ನಿಥಾರಿ ಮಕ್ಕಳ ಸರಣಿ ಹಂತಕ ಸುರೇಂದ್ರ ಕೋಲಿಗೆ ಗಲ್ಲು ಶಿಕ್ಷೆ
ಘಾಜಿಯಾಬಾದ್, ಅಕ್ಟೋಬರ್ 07: ನಿಥಾರಿ ಮಕ್ಕಳ ಸರಣಿ ಹಂತಕ ಸುರೇಂದ್ರ ಕೋಲಿಗೆ ಗಾಜಿಯಾಬಾದ್ ವಿಶೇಷ ಸಿಬಿಐ ನ್ಯಾಯಾಲಯದಿಂದ ಗಲ್ಲುಶಿಕ್ಷೆ ಘೋಷಿಸಲಾಗಿದೆ. ನಂದಾದೇವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5ರಂದು ಕೋಲಿಯನ್ನು ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿತ್ತು.
2005ರಲ್ಲಿ 14 ವರ್ಷದ ಬಾಲಕಿ ರಿಂಪಾ ಹಲ್ದಾರ್‌ಳ ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ಸುರೇಂದ್ರ ಕೋಲಿಗೆ ಡೆತ್ ವಾರೆಂಟ್ ಜಾರಿಯಾಗಿತ್ತು. ಈ ಪ್ರಕರಣದಲ್ಲೂ ಗಲ್ಲು ಶಿಕ್ಷೆ ವಿಧಿಸಲಾಗಿದೆ. [ನರಭಕ್ಷಕ ಮಣಿಂದರ್ , ಸುರಿಂದರ್ ಗೆ ಮರಣದಂಡನೆ]

ಈ ಹಿಂದೆ ರಿಂಪಾ ಹಲ್ದಾರ್‌ಳ ಹತ್ಯೆ ಪ್ರಕರಣದಲ್ಲಿ ಕೆಲ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಸಹ ಖಾಯಂಗೊಳಿಸಿತ್ತು. ಅಲ್ಲದೆ ಸುರೇಂದ್ರ ಕೋಲಿಯಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯರ ಪೈಕಿ ರಿಂಪಾ ಹಲ್ದಾರ್‌ಳ ಕಗ್ಗೊಲೆ ಪ್ರಕರಣವು ಅತ್ಯಂತ ಭೀಭತ್ಸ ಹಾಗೂ ಬರ್ಬರವಾಗಿದ್ದು, ಆರೋಪಿಗೆ ಮರಣದಂಡನೆಯೇ ಸೂಕ್ತವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.[ನರಭಕ್ಷಕನಿಗೆ ಡೆತ್ ವಾರೆಂಟ್]
ಘಾಜಿಯಾಬಾದಿನ ಜೈಲಿನಲ್ಲಿರುವ 44 ವರ್ಷ ವಯಸ್ಸಿನ ಸುರೇಂದರ್ ಕೋಲಿ ಅವರನ್ನು ಗಲ್ಲಿಗೇರಿಸಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಸುರೇಂದ್ರ ಕೋಲಿಗೆ ಐದು ಪ್ರಕರಣಗಳಲ್ಲಿ ಗಲ್ಲುಶಿಕ್ಷೆ ನೀಡಲಾಗಿದೆ. ಕೋಲಿ ವಿರುದ್ಧ ಇನ್ನು 16 ಪ್ರಕರಣಗಳು ದಾಖಲಾಗಿದ್ದು, ಮಿಕ್ಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಎಲ್ಲಾ ಪ್ರಕರಣಗಳಲ್ಲೂ ಇಬ್ಬರ ಮೇಲೆ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ. ಈ ಸೈಕೋ ಕಿಲ್ಲರ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದರು. ಇದೇ ಅಲ್ಲದೆ ಮೃತ ಬಾಲಕಿಯರ ದೇಹವನ್ನು ಭಕ್ಷಿಸುವಷ್ಟು ಇತ ಕ್ರೂರಿಯಾಗಿದ್ದಾನೆ.
ದೆಹಲಿಯ ಹೊರವಲಯದಲ್ಲಿರುವ ನೋಯ್ಡಾ ಪರಿಸರದ ನಿವಾಸಿಯಾಗಿದ್ದ ರಿಂಪಾ 2005ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು. 2006ರಲ್ಲಿ ಪಂಧೇರ್‌ನ ನಿವಾಸದ ಹಿಂದಿರುವ ಚರಂಡಿಯಲ್ಲಿ ಹಲವಾರು ಮಾನವ ಅವಶೇಷಗಳು ಪತ್ತೆಯಾದ ನಂತರ ಸರಣಿ ಕಗ್ಗೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ರಿಂಪಾ ಹತ್ಯೆ ಪ್ರಕರಣದಲ್ಲಿ ಸುರಿಂದರ್ ಕೋಲಿ ಸಹಪಾತಕಿ ಮೊನಿಂದರ್ ಸಿಂಗ್ ಪಂಧೇರ್ ಗೆ ಅಲಹಾಬಾದ್ ಹೈ ಕೋರ್ಟಿನಿಂದ ಜೀವದಾನ ಸಿಕ್ಕಿದೆ. (ಪಿಟಿಐ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications