Get Updates
Get notified of breaking news, exclusive insights, and must-see stories!

ಮೋದಿ ಸರ್ಕಾರದ ಕಠಿಣ ನಿಲುವು: ನಕ್ಸಲ್‌ ಚಳವಳಿಗೆ ದೇಶದಲ್ಲೇ ಬಿತ್ತು ಪೆಟ್ಟು

ನಕ್ಸಲರ ವಿರುದ್ಧ ಭಾರತದ ಕಾರ್ಯಾಚರಣೆ ಹೊಸದಲ್ಲ. ದಶಕಗಳ ಕಾಲದಿಂದ ದೇಶದ ಹಲವು ಪ್ರದೇಶಗಳು ಮಾವೋವಾದಿಗಳ ನೆರಳಿನಲ್ಲಿವೆ. ಸಾವಿರಾರು ಅಮಾಯಕ ನಾಗರಿಕರು, ಭದ್ರಾ ಪಡೆಗಳ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ನೆಲಬಾಂಬ್ ದಾಳಿ, ಗೆರಿಲ್ಲಾ ಮಾದರಿ ದಾಳಿ ಮತ್ತು ಭೀಕರ ಹತ್ಯೆಗಳ ಸಂತ್ರಸ್ತರಾಗಿದ್ದಾರೆ. ಎಡಪಂಥೀಯ ತೀವ್ರಗಾಮಿ (ಎಲ್‌ಡಬ್ಲ್ಯೂಇ) ಅನ್ನು ಹಲವಾರು ಸರ್ಕಾರಗಳು ಗಂಭೀರ ಆಂತರಿಕ ಬೆದರಿಕೆಯಾಗಿ ಒಪ್ಪಿಕೊಂಡಿದೆ. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ನಡುವೆ ಹೋಲಿಕೆ ಮಾಡಿದರೆ ಉದ್ದೇಶ ಮತ್ತು ಪರಿಣಾಮದ ನಡುವೆ ಹಲವು ವ್ಯತ್ಯಾಸಗಳಿರುವುದು ಸ್ಪಷ್ಟವಾಗಿದೆ.

2004 ರಿಂದ 2014ರ ತನಕ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಕ್ಸಲ್ ಸಮಸ್ಯೆ ಬಹುದೊಡ್ಡದಾಗಿತ್ತು. ಸಮಗ್ರ ಕ್ರಿಯಾ ಯೋಜನೆ (ಐಎಪಿ) ಮತ್ತು ಆಪರೇಷನ್ ಗ್ರೀನ್ ಹಂಟ್‌ ಮೂಲಕ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಈ ಕ್ರಮಗಳು ಅಭಿವೃದ್ಧಿಯನ್ನು ಭದ್ರತೆಯೊಂದಿಗೆ ಸಂಯೋಜಿಸುವ ಉದ್ದೇಶವನ್ನು ಹೊಂದಿದ್ದವು ಆದರೆ, ಇದನ್ನು ಕಾರ್ಯಗತಗೊಳಿಸುವಲ್ಲಿ ಸರ್ಕಾರ ವಿಫಲವಾಯಿತು. ಯುಪಿಎ ಸಾಮಾನ್ಯವಾಗಿ ರಕ್ಷಣಾತ್ಮಕ ನಿಲುವನ್ನು ತೆಗೆದುಕೊಂಡಿತು, ಮೃದು ತಂತ್ರಗಳ ಮೇಲೆ ಅವಲಂಬಿತವಾಯಿತು. ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರೂ ಸಹ, ಅವುಗಳಿಗೆ ಸೂಕ್ತ ಗುಪ್ತಚರ ಮಾಹಿತಿ ಮತ್ತು ನಿಖರತೆಯ ಕೊರತೆ ಕಾಡಿತು. ಹಿಂಸೆಯನ್ನು ತ್ಯಜಿಸುವ ನಕ್ಸಲರ ಜೊತೆ ಮಾತುಕತೆ ನಡೆಸುವಲ್ಲಿಯೂ ಸರ್ಕಾರ ಎಡವಿತು. ಕೇಂದ್ರದ ಪಡೆಗಳು ಮತ್ತು ರಾಜ್ಯ ಘಟಕಗಳ ನಡುವಿನ ಸಮನ್ವಯ ಅಸಮರ್ಪಕವಾಗಿತ್ತು. ಇದರಿಂದಾಗಿ ಕಾರ್ಯಾಚರಣೆ ವಿಫಲವಾಯಿತು. ಈ ಎಲ್ಲಾ ಪರಿಣಾಮಗಳ ಕಾರಣ ನಕ್ಸಲ್ ಚಳವಳಿ ಮಧ್ಯ ಮತ್ತು ಪೂರ್ವ ಭಾರತದ ಪ್ರದೇಶಗಳಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡಿತು, ಯುಪಿಎ ಆಡಳಿತದ ಅವಧಿಯಲ್ಲಿಯೇ ಹೆಚ್ಚಿನ ಹಿಂಸೆ ಮತ್ತು ನಾಗರಿಕರ ಹತ್ಯೆಗಳು ಮುಂದುವರಿದವು.

Narendra Modi Govts Iron Fist Approach Crushes Naxal Threat Across Heartland

2014ರಲ್ಲಿ ಚಿತ್ರಣ ಬದಲಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಸ್ಪಷ್ಟತೆ, ದೃಢನಿಷ್ಠೆ ಮತ್ತು ಸಮನ್ವಯದ ಜೊತೆ ಹೋರಾಟವನ್ನು ಆರಂಭಿಸಿತು. ಬಿಜೆಪಿಯ ದೃಷ್ಟಿಕೋನ ದೃಢವಾಗಿತ್ತು. ಶಸ್ತ್ರಸಜ್ಜಿತ ಬಂಡಾಯದ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ, ಶಸ್ತ್ರಾಸ್ತ್ರಗಳನ್ನು ಒಪ್ಪಿಸುವವರೆಗೆ ಚರ್ಚೆಗಳು ಇಲ್ಲ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬೆದರಿಸುವವರ ಮೇಲೆ ನಿರಂತರವಾಗಿ ಕಣ್ಗಾವಲು ಇರಲಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿತು. ಗೃಹ ಸಚಿವ ಅಮಿತ್ ಶಾ ನಾಯಕತ್ವದಲ್ಲಿ, ಸರ್ಕಾರವು ಆಪರೇಷನ್ ಪ್ರಹಾರ್ ಮತ್ತು ಆಪರೇಷನ್ ಆಕ್ಟೋಪಸ್ ಕೈಗೊಂಡಿತು. ಇದು ಅತ್ಯಂತ ಸಮನ್ವಯುತ ಮತ್ತು ಗುಪ್ತಚರ ಮಾಹಿತಿಗಳನ್ನು ಹೊಂದಿದ್ದ ಕಾರ್ಯಾಚರಣೆಗಳಾಗಿದ್ದವು. ಈ ಕಾರ್ಯಾಚರಣೆಗೆ ಉಪಗ್ರಹಗಳ ಸಹಾಯ, ಡ್ರೋನ್ ಮೂಲಕ ಪುನರ್ ಪರಿಶೀಲನೆ ಮತ್ತು ತಳಮಟ್ಟದ ಗುಪ್ತಚರ ಮಾಹಿತಿಗಳ ಸಹಾಯ ಪಡೆಯಲಾಯಿತು. ಈ ಕಾರ್ಯಾಚರಣೆಗಳು ಪ್ರಮುಖ ಮಾವೋವಾದಿಗಳ ಅಡಗುತಾಣಗಳನ್ನು ನಾಗರಿಕರಿಗೆ ಹೆಚ್ಚಿನ ಹಾನಿಯಾಗದಂತೆ ನಾಶ ಮಾಡಲು ಸಹಾಯಕವಾದವು. ಯುಪಿಎ ಸರ್ಕಾರ ಅವಧಿಗೆ ಹೋಲಿಕೆ ಮಾಡಿದರೆ ಇದು ಬಹಳ ತೀಕ್ಷ ಶಕ್ತಿಯ ಕಾರ್ಯಾಚರಣೆಯಾಗಿತ್ತು.

ಆದರೆ ಎನ್‌ಡಿಎ ಸರ್ಕಾರದ ಕಾರ್ಯಾಚರಣೆ ಕೇವಲ ಬಂದೂಕಿನ ತಂತ್ರಗಾರಿಕೆಗೆ ಸೀಮಿತವಾಗಿರಲಿಲ್ಲ. ಭದ್ರತೆ ಮೊದಲು ಅಭಿವೃದ್ಧಿ ಸಹ ಬಲವಾದ ಅಸ್ತ್ರ ಎಂದು ಸರ್ಕಾರ ಅರ್ಥಮಾಡಿಕೊಂಡಿತು. ಒಂದು ಕಾಲದಲ್ಲಿ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ನಕ್ಸಲರ ಅಡಗುತಾಣಗಳಾಗಿದ್ದ ಗ್ರಾಮಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಎಂಜಿಎಸ್‌ವೈ) ಮತ್ತು ಭಾರತ್‌ ಮಾಲಾ ಪರಿಯೋಜನಾ ಮೂಲಕ ಹೊರ ಜಗತ್ತಿನ ಸಂಪರ್ಕ ಪಡೆದುಕೊಂಡವು. ಇದು ಕಾನೂನು ಮತ್ತು ಶಾಂತಿ ಕಾಪಾಡಲು, ಆಡಳಿತ ನಡೆಸಲು ಅನುಕೂಲ ಮಾಡಿಕೊಟ್ಟಿತು. ಸರ್ಕಾರದ ಪುರ್ನವಸತಿ ನೀತಿ ಸಹ ಸಹಕಾರಿಯಾಗಿತ್ತು. ನೂರಾರು ಮಾಜಿ ನಕ್ಸಲರು ಶರಣಾದರು. ವೃತ್ತಿಪರ ತರಬೇತಿ, ಆರ್ಥಿಕ ಪ್ರೋತ್ಸಾಹದ ಮೂಲಕ ಸಾಮಾನ್ಯ ಮತ್ತು ಗೌರವಯುವ ಬದುಕನ್ನು ಕಟ್ಟಿಕೊಂಡರು.

ಸರಿಸಾಟಿ ಇಲ್ಲದ ಫಲಿತಾಂಶ: ಹಿಂಚಾಸಾರ ಕಡಿಮೆ, ಆಡಳಿತಕ್ಕೆ ವೇಗ

ಗೃಹ ಸಚಿವಾಲಯದ ಅಂಕಿ ಅಂಶಗಳ ಮಾಹಿತಿ ಪ್ರಕಾರ ನಕ್ಸಲ್ ದಾಳಿಗಳ ಪ್ರಕರಣಗಳ ಸಂಖ್ಯೆ ಶೇ 77ರಷ್ಟು ಕಡಿಮೆಯಾಗಿದೆ. ಯುಪಿಎ ಅವಧಿಯಲ್ಲಿ ಅತಿ ಹೆಚ್ಚಾಗಿದ್ದ ಸಾಮಾನ್ಯ ಜನರು, ಭದ್ರತಾ ಪಡೆಗಳ ಸಿಬ್ಬಂದಿಗಳ ಸಾವಿನ ಸಂಖ್ಯೆ ಶೇ 85ರಷ್ಟು ಕಡಿಮೆಯಾಗಿದೆ. ಇದು ಕೇವಲ ಅಂಕಿ ಸಂಖ್ಯೆಯಲ್ಲ, ಜೀವಗಳನ್ನು ಉಳಿಸಲಾಗಿದೆ. ಕುಟುಂಬಗಳನ್ನು ದಾಳಿಗಳಿಂದ ರಕ್ಷಣೆ ಮಾಡಲಾಗಿದೆ, ಹಿಂಸಾಚಾರ ಕಡಿಮೆ ಮಾಡಲಾಗಿದೆ ಗ್ರಾಮೀಣ ಪ್ರದೇಶದ ಜೀವನಮಟ್ಟ ಸುಧಾರಣೆ ಮಾಡಲಾಗಿದೆ.

ಆಪರೇಷನ್ ಕಾಗರ್: ರಾಜ್ಯದ ಪುನರುತ್ಥಾನದ ಪ್ರತೀಕ

ನಕ್ಸಲರ ವಿರುದ್ಧ ಕೇಂದ್ರ ಸರ್ಕಾರದ 'ಆಪರೇಷನ್ ಕಾಗರ್' ಜಾರಿಯಲ್ಲಿದೆ. ಛತ್ತೀಸ್‌ಗಢ-ತೆಲಂಗಾಣ ರಾಜ್ಯದ ಗಡಿಯ ಕರ್ರೆಗುಟ್ಟಲು ಪ್ರದೇಶದ ಕಾಡಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮಾವೋವಾದಿಗಳ ವಿರುದ್ಧ ದೇಶದ ಅತಿ ದೊಡ್ಡ ಕಾರ್ಯಾಚರಣೆ ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರ ಈ ಕಾರ್ಯಾಚರಣೆಗೆ ಸುಮಾರು 1 ಲಕ್ಷ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜನೆ ಮಾಡಿದೆ. ಇದು ಎಡಪಂಥೀಯರ ವಿರುದ್ಧದ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ.

ಇದುವರೆಗಿನ ಕಾರ್ಯಾಚರಣೆಯಲ್ಲಿ ಮೂವರು ಮಹಿಳಾ ನಕ್ಸಲರು ತಟಸ್ಥರಾಗಿದ್ದಾರೆ ಮತ್ತು ಬಂಡಾಯಕ್ಕಿಂತ ಪುರ್ನವಸತಿ ಉತ್ತಮ ಎಂದು 44 ಇತರರು ಶರಣಾಗಿದ್ದಾರೆ. ಆದರೆ ಹಿರಿಯ ಮಾವೋವಾದಿ ನಾಯಕರ ಗೈರು ಕುತೂಹಲಕ್ಕೆ ಕಾರಣವಾಗಿದೆ. ಅತಿ ದೊಡ್ಡ ಕಾರ್ಯಾಚರಣೆ ಆರಂಭವಾಗುವ ಮೊದಲೇ ಅವರು ಈ ಪ್ರದೇಶದಿಂದ ಪರಾರಿಯಾಗಿದ್ದಾರೆಯೇ?, ಪ್ರದೇಶದಲ್ಲಿ ತಮ್ಮ ಹಿಡಿತ ಕೈ ತಪ್ಪುವ ಭೀತಿಯಿಂದ ಓಡಿ ಹೋಗಿದ್ದಾರೆಯೇ? ಎಂದು ಶಂಕಿಸಲಾಗಿದೆ.

ನಕ್ಸಲ್ ಕಾರ್ಯಾಚರಣೆ ಮಾಹಿತಿ - 2024 & 25

ವರ್ಷ ತಟಸ್ಥರಾದವರು ಬಂಧಿತರು ಶರಣಾದವರು ಹೆಚ್ಚು ಬಾಧಿತ ಜಿಲ್ಲೆಗಳು
​2024 287 1000+ 837 38
​2025 (ಜನವರಿ-ಮೇ) 150 + ಇನ್ನೂ ನಡೆಯುತ್ತಿದೆ ಇನ್ನೂ ನಡೆಯುತ್ತಿದೆ 6

ಸುಮಾರು 1 ಸಾವಿರ ಶಸ್ತ್ರ ಸಜ್ಜಿತ ಬಂಡುಕೋರರ ಬೆದರಿಕೆಗಳ ನಡುವೆಯೂ ಭದ್ರತಾ ಪಡೆಗಳು ಅಪಾಯಕಾರಿ ಸ್ಥಳದಲ್ಲಿ ವಿಶ್ವಾಸದಿಂದ ಕಾರ್ಯಾಚರಣೆಯನ್ನು ಮುಂದುವರೆಸಿವೆ. ತಂತ್ರಜ್ಞಾನದ ಸಹಾಯದಿಂದ ಗುಡ್ಡ ಪ್ರದೇಶಗಳಲ್ಲಿ ಪಡೆಗಳು ಮುಂದುವರೆದಿದ್ದು, ಗುಡ್ಡದ ಮೇಲೆ ರಾಷ್ಟ್ರಧ್ವಜವನ್ನು ಹೆಮ್ಮೆಪಡುವಂತೆ ಹಾರಿಸಲಾಗಿದೆ. ಡ್ರೋನ್‌ಗಳ ಸಹಾಯ ನಿಗಾವಳಿ ಮತ್ತು ಉಪಗ್ರಹಗಳ ಸಹಾಯದಿಂದ ನಕ್ಸಲರಿಗಾಗಿ ಶೋಧವನ್ನು ತೀವ್ರಗೊಳಿಸಲಾಗಿದೆ. ಇದು ಕೇವಲ ಒಂದು ಕಾರ್ಯಾಚರಣೆ ಮಾತ್ರವಲ್ಲ, ದೇಶದ ರಾಜ್ಯವು ತನ್ನ ಭೂಮಿಯ ಪ್ರತಿಯೊಂದು ಮೂಲೆಯೂ ಬಂಡಾಯದ ನೆರಳು ಮುಕ್ತವಾಗುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂಬ ಭಾರತದ ಸ್ಪಷ್ಟ ಸಂದೇಶವಾಗಿದೆ.

ಹಲವು ವರ್ಷಗಳಿಂದ ಅಮಾಯಕರ ಪ್ರಾಣಗಳನ್ನು ಪಡೆದ ಮಾವೋವಾದಿಗಳ ಹಿಂಸಾಚಾರದ ವಿರುದ್ಧದ ಈ ಕಠಿಣ ನಿಲುವು ಬಿಜೆಪಿಯ ದೀರ್ಘಕಾಲಿನ ನೀತಿಯ ಪ್ರತಿಬಿಂಬವಾಗಿದೆ. ಹೈದರಾಬಾದ್‌ನ ಕೆಲವು ಸಂಘಟನೆಗಳ ಕಾರ್ಯಕರ್ತರು 'ಆಪರೇಷನ್ ಕಾಗರ್' ನಿಲ್ಲುಸುವಂತೆ ಒತ್ತಾಯಿಸಿದವು. ಶಾಂತಿಯನ್ನು ಪುನಃ ಸ್ಥಾಪಿಸುವ ತನಕ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂಬ ನಿಲುವನ್ನು ಸರ್ಕಾರ ತೆಗೆದುಕೊಂಡಿದೆ, ಮಾವೋವಾದಿಗಳ ಜೊತೆ ಯಾವುದೇ ಮಾತುಕತೆ ಇಲ್ಲ ಎಂದು ಹೇಳಿದೆ. ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಯಾರು ಹಿಂಸೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆಯೋ, ಬಂದೂಕು ಹಿಡಿದು ಸುತ್ತುತ್ತಾರೆಯೋ, ಅಮಾಯಕ ಜನರನ್ನು ಕೊಲ್ಲುತ್ತಾರೆಯೋ ಅವರ ಜೊತೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ & ಬಿಆರ್‌ಎಸ್‌: ಒಪ್ಪಂದಕ್ಕೆ ಕರೆ, ಹಿಂದಿನ ತಪ್ಪಿನ ಪುನರಾವರ್ತನೆ

ದೇಶ ಮುಂದುವರೆಯುತ್ತಿದ್ದರೂ ಸಹ ಹಲವಾರು ಜನರ ಹಳೆಯ ಮನಸ್ಥಿತಿಗಳು ಬದಲಾಗಿಲ್ಲ. ಬಿಜೆಪಿ ಮಾವೋವಾದಿಗಳ ವಿರುದ್ಧ ಹೋರಾಟ ಮಾಡುತ್ತಿದ್ದರೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಆರ್‌ಎಸ್‌ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಧ್ವನಿ ಎತ್ತಿವೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಮತ್ತು ಕೆಸಿಆರ್‌ ಪುತ್ರಿ ಕೆ. ಕವಿತಾ ನಕ್ಸಲರ ಜೊತೆ ಮಾತುಕತೆ ನಡೆಸಬೇಕು ಎಂದು ಬಹಿರಂಗ ಸಲಹೆಯನ್ನು ನೀಡಿದ್ದಾರೆ. ಈಗಾಗಲೇ ಯುಪಿಎ ಆಡಳಿತದ ಅವಧಿಯಲ್ಲಿ ಈ ತಂತ್ರ ವಿಫಲ ಎಂಬುದು ಸಾಬೀತಾಗಿದೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರ ''ಆಪರೇಷನ್ ಕಾಗರ್' ಆರಂಭಕ್ಕೂ ಮೊದಲು ಪ್ರಮುಖ ಮಾವೋವಾದಿ ನಾಯಕರು ಗಡಿಯನ್ನು ದಾಟಿ ಪರಾರಿಯಾಗಲು ಸಹಕಾರ ನೀಡಿದೆ ಎಂಬ ಆರೋಪವಿದೆ. ರಾಷ್ಟ್ರೀಯ ಅಭಿಯಾನಕ್ಕೆ ಬೆಂಬಲ ನೀಡುವ ಬದಲು ರಾಜಕೀಯದ ತುಷ್ಟೀಕರಣಕ್ಕೆ ಪಕ್ಷಗಳು ಮುಂದಾಗಿವೆ. ಸಾಮಾಜಿಕ ನ್ಯಾಯ ಮತ್ತು ಸೈದ್ಧಾಂತಿಕ ಬೆಂಬಲದ ಹೆಸರಿನಲ್ಲಿ ಅವರಿಗೆ ರಕ್ಷಣೆಯನ್ನು ನೀಡಲಾಗಿದೆ.

ಎಂದಿಗೂ ಇಲ್ಲ: ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಬಿಜೆಪಿ ಎಂದಿಗೂ ರಾಜಿ ಇಲ್ಲ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಸರಿಯಾಗಿಯೇ ಹೇಳಿದ್ದಾರೆ. ಕೈಯಲ್ಲಿ ಬಂದೂಕು ಹಿಡಿಯುವ, ಅಮಾಯಕರನ್ನು ಹತ್ಯೆ ಮಾಡುವವರ ಜೊತೆ ಯಾವುದೇ ಮಾತುಕತೆ ಇಲ್ಲ ಎಂದು. ಅಮಾಯಕರ ಶವಗಳ ಮೇಲೆ, ರಾಜಕೀಯ ತುಷ್ಟೀಕರಣಕ್ಕಾಗಿ ಶಾಂತಿಯನ್ನು ಕಾಪಾಡಲು ಸಾಧ್ಯವಿಲ್ಲ. ವಿಜಯದ ಬಳಿಕ ಶಾಂತಿ ಬರುತ್ತದೆ, ಶರಣಾಗತಿ ಮೂಲಕವಲ್ಲ ಎಂದು ಹೇಳಿದ್ದಾರೆ.

ಇತಿಹಾಸವನ್ನು ಮರೆಯುವಂತಿಲ್ಲ. ತೆಲಗು ರಾಜ್ಯಗಳು ಒಂದು ಕಾಲದಲ್ಲಿ ಮಾವೋವಾದಿಗಳ ಹಿಡಿತದಲ್ಲಿದ್ದವು. ದಂಗೆಕೋರರ ಪೀಪಲ್ ವಾರ್ ಗ್ರೂಪ್ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ತನ್ನ ಪ್ರಭಾವ ಹೊಂದಿತ್ತು. ಈ ಗುಂಪನ್ನು ರಾಜಕೀಯ ಶಕ್ತಿಯ ಮೂಲಕ ಮಣಿಸಲು ದಶಕಗಳ ಕಾಲ ಬೇಕಾಯಿತು. ತೆಲಂಗಾಣ ಕೆಂಪು ಕಾರಿಡಾರ್ ಆಗಲಿದೆ ಎಂಬ ಆತಂಕವನ್ನು ಹುಟ್ಟು ಹಾಕಿತ್ತು. ಆ ಮಟ್ಟಿಗೆ ದಂಗೆಕೋರರ ಗುಂಪಿನ ಚಟುವಟಿಕೆಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದವು. 2021ರ ಹೊತ್ತಿಗೆ ನಕ್ಸಲ್ ಎನ್‌ಕೌಂಟರ್‌ಗಳು ಕಡಿಮೆಯಾದವು ಮತ್ತು 250 ಬಂಡುಕೋರರು ಒಂದೇ ವರ್ಷದಲ್ಲಿ ಶರಣಾದರು. ಈ ಬೆಳವಣಿಗೆ ಚುನಾವಣೆ, ಪ್ರಜಾಪ್ರಭುತ್ವದ ಬಹುದೊಡ್ಡ ವಿಜಯವಾಯಿತು.

ವ್ಯತ್ಯಾಸಗಳಂತೂ ಸ್ಪಷ್ಟ: ಯಾವಾಗ ಯುಪಿಎ ಹಿಂಜರಿಯಿತೋ ಎನ್‌ಡಿಎ ಕಾರ್ಯಾಚರಣೆ ಕೈಗೊಂಡಿತು. ಕಾಂಗ್ರೆಸ್ ಮತ್ತು ಬಿಆರ್‌ಎಸ್‌ ವಿಫಲಗೊಂಡ ತಂತ್ರಗಳನ್ನೇ ಬಯಸಿವೆ, ಬಿಜೆಪಿ ಹೊಸ ತಂತ್ರದ ಮೊರೆ ಹೋಗಿದೆ. ಭದ್ರಗೊಳಿಸು, ಸಂಪರ್ಕದಲ್ಲಿರು, ನಕ್ಸಲ್ ಮುಕ್ತಗೊಳಿಸು. 2026ಕ್ಕೆ ದೇಶ ಸಂಪೂರ್ಣ ಮುಕ್ತವಾಗಬೇಕು ಎಂಬುದು ಗುರಿಯಾಗಿದೆ. ಭಾರತದ ಸರ್ಕಾರ ಭರವಸೆಯನ್ನು ಕೊಡುತ್ತಿದೆ. ಕಾರ್ಯಾಚರಣೆಯನ್ನೂ ಮಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+