ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ
ನವದೆಹಲಿ, ಅಕ್ಟೋಬರ್ 24: ಸಿಬಿಐ ಹಂಗಾಮಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ ಮಾಡಿ ಬುಧವಾರದಂದು ಕೇಂದ್ರ ಸರ್ಕಾರ ಅದೇಶ ಹೊರಡಿಸಿದೆ.
ಸಿಬಿಐನ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ವರ್ ರಾವ್ ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳುವಂತೆ ಪ್ರಧಾನಿ ಮೋದಿ ನೀಡಿರುವ ಆದೇಶದಲ್ಲಿ ಹೇಳಲಾಗಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ನಡುವಿನ ಆಂತರಿಕ ಯುದ್ಧದ ವಾರ್ತೆ ಪ್ರಧಾನಿ ಸಚಿವಾಲಯಕ್ಕೆ ತಲುಪಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

ಭ್ರಷ್ಟಾಚಾರದ ಆರೋಪ ಹೊತ್ತುಕೊಂಡಿರುವ ಗುಜರಾತ್ ಕೇಡರ್ ನ ಅಧಿಕಾರಿ ರಾಕೇಶ್ ಅವರ ಎಲ್ಲಾ ಅಧಿಕಾರಗಳನ್ನು ಮೊಟುಕುಗೊಳಿಸಿ, ರಜೆ ಮೇಲೆ ಕಳಿಸಲಾಗಿದೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರಿಗೂ ಇದೇ ಸೂಚನೆ ಪಾಲಿಸುವಂತೆ ಸರ್ಕಾರ ಸೂಚಿಸಿದೆ.

ಭ್ರಷ್ಟಾಚಾರ ಆರೋಪ ಹೊತ್ತುಕೊಂಡಿರುವ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರು ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೊಕ್ಕಿದ್ದರು. ಮಂಗಳವಾರದಂದು ಸಿಬಿಐ ನಂ.2ಗೆ ಮಂಗಳವಾರದಂದು ಮಿಶ್ರಫಲ ಸಿಕ್ಕಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಸಲ್ಲಿಸಿರುವ ಪ್ರಕರಣ, ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರಾಕೇಶ್ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ, ಮುಂದಿನ ವಿಚಾರಣೆ ತನಕ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ಮೊಯಿನ್ ಖುರೇಷಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರಿಂದ ಲಂಚ ಕೇಳಿದ ಆರೋಪವನ್ನು ಸಿಬಿಐನ ನಂ.2 ಅಧಿಕಾರಿ ರಾಕೇಶ್ ಮೇಲೆ ಹೊರೆಸಲಾಗಿದೆ. ರಾಕೇಶ್ ಹಾಗೂ ಸಿಬಿಐ ಎಸ್ ಪಿ ದೇವೇಂದ್ರ ಸಿಂಗ್ ವಿರುದ್ಧ ಬೆದರಿಕೆ, ಫೋರ್ಜರಿ ಪ್ರಕರಣವೂ ದಾಖಲಾಗಿದೆ.












Click it and Unblock the Notifications