ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಖಾಲಿ ಬಿಂದಿಗೆ ಸಾಲು

Subscribe to Oneindia Kannada

ನವದೆಹಲಿ, ಏಪ್ರಿಲ್, 27: ಕುಡಿಯುವ ನೀರಿಗೆ ಎಲ್ಲೆಲ್ಲೂ ಹಾಹಾಕಾರ, ಬಿರು ಬೇಸಿಗೆ, ಹೈದರಾಬಾದ್ ನಲ್ಲಿ ಕಾಣಿಸಿಕೊಂಡು ಮರೆಯಾದ ವರುಣ, ಹದಗೆಟ್ಟ ಮಹಾರಾಷ್ಟ್ರದ ಸ್ಥಿತಿ..ಹುಬ್ಬಳ್ಳಿಯಲ್ಲಿ ಖಾಲಿ ಬಿಂದಿಗೆಗಳ ಸಾಲು. ಇದು ಬಿರು ಬೇಸಿಗೆಯ ಚಿತ್ರಣ ಮತ್ತು ಪರಿಣಾಮ.

ದಕ್ಷಿಣ ಭಾರತದ ಮೊಟ್ಟ ಮೊದಲ ಮೆಟ್ರೋ ಸುರಂಗ ಮಾರ್ಗದ ಸಂಚಾರಕ್ಕೆ ಅಣಿಯಾಗಿರುವ ಬೆಂಗಳೂರು. ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ, ಐಶ್ವರ್ಯ ರೈ ಬೆಡಗು ಬಿನ್ನಾಣ,,, ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ..[ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ವಿಶೇಷತೆಗಳು]

ಹೀಗೆ ಸುದ್ದಿಗಳ ಸರಣಿ ಮುಂದುವರಿಯುತ್ತದೆ. ದೇಶ-ವಿದೇಶ, ರಾಜ್ಯದ ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒಂದು ಪಕ್ಷಿ ನೋಟ ಇಲ್ಲಿದೆ. (ಚಿತ್ರಗಳು-ಪಿಟಿಐ)

ಮುಂದ್ ಹೆಂಗ?

ಮುಂದ್ ಹೆಂಗ?

ಇದು ಹುಬ್ಬಳ್ಳಿಯ ಭಂಡಿವಾಡ ಗ್ರಾಮದಲ್ಲಿ ಕಂಡುಬಂದ ದೃಶ್ಯ. ಕುಡಿಯವ ನೀರಿನ ನೀರಿನ ನೀರಿಕ್ಷೆಯಲ್ಲಿ ಖಾಲಿ ಕೊಡಗಳ ಸಾಲು ಹಚ್ಚಿ ಕುಳಿತ ಮಹಿಳೆಯರು.

 ಮೆಟ್ರೋ ಸಿದ್ಧ

ಮೆಟ್ರೋ ಸಿದ್ಧ

ದಕ್ಷಿಣ ಭಾರತದ ಮೊಟ್ಟ ಮೊದಲ ಮೆಟ್ರೋ ಸುರಂಗ ಮಾರ್ಗದ ಸಂಚಾರಕ್ಕೆ ಅಣಿಯಾಗಿರುವ ಬೆಂಗಳೂರು.

 ಗಂಭೀರ ಮೋದಿ

ಗಂಭೀರ ಮೋದಿ

ಬುಧವಾರ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ.

ಸ್ವಾಮಿ ಹೊಸ ರೂಪ

ಸ್ವಾಮಿ ಹೊಸ ರೂಪ

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಬ್ರಮಣಿಯನ್ ಸ್ವಾಮಿ ಮಾತಿನ ವೈಖರಿ.

ಪ್ರಿಯಾಂಕಾ ಬೆಡಗು

ಪ್ರಿಯಾಂಕಾ ಬೆಡಗು

ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವದ ಟಾಪ್ 100 ಪ್ರಭಾವಿಗಳು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಿಯಾಂಕಾ ಛೋಪ್ರಾ.

ದಿಂಡಾ ಸಂಭ್ರಮ

ದಿಂಡಾ ಸಂಭ್ರಮ

ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ವಿಕೆಟ್ ಕಿತ್ತ ಬಳಿಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಬೌಲರ್ ಅಶೋಕ್ ದಿಂಡಾ ಸಂಭ್ರಮ.

ಅಲ್ಲಿ ನೋಡು!

ಅಲ್ಲಿ ನೋಡು!

ಹೈದರಾಬಾದ್ ಮತ್ತು ಪುಣೆ ನಡುವಣ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಶಿಖರ್ ಧವನ್ ಪತ್ನಿ ಅಯೇಷಾ ಮಗುವಿನೊಂದಿಗೆ ಕಂಡಿದ್ದು ಹೀಗೆ.

 ಮೊದಲ ಮಳೆ

ಮೊದಲ ಮಳೆ

ಬಿರು ಬೇಸಿಗೆಯ ನಡುವೆಯೂ ಹೈದಾರಾದ್ ನಲ್ಲಿ ಮಳೆಯಾದ ವೇಳೆ ಕಂಡು ಬಂದ ದೃಶ್ಯ.

 ಕಪೂರ್ ಗೆ ಯಾರು ಸಾಟಿ?

ಕಪೂರ್ ಗೆ ಯಾರು ಸಾಟಿ?

ನಟ ಟೈಗರ್ ಶರೋಫ್ ಮತ್ತು ನಟಿ ಶ್ರದ್ಧಾ ಕಪೂರ್ ತಮ್ಮ ಮುಂದಿನ ಸಿನಿಮಾ "ಭಾಗಿ" ಪ್ರಮೋಶನ್ ವೇಳೆ ನೃತ್ಯ ಮಾಡಿ ಸಂಭ್ರಮಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: People wait with their pots to collect water at drought-hit Bhandivad village in Hubballi. Metro workers give finishing touches at Underground Cubbon park metro station in Bengaluru.
Please Wait while comments are loading...