರುವ ಕಪ್ಪು ಬಟ್ಟೆಗಳನ್ನು ಉದ್ದೇಶಿಸಿ ಮಾತನಾಡಿದರು. ಇಂತಹ ಗಂಭೀರ ವಿಷಯದಲ್ಲೂ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದು ಗೋಯಲ್ ಬೇಸರ ವ್ಯಕ್ತಪಡಿಸಿದರು. ಇದು ಭಾರತದ ಗೌರವದ ಪ್ರಶ್ನೆ, ಜಾಗತಿಕ ವೇದಿಕೆಯಲ್ಲಿ ಭಾರತದ ಉದಯೋನ್ಮುಖ ಚಿತ್ರಣಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಕಪ್ಪು ಬಟ್ಟೆಯನ್ನು ಧರಿಸುವವರು ನಮ್ಮ ದೇಶದ ಬೆಳೆಯುತ್ತಿರುವ ಶಕ್ತಿಯನ್ನು ಗ್ರಹಿಸಲು ವಿಫಲರಾಗಿದ್ದಾರೆ ಎಂದರು.
Jul 27, 2023, 11:38 am IST

ಪ್ರತಿಪಕ್ಷಗಳು ಕೂಗುತ್ತಿರುವ ಕೆಲವು ಘೋಷಣೆಗಳು

‘Pradhan Mantri sadan me aao’, ‘Pradhan Mantri chuppi todo’, ‘Pradhan Mantri hosh me aao’ : ಮಣಿಪುರದ ವಿಚಾರದಲ್ಲಿ ಕೇಂದ್ರದ ಮೌನವನ್ನು ವಿರೋಧಿಸಿ ಪ್ರತಿಪಕ್ಷಗಳು ಕೂಗುತ್ತಿರುವ ಕೆಲವು ಘೋಷಣೆಗಳು ಇವು. ಪ್ರಧಾನಿ ಮೋದಿಯವರು ಸದನದಲ್ಲಿ ಹಾಜರಾಗಿ ಉತ್ತರ ನೀಡುವಂತೆ ಸದಸ್ಯರ ಒತ್ತಾಯ.
Jul 27, 2023, 11:32 am IST

ಸದನ ಮತ್ತೆ ಮುಂದೂಡಿಕೆ

ಮಣಿಪುರ ಹಿಂಸಾಚಾರದ ಬಗ್ಗೆ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲದೊಂದಿಗೆ ಸಂಸತ್ ಅಧಿವೇಶನ ಪುನರಾರಂಭವಾಯಿತು, ಆದರೆ, ಗದ್ದಲದಿಂದಾಗಿ ಲೋಕಸಭೆಯನ್ನು ಮಧ್ಯಾಹ್ನ 2:00 ಕ್ಕೆ ಮುಂದೂಡಲಾಯಿತು. ವಿರೋಧ ಪಕ್ಷದ ಸಂಸದರ ವರ್ತನೆ ಸದನದ ನೈತಿಕತೆಗೆ ಅನುಗುಣವಾಗಿಲ್ಲ ಎಂದ ಸ್ಪೀಕರ್ ಓಂ ಬಿರ್ಲಾ .
Jul 27, 2023, 9:50 am IST

ಮಣಿಪುರಕ್ಕೆ ಬೆಂಕಿ ಹಚ್ಚಿಲು ರಾಹುಲ್‌ ಗಾಂಧಿಯೇ ಕಾರಣ- ಸ್ಮೃತಿ ಇರಾನಿ

ರಾಜ್ಯಸಭೆಯಲ್ಲಿ ಭಾಷಣ ಮಾಡುವಾಗ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸಮಸ್ಯೆಗಳನ್ನು ಪರಿಹರಿಸಲು ಪ್ರತಿಪಕ್ಷಗಳಿಗೆ ಧೈರ್ಯವಿಲ್ಲ ಎಂದು ಆರೋಪಿಸಿದರು. ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಣಿಪುರಕ್ಕೆ ಬೆಂಕಿ ಹಚ್ಚಲು ರಾಹುಲ್ ಗಾಂಧಿಯೇ ಕಾರಣ ಎಂದು ಆರೋಪಿಸಿದರು.
Jul 27, 2023, 9:04 am IST

ಮೆಜಾರಿಟಿ ಸಾಧಿಸಲು 272 ಸಂಖ್ಯಾಬಲದ ಅವಶ್ಯಕತೆಯಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟ 332 ಸ್ಥಾನವನ್ನು ಹೊಂದಿದೆ. ಬಿಜೆಪಿ ಮಾತ್ರ 301 ಸ್ಥಾನವನ್ನು ಹೊಂದಿದೆ. ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಳ್ಳದ ಪಕ್ಷಗಳ ಒಟ್ಟು ಸ್ಥಾನ 41.
Jul 27, 2023, 9:01 am IST

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಸ್ಪೀಕರ್ ಅಸ್ತು ಎಂದಿದ್ದಾರೆ. ಸಮಯ ಮತ್ತು ದಿನ ಇನ್ನೂ ನಿಗದಿ ಆಗಬೇಕಷ್ಟೇ. ಈಗಿನ ಸಂಖ್ಯಾಬಲದ ಪ್ರಕಾರ ಮೋದಿ ಸರ್ಕಾರಕ್ಕೆ ಕ್ಲಿಯರ್ ಮೆಜಾರಿಟಿಯಿದೆ.
Jul 26, 2023, 9:12 pm IST

ಗೃಹಸಚಿವ ಅಮಿತ್ ಶಾ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ!

ದೇಶದ ಮೂಲೆ ಮೂಲೆಯಲ್ಲೂ ಈಗ ಮಣಿಪುರ ಹಿಂಸಾಚಾರ ಪ್ರತಿಧ್ವನಿಸುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಇದೇ ಅಸ್ತ್ರ ಬಳಸಿ ವಾಗ್ದಾಳಿ ನಡೆಸುತ್ತಿವೆ. ಇದೇ ಹೊತ್ತಲ್ಲಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅಸಮಾಧಾನ ಹೊರಹಾಕಿದ್ದಾರೆ. ಹಾಗಾದರೆ ಖರ್ಗೆ ಅವರ ಪತ್ರದಲ್ಲಿ ಇರುವ ಅಂಶವಾದರೂ ಏನು? ಬನ್ನಿ ತಿಳಿಯೋಣ.
Jul 26, 2023, 4:09 pm IST

'Jhooth bole...'ಆಮ್ ಆದ್ಮಿ ಸಂಸದರ ತಲೆಗೆ ಹೊಡೆದ ಕಾಗೆ!

ಆಮ್ ಆದ್ಮಿ ಪಕ್ಷದ ಯುವ ಸಂಸದ ರಾಘವ್ ಚಾಧಾ ಅವರ ಮೇಲೆ ಕಾಗೆಯೊಂದು ದಾಳಿ ಮಾಡಿದೆ. ಈ ಅನಿರೀಕ್ಷಿತ ಹಾಗೂ ಆಶ್ಚರ್ಯಕರ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಇದನ್ನು ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಬೆಂಬಲಿಗರು, `ಸುಳ್ಳು ಹೇಳಿದರೆ ಕಾಗೆ ನಿಮ್ಮ ಮೇಲೆ ದಾಳಿ ಮಾಡುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.
Jul 26, 2023, 3:45 pm IST

ಲೋಕಸಭಾ ಅಧಿವೇಶನವನ್ನು ನಾಳೆ (ಜುಲೈ 27) ಬೆಳಗ್ಗೆ ಹನ್ನೊಂದು ಗಂಟೆಗೆ ಸ್ಪೀಕರ್ ಮುಂದೂಡಿದ್ದಾರೆ
Jul 26, 2023, 3:22 pm IST

2023ರಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧರಾಗುವಂತೆ ಪ್ರಧಾನಿ ಮೋದಿ 2018ರಲ್ಲಿಯೇ ಒತ್ತಾಯಿಸಿದ ವಿಡಿಯೋ
Jul 26, 2023, 3:11 pm IST

ಈವರೆಗೆ 27 ಬಾರಿ ಅವಿಶ್ವಾಸ ನಿರ್ಣಯ ಮಂಡನೆ

ಸ್ವಾತಂತ್ರ್ಯ ಬಂದ ನಂತರ ಲೋಕಸಭೆಯಲ್ಲಿ 27 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. 1963 ರಲ್ಲಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ವಿರುದ್ಧ ಮೊದಲ ಅವಿಶ್ವಾಸ ನಿರ್ಣಯ ಮಂಡನೆ ಆಯಿತು. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರು ಸುಮಾರು 15 ಅವಿಶ್ವಾಸ ನಿರ್ಣಯಗಳನ್ನು ಎದುರಿಸುವ ಮೂಲಕ ಅತೀ ಹೆಚ್ಚು ಅವಿಶ್ವಾಸ ಎದುರಿಸಿದ ಮೊದಲಿಗರಾಗಿದ್ದಾರೆ. ಅವರ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಪಿವಿ ನರಸಿಂಹ ರಾವ್ ಅವರು ತಲಾ ಮೂರು ಅವಿಶ್ವಾಸ ಎದುರಿಸಿದ್ದಾರೆ. 2003ರ ಅವಿಶ್ವಾಸ ಗೊತ್ತುವಳಿ ಮಂಡನೆ ಬಳಿಕ 2023ರಲ್ಲಿ ಆಗಿದೆ.
Jul 26, 2023, 2:30 pm IST

ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅನುಮತಿ
Jul 26, 2023, 2:24 pm IST

ಅಮಿತ್‌ ಶಾಗೆ ಪತ್ರ ಬರೆದ ಖರ್ಗೆ

ಮಣಿಪುರ ವಿವಾದದ ಬಗ್ಗೆ ಸಂಸತ್ತಿನಲ್ಲಿ ನಡೆದ ಜಗಳದ ಬಗ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. "ನಾವು ಸಂಸತ್ತಿಗೆ ಬಂದು ಮಾತನಾಡಲು ಪ್ರಧಾನಿಯನ್ನು ಒತ್ತಾಯಿಸುತ್ತಿದ್ದೇವೆ. ಆದರೆ ಅದು ಅವರ ಪ್ರತಿಷ್ಠೆಗೆ ಧಕ್ಕೆ ತರುತ್ತದೆ. ನಾವು ಈ ದೇಶದ ಜನತೆಗೆ ಬದ್ಧರಾಗಿದ್ದೇವೆ ಮತ್ತು ಅದಕ್ಕೆ ನಾವು ಬೆಲೆ ತೆರುತ್ತೇವೆ. ದೀರ್ಘಕಾಲ ಅಧಿಕಾರದಲ್ಲಿದ್ದರೂ ಆಡಳಿತ ಹಾಗೂ ವಿರೋಧ ಪಕ್ಷಗಳ ನಡತೆಯ ದಾಖಲೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವುದು ನಮಗೆ ತಿಳಿದಿದೆ ” ಎಂದು ಪತ್ರದಲ್ಲಿ ಬರೆಯಲಾಗಿದೆ.
Jul 26, 2023, 2:23 pm IST

ಸಂಸತ್ತಿನ ಹೊರಗೆ ಕಾಂಗ್ರೆಸ್ ಸಂಸದರ ಪ್ರತಿಭಟನೆ

ಪ್ರವಾಹ ಪೀಡಿತ ಪಂಜಾಬ್‌ಗೆ 20,000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ಬುಧವಾರ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
Jul 26, 2023, 2:21 pm IST

ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್ ಅನುಮತಿ

ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅನುಮತಿ ನೀಡಿದ್ದಾರೆ. ಇದಕ್ಕಾಗಿ ದಿನಾಂಕ ಮತ್ತು ಸಮಯ ಇನ್ನೂ ಸ್ಪೀಕರ್ ಇನ್ನೂ ನಿರ್ಧರಿಸಿಲ್ಲ. ಮುಂಗಾರು ಅಧಿವೇಶನದ 13 ದಿನಗಳು ಮಾತ್ರ ಉಳಿದಿವೆ.
Jul 26, 2023, 2:20 pm IST

ಎಲ್ಲಾ ಪಕ್ಷದ ನಾಯಕರ ಜೊತೆಗೆ ಚರ್ಚೆ

ಲೋಕಸಭೆ ಸ್ಪೀಕರ್ ಕಾರ್ಯವಿಧಾನದ ಪ್ರಕಾರ ಅವಿಶ್ವಾಸ ನಿರ್ಣಯದ ಚರ್ಚೆಯನ್ನು ನಿಗದಿಪಡಿಸಲು 10 ದಿನಗಳವರೆಗೆ ತೆಗೆದುಕೊಳ್ಳಬಹುದಾಗಿದೆ. ಎಲ್ಲಾ ಪಕ್ಷದ ನಾಯಕರ ಜೊತೆಗೆ ಚರ್ಚಿಸಿ ದಿನಾಂಕ ನಿಗದಿ ಪಡಿಸುವುದಾಗಿ ಸ್ಪೀಕರ್ ಹೇಳಿದ್ದಾರೆ.
Jul 26, 2023, 2:20 pm IST

ಪ್ರಧಾನಿ ಮೋದಿಯ ಹಳೆಯ ವಿಡಿಯೋ ವೈರಲ್

2023ರಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧರಾಗುವಂತೆ ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ 2018ರಲ್ಲಿಯೇ ಒತ್ತಾಯಿಸುತ್ತಿರುವು ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದಂತೆಯೇ ಹಳೆಯ ವಿಡಿಯೋ ಮುನ್ನಲೆಗೆ ಬಂದಿದೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+