21 ವರ್ಷದ ಮಗನಿಗೆ ಓದುವಂತೆ ಅಪ್ಪನ ಒತ್ತಡ, 50 ವರ್ಷದ ತಂದೆಯನ್ನೇ ಮುಗಿಸಿದ ಮಗ... NEET Exam

ಅಪ್ಪ ಮತ್ತು ಮಕ್ಕಳ ಪವಿತ್ರ ಸಂಬಂಧ ಆಧುನಿಕ ಕಾಲದಲ್ಲಿ ಹಾಳಾಗಿ ಹೋಗುತ್ತಿದೆ. ಅದರಲ್ಲೂ ಈ ಹೊಸ ತಲೆಮಾರಿನ ಮಕ್ಕಳಿಗೆ ಅಪ್ಪ ಹಾಗೂ ಅಮ್ಮ ಬುದ್ಧಿ ಹೇಳಲು ಕೂಡ ಭಯಪಡುವ ವಾತಾವರಣ ಈಗ ನಿರ್ಮಾಣ ಆಗಿದೆ. ಸಣ್ಣಪುಟ್ಟ ವಿಚಾರಕ್ಕೆ ಈಗಿನ ಕಾಲದ ಮಕ್ಕಳು ಜೀವ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಿದ್ದಾರೆ ಎಂಬುದು ಭಯಾನಕ ಸಂಗತಿ. ಅದರಲ್ಲೂ ಓದುವ ವಿಚಾರಕ್ಕೆ ಒತ್ತಡ ಹಾಕಿದರೆ, ಮುಂದೆ ಆಗುವ ಅನಾಹುತ ಊಹೆ ಮಾಡುವುದಕ್ಕೂ ಅಸಾಧ್ಯ. ಅದೇ ರೀತಿಯಾಗಿ ಇಲ್ಲೊಬ್ಬ ಮಗ ಓದುವಂತೆ ಒತ್ತಾಯ ಮಾಡಿದ್ದ ಅಪ್ಪನನ್ನೇ ಭೀಕರವಾಗಿ ಗುಂಡಿಟ್ಟು ಕೊಲೆ ಮಾಡಿದ್ದಾನೆ.

ಮಕ್ಕಳ ಭವಿಷ್ಯಕ್ಕಾಗಿ ಅಪ್ಪ & ಅಮ್ಮ ಹಗಲು, ರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳುವ ಮಕ್ಕಳು ಚನ್ನಾಗಿ ಓದಿ ಸಾಧನೆ ಮಾಡುತ್ತಾರೆ. ಆದರೆ ಇನ್ನೂ ಕೆಲವರು ಸಣ್ಣಪುಟ್ಟ ವಿಚಾರಕ್ಕೂ ಅಪ್ಪ & ಅಮ್ಮನ ಜೊತೆಗೆ ಜಗಳ ಆಡುತ್ತಾರೆ. ಹೀಗಿದ್ದಾಗ ಇಲ್ಲೊಬ್ಬ ಮಗ ಮಹಾಶಯ ತನ್ನ ತಂದೆ ಓದಲು ಹೇಳಿದ್ದಕ್ಕೆ ಜೀವವನ್ನೇ ತೆಗೆದಿದ್ದಾನೆ. ಅಲ್ಲದೆ ತನ್ನ ತಂದೆಯನ್ನು ಕೊಲೆ ಮಾಡಿದ ನಂತರ ಈತ ಮಾಡಿದ್ದ ಖತರ್ನಾಕ್ ಪ್ಲಾನ್ ಇಡೀ ದೇಶವನ್ನೇ ಇದೀಗ ಬೆಚ್ಚಿ ಬೀಳುವಂತೆ ಮಾಡಿದೆ. ಹಾಗಾದ್ರೆ ಮಗರಾಯ ಅಪ್ಪನ ಹತ್ಯೆ ನಂತರ ಮಾಡಿದ್ದು ಯಾವ ಕೆಲಸ? ಪೊಲೀಸರಿಗೆ ತನಿಖೆ ವೇಳೆ ಗೊತ್ತಾದ ಸ್ಫೋಟಕ ಸಂಗತಿ ಏನು? ಬನ್ನಿ ತಿಳಿಯೋಣ.

NEET Exam

ತಂದೆಯ ದೇಹ ಡ್ರಮ್ ಒಳಗೆ ಹಾಕಿದ್ದ

ನೀಟ್ ಪರೀಕ್ಷೆಗೆ ಓದಲು ತಂದೆ ಒತ್ತಾಯ ಮಾಡ್ತಾ ಇದ್ದಾರೆ ಎಂದು, ಯುವಕನೊಬ್ಬ ತನ್ನ ತಂದೆಯನ್ನೇ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಅಲ್ಲದೇ ಕೊಲೆಯ ವಿಚಾರ ಹೊರಗೆ ಯಾರಿಗೂ ಗೊತ್ತಾಗದಂತೆ ತನಗೆ ಜನ್ಮ ನೀಡಿದ ತಂದೆ ದೇಹವನ್ನೇ ತುಂಡು ತುಂಡಾಗಿ ಕಟ್ ಮಾಡಿ, ದೇಹದ ಕೆಲವು ಭಾಗಗಳನ್ನು ಹೊರ ಬಿಸಾಕಿ ಇನ್ನುಳಿದ ಭಾಗಗಳನ್ನು ಡ್ರಮ್ ಒಳಗೆ ಹಾಕಿದ್ದನಂತೆ. ಉತ್ತರ ಪ್ರದೇಶದ ಲಖನೌ ನಗರದಲ್ಲಿ ಈ ಭೀಕರ ಘಟನೆ ವರದಿಯಾಗಿದ್ದು, ಇಡೀ ದೇಶವೇ ಈ ಘಟನೆಯಿಂದ ಬೆಚ್ಚಿಬಿದ್ದಿದೆ.

ನೀಟ್ ಪರೀಕ್ಷೆಗೆ ಓದಲು ಹೇಳಿದ್ದಕ್ಕೆ ಕೊಲೆ

ಅಂದಹಾಗೆ ಲಖನೌ ಮೂಲದ ಉದ್ಯಮಿ ಮನ್ವೇಂದ್ರ ಸಿಂಗ್ ಹತ್ಯೆಯಾದ ವ್ಯಕ್ತಿ ಹಾಗೂ ಮನ್ವೇಂದ್ರ ಅವರ ಮಗ 21 ವರ್ಷದ ಅಕ್ಷತ್ ಸಿಂಗ್ ಈ ಘಟನೆಯಲ್ಲಿ ಆರೋಪಿ ಆಗಿದ್ದಾನೆ. ಉದ್ಯಮಿ ಮನ್ವೇಂದ್ರ ಸಿಂಗ್ ಇದೇ ಫೆಬ್ರವರಿ 20 ಶುಕ್ರವಾರದಿಂದ ನಾಪತ್ತೆ ಆಗಿದ್ದರು. ಮನೆಯವರು ಕೂಡ ಹುಡುಕಾಡಿದ್ದು ಮನ್ವೇಂದ್ರ ಸಿಂಗ್ ಪತ್ತೆ ಆಗಿರಲಿಲ್ಲ, ಮನ್ವೇಂದ್ರ ಸಿಂಗ್ ನಾಪತ್ತೆ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಸ್ಫೋಟಕ ಸಂಗತಿ ಬಯಲಾಗಿದೆ. ಮನೆಯಿಂದಲೇ ತನಿಖೆ ಆರಂಭಿಸಿದ ಪೊಲೀಸರು ಒಂದು ಕ್ಷಣ ಬೆಚ್ಚಿಬಿದ್ದಿದ್ದು, ನೀಟ್ ಪರೀಕ್ಷೆಗೆ ಓದುವಂತೆ ಒತ್ತಡ ಹೇರಿದ್ದ ಅಪ್ಪನನ್ನೇ ಮಗ ಕೊಲೆ ಮಾಡಿರುವುದು ಬಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+