ಮುಂಬೈ- ಪಟ್ನಾ ನಡುವೆ ಸುವಿಧಾ ಸೂಪರ್‌ಫಾಸ್ಟ್ ರೈಲು
ಮುಂಬೈ, ಆಗಸ್ಟ್. 08: ರೈಲ್ವೆ ಇಲಾಖೆ ಆಗಸ್ಟ್ 9 ರಿಂದ ಮುಂಬೈ- ಪಟ್ನಾ ನಡುವೆ ವಾರಕ್ಕೆ ಎರಡು ದಿನಗಳ ಸುವಿಧಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲಿದೆ.
22355 ನಂಬರಿನ 'ಸುವಿಧಾ ಸೂಪರ್‌ಫಾಸ್ಟ್' ಪ್ರತೀ ಭಾನುವಾರ ಮತ್ತು ಬುಧವಾರ ಸಂಚಾರ ಮಾಡುತ್ತದೆ. ಮಧ್ಯಾಹ್ನ 1 ಗಂಟೆಗೆ ಪಟ್ನಾದಿಂದ ಹೊರಡು ಮರುದಿನ ಮಧ್ಯಾಹ್ನ 4.05 ಕ್ಕೆ ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ತಲುಪಲಿದೆ.[ಮಾಮೂಲಿ ಟ್ರೈನೇ ಸುರಕ್ಷಿತವಾಗಿಲ್ಲ, ಬುಲೆಟ್ ಟ್ರೈನ್ ಬಿಡ್ತಾರಂತೆ!]

22356 ನಂಬರಿನ ಸುವಿಧಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಆಗಸ್ಟ್ 11 ರಿಂದ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 11.05ಕ್ಕೆ ಮುಂಬಯಿ ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ ಹೊರಟು ಮರುದಿನ ಮಧ್ಯಾಹ್ನ 3.35ಕ್ಕೆ ಪಟ್ನಾಗೆ ಆಗಮಿಸಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.[ಮಧ್ಯಪ್ರದೇಶದ ಅವಳಿ ರೈಲು ದುರಂತದ ಚಿತ್ರಗಳು]
ರೈಲ್ವೆಗೆ ಬಂಡವಾಳ ಬೇಕು
ರೈಲ್ವೆ ಇಲಾಖೆ ಇಟ್ಟುಕೊಂಡಿರುವ ಗುರಿ ಸಾಧಿಸಬೇಕಾದರೆ ಸುಮಾರು 1 ಲಕ್ಷ ಕೋಟಿ ರು. ಅಗತ್ಯವಿದೆ. ದೇಶಿಯ ಮತ್ತು ವಿದೇಶಿ ಬಂಡವಾಳದಾರರು ಮುಕ್ತವಾಗಿ ಹಣ ಹೂಡಿಕೆ ಮಾಡಬಹುದು. ಮುಂದಿನ ಐದು ವರ್ಷಗಳಲ್ಲಿ ಸುಮಾರು 8.5 ಲಕ್ಷ ಕೋಟಿ ರು. ಬಳಸಿಕೊಂಡು ರೈಲ್ವೆಯನ್ನು ಪ್ರಥಮ ಸ್ಥಾನದಲ್ಲಿ ತಂದು ನಿಲ್ಲಿಸಲಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.












Click it and Unblock the Notifications