ವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿಲ್ಲ- ಫ್ರಾನ್ಸ್ ಗುಪ್ತಚರ ವರದಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಪ್ಯಾರಿಸ್, ಜುಲೈ 16: ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿಗೆ ಸಂಬಂಧಿಸಿದ ವಿವಾದದ ನಡುವೆಯೇ ಫ್ರಾನ್ಸ್ ನ ವರದಿಯೊಂದು ಬೋಸ್ ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಹೇಳಿದೆ. ಪ್ಯಾರಿಸ್ ಮೂಲದ ಇತಿಹಾಸಕಾರ ಜೆ.ಬಿ.ಪಿ ಮೋರ್ ರಹಸ್ಯ ಫ್ರೆಂಚ್ ವರದಿಯನ್ನು ಉಲ್ಲೇಖಿಸಿ ಬೋಸ್ ವಿಮಾನ ಅಪಘಾತದಲ್ಲಿ ಸಾಯಲಿಲ್ಲ ಎಂದು ಹೇಳಿದ್ದಾರೆ.

"ತೈವಾನಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸುಭಾಷ್ ಚಂದ್ರ ಬೋಸ್ ನಿಧನರಾದರು ಎಂದು ದಾಖಲೆಯಲ್ಲಿ ಎಲ್ಲೂ ಹೇಳಿಲ್ಲ. ಬದಲಾಗಿ ಡಿಸೆಂಬರ್ 1947 ರ ತನಕ ಬೋಸ್ ರ ಪ್ರಸ್ತುತ ಇರುವಿಕೆಯು ತಿಳಿದಿಲ್ಲವೆಂದು ವರದಿಯಾಗಿದೆ.ಇದು ಮತ್ತೊಮ್ಮೆ 1945ರ ಆಗಸ್ಟ್ 18 ರಂದು ವಿಮಾನ ಪತನದಲ್ಲಿ ಅವರು ಅಸುನೀಗಿದ್ದಾರೆ ಎಂಬುದನ್ನು ಫ್ರಾನ್ಸ್ ಒಪ್ಪಿಕೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ," ಎಂದು ಪ್ಯಾರಿಸಿನ 'ಇನ್ಸ್ಟಿಟ್ಯೂಟ್ ಡೆಸ್ ಹೌಟೆಸ್ ಎಟುಡೆಸ್ ಎಕನಾಮಿಕ್ಸ್ ಎಟ್ ಕಮರ್ಷಿಯಲ್ಸ್ 'ನಲ್ಲಿ ಪ್ರಧ್ಯಾಪಕರಾಗಿರುವ ಮೋರ್ ಹೇಳಿದ್ದಾರೆ.

ನೇತಾಜಿ ಸಾವಿನ ನಿಗೂಢತೆಗೆ ಇನ್ನೂ ಅಂತ್ಯ ಸಿಕ್ಕಿಲ್ಲ!

Netaji Bose did not die in air crash says French report

ಒಟ್ಟಾರೆ ಫ್ರೆಂಚ್ ರಹಸ್ಯ ಸೇವೆಯ ವರದಿಯ ಸಾರಾಂಶ ಏನೆಂದರೆ,ಸಾಮಾನ್ಯವಾಗಿ ಅಂದುಕೊಂಡಿರುವಂತೆ, 'ಆಗಸ್ಟ್ 18, 1945 ರಂದು ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿಲ್ಲ'ಎಂಬುದಾಗಿದೆ ಎಂದು ಮೋರ್ ಸ್ಪಷ್ಟಪಡಿಸಿದ್ದಾರೆ.

ವಿಮಾನ ಅಪಘಾತದಲ್ಲೇ ಸುಭಾಷ್ ಚಂದ್ರ ಬೋಸ್ ಸಾವು: ಸಿಐಎ ವರದಿ

Countries with Most Number of Nuclear Weapons | Oneindia Kannada

"ಅವರು ಇಂಡೊಚೀನಾದಿಂದ ಜೀವಂತವಾಗಿ ತಪ್ಪಿಸಿಕೊಂಡಿದ್ದರು. ಆದರೆ, ಡಿಸೆಂಬರ್ 11, 1947 ರ ತನಕ ಅವರ ಇರುವಿಕೆಯು ತಿಳಿದಿಲ್ಲ ಎಂದು ರಹಸ್ಯ ದಾಖಲೆಗಳಲ್ಲಿ ವರದಿ ಮಾಡಿದ್ದಾರೆ. ಇದು ಅವರು ಎಲ್ಲೋ ಜೀವಂತವಾಗಿದ್ದಾರೆ ಮತ್ತು 1947 ರಲ್ಲಿ ಸತ್ತಿಲ್ಲ ಎಂಬುದನ್ನು ಪುಷ್ಟೀಕರಿಸುತ್ತದೆ" ಎಂದು ಮೋರ್ ಬರೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amidst the controversy surrounding Netaji Subhas Chandra Bose a report from France states that the leader did not die in a plane crash. A secret French report stumbled upon by Paris based historian J B P More found that Bose did not die in an air crash.
Please Wait while comments are loading...