SIR ವಿರುದ್ಧ ನಾಳೆ ಸಮರ: CJP ನಾಯಕರ ಜತೆ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪರಕಲಾ ಪ್ರಭಾಕರ್ ಭಾಗಿ
ನವದೆಹಲಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ದೇಶದ ಹಲವೆಡೆ ಪ್ರತಿಭಟನೆ ಮುಂದುವರಿದಿದೆ. ಶುಕ್ರವಾರ (ಅಕ್ಟೋಬರ್ 23) 'ಪೀಪಲ್ ಅಗೇನ್ಸ್ಟ್ ಎಸ್‌ಐಆರ್ ಅಲೈಯನ್ಸ್' ಎಂಬ ಒಕ್ಕೂಟದ ಅಡಿಯಲ್ಲಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ CJP ನಾಯಕರು ಸೇರಿದಂತೆ ಹಲವು ಕಾರ್ಯಕರ್ತರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ವಿಶೇಷವೆಂದರೆ ಕೇಂದ್ರ ಬಿಜೆಪಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪರಕಲಾ ಪ್ರಭಾಕರ್ ಅವರು ಭಾಗಿಯಾಗಲಿದ್ದಾರೆ.
ಹೌದು, ಸಿಜೆಪಿಯ ಸಂಸ್ಥಾಪಕ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ನಟ-ಕಾರ್ಯಕರ್ತ ಪ್ರಕಾಶ್ ರಾಜ್ ಅವರೊಂದಿಗೆ ವಿತ್ತ ಸಚಿವರ ಪತಿ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಪರಕಲಾ ಪ್ರಭಾಕರ್ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಎಸ್‌ಐಆರ್ ರದ್ದುಪಡಿಸುವ ಜೊತೆಗೆ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಅವರೂ ಕೂಡ ಆಗ್ರಹಿಸಲಿದ್ದಾರೆ.

ಇದೇ ಪ್ರತಿಭಟನೆ ವಿಚಾರವಾಗಿ ಪ್ರಭಾಕರ್ ಅವರು ಎಕ್ಸ್ ಪೋಸ್ಟ್ ಮಾಡಿದ್ದು, "ಹರ್ ಗಲಿ ಮೇ ಜಂತರ್ ಮಂತರ್! ಅಕ್ಟೋಬರ್ 23ರಂದ ಶುಕ್ರವಾರ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಜನರ ಮೆರವಣಿಗೆ ನಡೆಯಲಿದೆ, ನಾವು ಸವಾಲು ಸ್ವೀಕರಿಸೋಣ" ಎಂದು ಸರ್ಕಾರದ ಆರ್ಥಿಕ ನೀತಿಗಳ ತೀವ್ರವಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ.
ಇನ್ನೂ ಪ್ರತಿಭಟನೆ, ಮೆರೆವಣಿಗೆಯಲ್ಲಿ ಅರ್ಥಶಾಸ್ತ್ರಜ್ಞ ಮತ್ತು ಲೇಖಕರು ಹಿರಿಯ ವಕೀಲ ಪ್ರಶಾಂತ್ ಭೂಷಣ್, ರೈತ ನಾಯಕ ರಾಕೇಶ್ ಟಿಕಾಯತ್, ಎಐಎಸ್ಎ ಅಧ್ಯಕ್ಷ ನೇಹಾ ಬೋರಾ ಮತ್ತು ಲೇಖಕ ತುಷಾರ್ ಗಾಂಧಿ ಅವರು ಆಗಮಿಸುವ ನಿರೀಕ್ಷೆ ಇದೆ. 'ಪೀಪಲ್ ಅಗೇನ್ಸ್ಟ್ ಎಸ್‌ಐಆರ್ ಅಲೈಯನ್ಸ್' ಮೈತ್ರಿಕೂಟವು ಭಾರತ ಬ್ಲಾಕ್ ಪಕ್ಷಗಳಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ, ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದೆ.
ಪ್ರಭಾಕರ್ ಅವರ ಕುರಿತು..
ಆಂಧ್ರ ಪ್ರದೇಶದ ನರಸಪುರದಲ್ಲಿ ಜನಿಸಿದ ಪ್ರಭಾಕರ್ ಅವರು, ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಕೆಲಸ ಮಾಡುವ ಸಂದರ್ಭದಲ್ಲಿ ಇಂದಿನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದರು. ಈ ದಂಪತಿಯ ರಾಜಕೀಯ ಒಲವುಗಳು, ಅಭಿಪ್ರಾಯ ಭಿನ್ನವಾಗಿದ್ದರೂ, ಇವರು 1986 ರಲ್ಲಿ ವಿವಾಹವಾದರು.
ಪ್ರಭಾಕರ್ ಅವರು ರಾಜಕೀಯದೊಂದಿಗೆ ಒಂದಷ್ಟು ನಂಟು ಹೊಂದಿದ್ದಾರೆ. 2009ಕ್ಕೂ ಮೊದಲು ಅವರು ನಟ ಚಿರಂಜೀವಿ ಸ್ಥಾಪಿಸಿದ ಪ್ರಜಾ ರಾಜ್ಯಂ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. 2014 ರಿಂದ 2018 ರವರೆಗೆ, ಪ್ರಭಾಕರ್ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಆಂಧ್ರ ಸರ್ಕಾರಕ್ಕೆ ಸಂವಹನ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ರಾಜಕೀಯದಲ್ಲೂ ಅವರು ಗುರುತಿಸಿಕೊಂಡಿದ್ದಾರೆ. 2018 ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇವರು ರಾಜ್ಯದ ಹಿತಾಸಕ್ತಿಗಳ ಬಗ್ಗೆ ಎಂದೂ ರಾಜಿ ಮಾಡಿಕೊಳ್ಳದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
SIR ವಿರುದ್ಧ ದೇಶದಲ್ಲಿ ಇದೇ ಅಕ್ಟೋಬರ್ 14ರಂದು ತ್ವರಿತವಾಗಿ ಮೈತ್ರಿಕೂಟ ನಿರ್ಮಾಣವಾಗಿದೆ. ಹೊಸದಾಗಿ ರೂಪುಗೊಂಡ ಮೈತ್ರಿಕೂಟವನ್ನು ಪ್ರಮುಖ ವ್ಯಕ್ತಿಗಳು ಬೆಂಬಲಿಸಿದ್ದು, ಅದರಲ್ಲಿ ಪ್ರಭಾಕರ್ ಅವರು ಒಬ್ಬರು. ಸದ್ಯ ವಿದ್ಯಾರ್ಥಿಗಳು, ರೈತರು, ದಲಿತರು, ಆದಿವಾಸಿಗಳು, ಕಾರ್ಯಕರ್ತರು, ಅಲ್ಪಸಂಖ್ಯಾತರ ವಿವಿಧ ಪ್ರಮುಖರನ್ನು SIR ವಿರುದ್ಧ ಒಂದೇ ವೇದಿಕೆಯಡಿ ಈ ಮೈತ್ರಿಕೂಟವು ತರುತ್ತಿದೆ.


Click it and Unblock the Notifications
