ಬಿಸಿಸಿಐಗೆ ಹೊಸ ನೀರು, ದುರ್ಗಾರಾಧನೆಗೆ ಕೋಲ್ಕತ್ತಾ ಸಜ್ಜು

ನವದೆಹಲಿ, ಅಕ್ಟೋಬರ್. 05: ಪ್ರತಿಭಟನೆ, ಸಭೆ-ಸಮಾರಂಭ, ಕಲಾವಿದರ ಹೊಸತನ, ಜಾಗೃತಿ ಚಟುವಟಿಕೆಗಳು ದೇಶದೆಲ್ಲೆಡೆ ಪ್ರತಿದಿನ ಸಂಭವಿಸುತ್ತಲೇ ಇರುತ್ತವೆ. ಸೋಮವಾರ ಸಹ ವಿವಿಧ ಘಟನಾವಳಿಗಳಿಗೆ ಸಾಕ್ಷಿಯಾಯಿತು.

ಪಶ್ಚಿಮ ಬಂಗಾಳದಲ್ಲಿ ದುರ್ಗಾದೇವಿಯ ಆರಾಧನೆ ಆರಂಭವಾಗಿದೆ. ಕೋಲ್ಕತ್ತಾದಲ್ಲಿ ಕಲಾವಿದನ ಕೈಯಲ್ಲಿ ಅರಳುತ್ತಿರುವ ದುರ್ಗಾಮಾತೆ ಚಿತ್ರದಲ್ಲಿ ಕಂಡ ಬಗೆಯನ್ನು ವರ್ಣಿಸಲು ಸಾದ್ಯವಿಲ್ಲ. ಅಲಹಾಬಾದ್ ನಲ್ಲಿ ಆಯೋಜಿಸಿದ್ದ ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾಲೇಜಿನ ಯುವತಿಯರ ಸಂಭ್ರಮಕ್ಕೆ ಎಣೆಯಿರಲಿಲ್ಲ. ಅತ್ತ ಜಮ್ಮುವಿನಲ್ಲಿ ದಿನಗೂಲಿ ಏರಿಕೆ ಸೇರಿದಂತೆ ವಿವಿಧ ಬೇಡಿಕೆ ಏರಿಕೆಗೆ ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ 26ನೇ ದಿನಕ್ಕೆ ಕಾಲಿಟ್ಟಿದೆ.

ಸೋಮವಾರ ರಾಜಕೀಯ ನೇತಾರರು ಸುದ್ದಿಯಿಂದ ಹೊರಗೆ ಉಳಿದರು. ಬಿಸಿಸಿಐಗೆ ಹೊಸ ನೀರು ಹರಿದು ಬಂದಿದ್ದು ಶಶಾಂಕ್ ಮನೋಹರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದ ಗೋ ಮಾಂಸ ಪ್ರಕರಣ ರಾಜಕೀಯ ಮುಖಂಡರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. (ಪಿಟಿಐ ಚಿತ್ರಗಳು)

ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಪ್ರತಿಭಟನೆ

ಪಶ್ಚಿಮ ಬಂಗಾಳದ ರಾಜ್ಯ ಚುನಾವಣಾ ಆಯುಕ್ತ ಸುಶಾಂತ ಉಪಾಧ್ಯ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು.

 ಆಕಸ್ಮಿಕ ಬೆಂಕಿ

ಆಕಸ್ಮಿಕ ಬೆಂಕಿ

ಗುರ್ ಗಾಂವ್ ನಲ್ಲಿ ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ 30 ಕ್ಕೂ ಅಧಿಕ ಅಂಗಡಿಗಳು.

 ರಂಗೋಲಿಯಲ್ಲಿ ಪ್ರಾಣಿಗಳು

ರಂಗೋಲಿಯಲ್ಲಿ ಪ್ರಾಣಿಗಳು

ಭೋಪಾಲ್ ಕಾಡು ಪ್ರಾಣಿಗಳ ಸಂರಕ್ಷಣೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ರಂಗೋಲಿಯಲ್ಲಿ ಪ್ರಾಣಿಗಳ ಚಿತ್ರವನ್ನು ಬಿಡಿಸಿದ ಯುವತಿಯರು.

 ರಸ್ತೆಗೆ ಬಂದ ಬಾತುಕೋಳಿ

ರಸ್ತೆಗೆ ಬಂದ ಬಾತುಕೋಳಿ

ಸೈಕಲ್ ಸವಾರನಿಗೆ ಗೌಹಹಾತಿಯಲ್ಲಿ ಎದುರಾದ ಬಾತುಕೋಳಿಗಳ ಸಾಲು ಕಂಡಿದ್ದು ಹೀಗೆ.

ಪರಿಸರ ಸಂರಕ್ಷಣೆ ನಮ್ಮ ಹೊಣೆ

ಪರಿಸರ ಸಂರಕ್ಷಣೆ ನಮ್ಮ ಹೊಣೆ

ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಲು ಕಲಾವಿದ ಸುದರ್ಶನ್ ಪಟ್ನಾಯಕ್ ನಿರ್ಮಿಸಿದ ಮರಳು ಕಲಾಕೃತಿ ಗಮನ ಸೆಳೆಯಿತು.

ಅರಬೆತ್ತಲೆ ಪ್ರತಿಭಟನೆ

ಅರಬೆತ್ತಲೆ ಪ್ರತಿಭಟನೆ

ದಿನಗೂಲಿ ಏರಿಕೆ ಸೇರಿದಂತೆ ವಿವಿಧ ಬೇಡಿಕೆ ಏರಿಕೆಗೆ ಆಗ್ರಹಿಸಿ ಜಮ್ಮುವಿನಲ್ಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ 26ನೇ ದಿನಕ್ಕೆ ಕಾಲಿಟ್ಟಿದೆ.

 ದುರ್ಗಾಪೂಜೆಗೆ ಸಿದ್ಧತೆ

ದುರ್ಗಾಪೂಜೆಗೆ ಸಿದ್ಧತೆ

ಪಶ್ಮಿಮ ಬಂಗಾಳದಲ್ಲಿ ದುರ್ಗಾ ಪೂಜೆ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಕೋಲ್ಕತ್ತಾದಲ್ಲಿ ಕಲಾವಿದನ ಕೈಯಲ್ಲಿ ಅರಳುತ್ತಿರುವ ದುರ್ಗಾಮಾತೆ ಕಂಡಿದ್ದು ಹೀಗೆ.

 ಸಭೆಗೆ ಆಗಮನ

ಸಭೆಗೆ ಆಗಮನ

ಮುಂಬೈ ನಲ್ಲಿ ನಡೆದ ಭಾರತೀಯ ಕ್ರಿಕೆಟ್ ಮಂಡಳಿ ಸಭೆಗೆ ಆಗಮಿಸಿದ ಜಯ್ ಶಾ, ಅಭಿಷೇಕ್ ದಾಲ್ಮಿಯಾ, ರಾಜೀವ್ ಶುಕ್ಲಾ ಮತ್ತು ಸೌರವ್ ಗಂಗೂಲಿ.

ಬಿಸಿಸಿಐಗೆ ಹೊಸ ನೀರು

ಬಿಸಿಸಿಐಗೆ ಹೊಸ ನೀರು

ಮುಂಬೈ ನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಉಪಸ್ಥಿತರಿದ್ದ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತು ಕಾರ್ಯದರ್ಶಿ ಅನುರಾಗ್ ಠಾಕೂರ್.

ಮೆಹಂದಿ ಶೃಂಗಾರ

ಮೆಹಂದಿ ಶೃಂಗಾರ

ಅಲಹಾಬಾದಿನ ಕಾಲೇಜೊಂದರಲ್ಲಿ ಆಯೋಜಿಸಿದ್ದ ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯರ ಸಂಭ್ರಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+