ನನ್ನ ವಿರುದ್ಧ ಮತ್ತೊಂದು ಕೇಸ್‌ ಹಾಕಿ: ಮೋದಿ

ಕೋಲ್ಕತ್ತಾ, ಮೇ.4:: ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ ನೀಡಿದ ಚುನಾವಣಾ ಆಯೋಗದ ವಿರುದ್ಧವೇ ಮೋದಿ ಈಗ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದೆ. ಇಲ್ಲಿಯೂ ಆಯೋಗವಿದ್ದರೂ ಇನ್ನು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಚುನಾವಣಾ ಆಯೋಗವನ್ನೇ ಪ್ರಶ್ನಿಸಿದ್ದಾರೆ.ಒಂದು ವೇಳೆ ನನ್ನ ಈ ಹೇಳಿಕೆ ಸರಿಯಿಲ್ಲದಿದ್ದಲ್ಲಿ ನನ್ನ ವಿರುದ್ಧ ಮತ್ತೊಂದು ಕೇಸ್‌ ಹಾಕಿ ಎಂದು ಚುನಾವಾಣಾ ಆಯೋಗಕ್ಕೆ ಮೋದಿ ಸವಾಲು ಏಸೆದಿದ್ದಾರೆ.[ನರೇಂದ್ರ ಮೋದಿ ವಿರುದ್ಧ ಎಫ್ಐಆರ್ ದಾಖಲು]

ನರೇಂದ್ರ ಮೋದಿ ಪುಸ್ತಕದ ಹುಲಿ ಎಂದು ಲೇವಡಿ ಮಾಡಿದ್ದ ಮಮತಾ ಬ್ಯಾನರ್ಜಿ‌ಗೆ ಹೇಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ದೆಹಲಿಯ ಗದ್ದುಗೆ ಅಧಿಕಾರವನ್ನು ನೀಡಿ. ನಂತರ ನನ್ನ ಮತ್ತು ದೀದಿ ನಡುವಿನ ಸ್ಪರ್ಧೆ‌ಯಲ್ಲಿ ಬಂಗಾಳದ ನಿಜವಾದ ಹುಲಿ ಯಾರು ಎಂಬುದನ್ನು ನೋಡಿ ಎಂದು ಬಂಗಾಳದ ಜನತೆಗೆ ಕರೆ ನೀಡಿದರು.

Narendra Modi Dares Election Commission

ಚಿಟ್‌ ಫಂಡ್‌ ಹಗರಣದಲ್ಲಿ ಲಕ್ಷಾಂತರ ಜನ ಹಣ ಕಳೆದುಕೊಂಡರೂ ಸರ್ಕಾರ ಮೌನವಾಗಿದೆ. ಈ ಹಗರಣದಲ್ಲಿ ಭಾಗಿಯಾದವರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ನಿಜವಾದ ಹುಲಿಯಾದವರು ಈ ಹಗರಣದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕಿತ್ತು ಎಂದು ಎಂದು ಮಮತಾ ಬ್ಯಾನರ್ಜಿ‌ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.[ಮೋದಿ ಬೆಂಬಲಿಸಿದ ಭೈರಪ್ಪ, ಯುಆರ್‌ಎ ಏನಂದ್ರಪ್ಪ]

ಯುಪಿಎ ಅವಧಿಯಲ್ಲಿ ಭಾರತ scam ದೇಶವೆಂದು ಪ್ರಖ್ಯಾತಿಯಾಗಿದೆ. ಬಿಜಿಪಿಗೆ ಅಧಿಕಾರ ನೀಡಿದ್ದಲ್ಲಿ ದೇಶವನ್ನು skill developed ದೇಶವನ್ನಾಗಿ ಪರಿವರ್ತ‌ನೆ ಮಾಡಲಾಗುವುದು ಎಂದು ಮೋದಿ ಅಶ್ವಾಸನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+