ಅತ್ಯಾಚಾರಿಗಳ ಎನ್ಕೌಂಟರ್ ಸಮಗ್ರ ತನಿಖೆಗೆ ಚಿದಂಬರಂ ಆಗ್ರಹ

ಹೈದರಾಬಾದ್, ಡಿಸೆಂಬರ್ 06: 27 ವರ್ಷ ವಯಸ್ಸಿನ ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಅವರ ತಂಡ ಎನ್ ಕೌಂಟರ್ ಮಾಡಿ ಹತ್ಯೆಗೈದಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಆಗ್ರಹಿಸಿದ್ದಾರೆ.

ಹೈದರಾಬಾದಿನ ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು, ಘಟನಾ ಸ್ಥಳದ ಮಹಜರು ನಡೆಸುವಾಗ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಜನರ ಮುಂದಿಡಬೇಕಿದೆ ಎಂದು ಚಿದಂಬರಂ ಹೇಳಿದರು.

ಈ ಎನ್ ಕೌಂಟರ್ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಸತ್ಯ ಎಲ್ಲರಿಗೂ ತಿಳಿಯಬೇಕಿದೆ. ಜವಾಬ್ದಾರಿಯುತ ವ್ಯಕ್ತಿಯಾಗಿ ನಾನು ಇದು ನಿಜವಾದ ಎನ್ ಕೌಂಟರ್ ಅಥವಾ ನಕಲಿ ಎನ್ ಕೌಂಟರ್ ಎಂಬುದನ್ನು ತಿಳಿಯಬಯಸುತ್ತೇನೆ ಎಂದು ಆಗ್ರಹಿಸಿದರು.

Must Be A Thorough Probe: P Chidambaram On Killing Of Rape Accused

ಐಎನ್ ಎಕ್ಸ್ ಮಾಧ್ಯಮ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಪಿ ಚಿದಂಬರಂಗೆ ಬುಧವಾರದಂದು ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ. ಸದ್ಯ ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದಕ್ಕೂ ಮುನ್ನ ಚಿದಂಬರಂ ಪುತ್ರ ಕಾರ್ತಿ ಅವರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಇಂಥ ಪ್ರಕರಣಗಳಲ್ಲಿ ತ್ವರಿತಗತಿಯಲ್ಲಿ ನ್ಯಾಯ ಸಿಗಬೇಕು ನಿಜ, ಆದರೆ, ಎನ್ ಕೌಂಟರ್ ಇದಕ್ಕೆ ಉತ್ತರವಲ್ಲ ಎಂದಿದ್ದರು. ಈ ಬಗ್ಗೆ ಟ್ವೀಟ್ ಮಾಡಿ, ರೇಪ್ ಮಾಡುವುದು ಹೀನ ಕೃತ್ಯ, ಇದನ್ನು ಕಾನೂನಿನ ಮೂಲಕವೇ ನಿಯಂತ್ರಿಸಿ, ಬಗ್ಗುಬಡಿಯಬೇಕು, ಆದರೆ, ಎನ್ ಕೌಂಟರ್ ಹತ್ಯೆ ನಮ್ಮ ಸಮಾಜ ಪೂರಕವಾದ ಕ್ರಮವಲ್ಲ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+