ನರೇಂದ್ರ ಮೋದಿ ಹೊಸ ವರ್ಷ ಆಚರಿಸಿಕೊಂಡಿದ್ದು ಎಲ್ಲಿ?

ನವದೆಹಲಿ, ಜ. 5: ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಹೊಸ ವರ್ಷ ಆಚರಿಸಿಕೊಂಡಿದ್ದು ಎಲ್ಲಿ? ಎಂಬುದಕ್ಕೆ ಉತ್ತರ ಹುಡುಕಿದರೆ ಅವರ ಸರಳತೆಯ ವ್ಯಕ್ತಿತ್ವದ ಅನಾವರಣವಾಗುತ್ತದೆ.

ಪ್ರಧಾನಿ ಮೋದಿ ಹೊಸ ವರ್ಷವನ್ನು ತಮ್ಮ ಕಚೇರಿಯ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡರು. ಕಚೇರಿಯ ಮೇಲಧಿಕಾರಿಯಿಂದ ಹಿಡಿದು ಜವಾನನವರೆಗೆ ಸ್ವತಃ ಮೋದಿಯೇ ಆಹ್ವಾನ ನೀಡಿದ್ದರು ಎಂಬುದು ಮತ್ತೊಂದು ವಿಶೇಷ.[ವಿಜ್ಞಾನ, ತಂತ್ರಜ್ಞಾನ ಬಿಟ್ಟು ಅಭಿವೃದ್ಧಿ ಅಸಾಧ್ಯ : ಮೋದಿ]

modi

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಮೋದಿ ತಮ್ಮ ಕಚೇರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ಸ್ವತಃ ಎಲ್ಲರೊಂದಿಗೆ ಮಾತನಾಡಿ ಸಂತೈಸುವ ಗುಣ ಅವರಿಗೆ ಸಿದ್ಧಿಸಿದೆ. ವಿಶೇಷ ಸಂದರ್ಭಗಳಲ್ಲಿ ಮೋದಿ ಇಂಥ ತಮ್ಮ ಕಚೇರಿ ಸಿಬ್ಬಂದಿಗೆ ಔತಣಕೂಟ ಏರ್ಪಡಿಸುತ್ತಾರೆ. ಅಲ್ಲದೇ ಅವರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಾರೆ.

ಮೋದಿಯವರಿಗೆ ಕುಳಿತುಕೊಳ್ಳಲು ಅನುವಾಗುವಂತೆ ಕುರ್ಚಿಯೊಂದನ್ನು ಸಿದ್ಧಪಡಿಸಲಾಗಿತ್ತು. ಆದರೆ ಅವರು ಸುಮಾರು 45 ನಿಮಿಷಗಳ ಕಾಲ ನಿಂತುಕೊಂಡೇ ಇದ್ದರು. ಅಲ್ಲದೇ ಪ್ರತಿಯೊಬ್ಬರನ್ನು ಮಾತನಾಡಿಸಿದರು ಎಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.[ಕಚಗುಳಿ ಇಟ್ಟ ಮೋದಿ ಪಂಚಿಂಗ್ ಡೈಲಾಗ್ಸ್]

modi 1

ಎಲ್ಲರೊಂದಿಗೆ ಬೆರೆತು ಚಹಾ ಸೇವಿಸಿದ ಪ್ರಧಾನಿ ನೌಕರರ ರಾಜ್ಯ ಯಾವುದು ಎಂಬುದನ್ನು ಕೇಳಿ ತಿಳಿದುಕೊಂಡಿದ್ದಾರೆ. ಅಲ್ಲದೇ ಆಯಾ ರಾಜ್ಯದವರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ 2015ರ ಆರಂಭವನ್ನು ತಮ್ಮ ಕಾರ್ಯಾಲಯದ ಸಿಬ್ಬಂದಿಯೊಂದಿಗೆ ಆಚರಿಸುವ ಮೂಲಕ ಅವರಲ್ಲಿ ಮತ್ತಷ್ಟು ಉತ್ಸಾಹ ತುಂಬಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+