ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಲೋಕಸಭೆ ಯುದ್ಧ, ಬಿಜೆಪಿ ಘೋಷ ವಾಕ್ಯ ಪ್ರಕಟಿಸಿದ ಮೋದಿ

|
Google Oneindia Kannada News

Recommended Video

Lok Sabha elections 2019: 2019ರ ಲೋಕಸಭೆ ಯುದ್ಧ, ಬಿಜೆಪಿ ಘೋಷ ವಾಕ್ಯ ಪ್ರಕಟಿಸಿದ ಮೋದಿ | Oneindia Kannada

ನವದೆಹಲಿ, ಫೆಬ್ರವರಿ 21: 2019ರ ಲೋಕಸಭೆ ಚುನಾವಣೆಗಾಗಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆವರು ಚರ್ಚಿಸಿ, ಪಕ್ಷದ ಚುನಾವಣಾ ಘೋಷ ವಾಕ್ಯವನ್ನು ನಿರ್ಧರಿಸಿದ್ದಾರೆ. ಈ ಘೋಷ ವಾಕ್ಯ ದೇಶದೆಲ್ಲೆಡೆ ಮೊಳಗಲಿದೆ.

ದೇಶದ ಹಲವೆಡೆ ಈಗಾಗಲೇ ಅನೇಕ ರೀತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಮೋದಿ ಚಾಲನೆ ನೀಡಿದ್ದಾರೆ.2019ರ ಎಲ್ಲಾ ಚುನಾವಣಾ ಸಂಬಂಧಿಸಿದ ಜಾಹೀರಾತುಗಳಲ್ಲಿ 'Namumkin Aab Mumbkin Hai(The Impossible is now Possible) 'ಅಸಾಧ್ಯವಾದದ್ದು ಈಗ ಸಾಧ್ಯ' ಎಂಬ ಘೋಷ ವಾಕ್ಯ ಎದ್ದು ಕಾಣಲಿದೆ.

ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ

ಮುದ್ರಣ ಮಾಧ್ಯಮ, ಸಾಮಾಜಿಕ ಜಾಲ ತಾಣಗಳು, ಮೊಬೈಲ್ ಮೂಲಕ ಪ್ರಚಾರ ಹೀಗೆ ಸಾಧ್ಯವಿರುವ ಎಲ್ಲಾ ಮಾದರಿ ಸಂಪರ್ಕ ಸಂವಹನ ಮಾಧ್ಯಮಗಳನ್ನು ಬಳಸಿಕೊಂಡು ಸರ್ಕಾರದ ಪರ ಪ್ರಚಾರ ನಡೆಸುವಂತೆ ಮೋದಿ ಸೂಚಿಸಿದ್ದಾರೆ. ಸರ್ಕಾರದ ಅಭಿವೃದ್ಧಿಪರ ಯೋಜನೆಗಳ ಅಂಕಿ ಅಂಶಗಳನ್ನು ಕಲೆ ಹಾಕಿ, ಅದನ್ನು ಜನತೆಯ ಮುಂದಿಟ್ಟು, ಹೊಸ ಭರವಸೆಯನ್ನು ಮೂಡಿಸುವುದು ಬಿಜೆಪಿಯ ಕಾರ್ಯತಂತ್ರವಾಗಿದೆ.

ಚುನಾವಣೆಗೆ ಭರದಿಂದ ಸಿದ್ಧತೆ ನಡೆಸಲಾಗಿದೆ

ಚುನಾವಣೆಗೆ ಭರದಿಂದ ಸಿದ್ಧತೆ ನಡೆಸಲಾಗಿದೆ

ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವುದಕ್ಕೂ ಮುಂಚಿತವಾಗಿ ವಿವಿಧ ಜನಪ್ರಿಯ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಪ್ರಚಾರ ಪರ ಕಿಟ್ ತಯಾರಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಸರ್ಕಾರದ ಯೋಜನೆಗಳು ಅದರ ಫಲಾನುಭವಿಗಳ ಬಗ್ಗೆ ಪ್ರಚಾರ ನೀಡುವುದು ಈ ಮೂಲಕ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸರ್ಕಾರದ ಪರ ನಿಲ್ಲುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವುದು ಬಿಜೆಪಿ ಉದ್ದೇಶ

ಯಾವ ಯಾವ ಯೋಜನೆಗೆ ಹೆಚ್ಚಿನ ಒತ್ತು

ಯಾವ ಯಾವ ಯೋಜನೆಗೆ ಹೆಚ್ಚಿನ ಒತ್ತು

ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಬೇಟಿ ಬಚಾವ್ ಬೇಟಿ ಪಡಾವೋ, ಜನ್ ಧನ್ ಯೋಜನೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗಳ ವಿವರಗಳನ್ನು ಜನರ ಮುಂದಿಟ್ಟು ಜನರಲ್ಲಿ ವಿಶ್ವಾಸ ಮೂಡಿಸಲು ಉದ್ದೇಶಿಸಲಾಗಿದೆ.

ಪಶ್ಚಿಮ ಬಂಗಾಳ ಸಮೀಕ್ಷೆ: ದೀದಿಗೆ ಕಠಿಣ ಸವಾಲೆಸೆಯಲಿದೆ ಮೋದಿ ಬಳಗಪಶ್ಚಿಮ ಬಂಗಾಳ ಸಮೀಕ್ಷೆ: ದೀದಿಗೆ ಕಠಿಣ ಸವಾಲೆಸೆಯಲಿದೆ ಮೋದಿ ಬಳಗ

2014ರ ಚುನಾವಣೆಯಲ್ಲಿ ಜನಪ್ರಿಯಗೊಂಡ ವಾಕ್ಯಗಳು

2014ರ ಚುನಾವಣೆಯಲ್ಲಿ ಜನಪ್ರಿಯಗೊಂಡ ವಾಕ್ಯಗಳು

ಎಕ್ ಭಾರತ್ ಶ್ರೇಷ್ಠ್ ಭಾರತ್, ಸಬ್ ಕ ಸಾಥ್, ಸಬ್ ಕ್ ವಿಕಾಸ್, ಅಚ್ಛೇ ದಿನ್ ಆನೇ ವಾಲ ಹೇ, ಜನ ಜನ ಮೋದಿ ಘರ್ ಘರ್ ಮೋದಿ, ಅಬ್ ಕಿ ಬಾರ್ ಮೋದಿ ಸರ್ಕಾರ್. ಇದಲ್ಲದೆ ಚಾಯ್ ಪೇ ಚರ್ಚಾ, I support Narendra Modi ಎಂಬ ಸಾಮಾಜಿಕ ಜಾಲ ತಾಣಗಳಲ್ಲಿನ ಅಭಿಯಾನಗಳು ಫಲ ನೀಡಿದವು. ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಹೆಚ್ಚಿನ ಪ್ರಚಾರ ತಂತ್ರಗಳ ಹಿಂದಿನ ಶಕ್ತಿಯಾಗಿದ್ದರು.

2019ಕ್ಕೆ ಹೆಚ್ಚೆಚ್ಚು ಚುನಾವಣಾ ಘೋಷವಾಕ್ಯಗಳು

2019ಕ್ಕೆ ಹೆಚ್ಚೆಚ್ಚು ಚುನಾವಣಾ ಘೋಷವಾಕ್ಯಗಳು

Phir Ek baar, Modi Sarkar
Saaf Niyat, Sahi vikaas
Geet Naya Gata hoon
Kaho dil se NaMo phir se
agli baar Modi sarkaar
Abki baar 400 ke paar
ಹೀಗೆ ಇನ್ನು ಅನೇಕ ಸಾರ್ವಜನಿಕರೇ ಸೃಷ್ಟಿಸಿದ, ಮೋದಿ ಭಾಷಣದ ವಾಕ್ಯಗಳು ಕೂಡಾ ಚುನಾವಣೆ ಸಂದರ್ಭದಲ್ಲಿ ಘೋಷವಾಕ್ಯಗಳಾಗಿ ಮಾರ್ಪಾಟ್ಟಾಗಿವೆ.

ಸಮೀಕ್ಷೆ : ರಾಹುಲ್ ಜನಪ್ರಿಯತೆಯ ಮಟ್ಟ ಏರಿದೆಯಾ? ಇಳಿದಿದೆಯಾ?ಸಮೀಕ್ಷೆ : ರಾಹುಲ್ ಜನಪ್ರಿಯತೆಯ ಮಟ್ಟ ಏರಿದೆಯಾ? ಇಳಿದಿದೆಯಾ?

English summary
The BJP government at the Centre which is looking to retain power in the 2019 Lok Sabha elections has been looking for a tagline. This time around the advertisement campaign of the party would go with the tagline, Namumkin Ab Mumbkin Hai (The impossible is now possible).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X