ನಕ್ಸಲರಿಂದ ದೂರದರ್ಶನ ಛಾಯಾಗ್ರಾಹಕನ ಬರ್ಬರ ಹತ್ಯೆ
ದಾಂತೇವಾಡ(ಛತ್ತೀಸ್ ಗಢ), ಅಕ್ಟೋಬರ್ 30: ಛತ್ತೀಸ್ ಗಢದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ದೂರದರ್ಶನ ಚಾನೆಲ್ ನ ಕ್ಯಾಮರಾಮನ್ ವೊಬ್ಬರು ಬಲಿಯಾದ ಘಟನೆ ಮಂಗಳವಾರ ನಡೆದಿದೆ.
ಛತ್ತೀಸ್ ಗಢದ ದಾಂತೇವಾಡದ ಅರಾನ್ಪುರ ಎಂಬಲ್ಲಿ ನಡೆದ ಈ ಘಟನೆಯಲ್ಲಿ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗಷ್ಟೆ ಆಂಧ್ರಪ್ರದೇಶದ ಅರುಕು ಕ್ಷೇತ್ರದ ಹಾಲಿ ಶಾಸಕ, ತೆಲುಗು ದೇಶಂ ಪಕ್ಷದ ಮುಖಂಡ ಕಿಡಾರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸಿವೇರಿ ಸೋಮ ಎಂಬುವವರನ್ನು ನಕ್ಸಲರು ಗುಂಡಿಕ್ಕಿ ಕೊಂದಿದ್ದರು.

ಸರಕು ಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಇಬ್ಬರೂ ಒಟ್ತಿಗೇ ವಾಪಸ್ಸಾಗುತ್ತಿದ್ದ ಸಮಯದಲ್ಲಿ ದಾಳಿ ನಡೆಸಿದ ನಕ್ಸಲರು ಇವರನ್ನು ಗುಂಡಿಕ್ಕಿ ಕೊಂದಿದ್ದರು.
Doordarshan cameraman Achutyanand Sahu who lost his life today in a Naxal attack in Dantewada. #Chhattisgarh (Image Courtesy- Sahu's Facebook Account) pic.twitter.com/B8t7scDppR
— ANI (@ANI) October 30, 2018
ಆಗಸ್ಟ್ ನಲ್ಲಿ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ 14 ನಕ್ಸಲರನ್ನು ಭದ್ರತಾ ಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು.












Click it and Unblock the Notifications