ಕುಡಿದ ಮತ್ತಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಮುಂಬೈ ಆಟೋ ಚಾಲಕ!
ಪ್ರಯಾಣ ದರ ಪಾವತಿಗೆ ಸಂಬಂಧಿಸಿದ ವಿವಾದದಲ್ಲಿ ಮದ್ಯದ ಅಮಲಿನಲ್ಲಿದ್ದ ಆಟೋ ಚಾಲಕ ಪುರುಷ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಹೀಗಾಗಿ 25 ವರ್ಷದ ಆಟೋ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಘಾಟ್‌ಕೋಪರ್‌ನ ಉಪನಗರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಆಟೋರಿಕ್ಷಾವನ್ನು ಬುಕ್ ಮಾಡಿದ 31 ವರ್ಷದ ಪುರುಷ ಪ್ರಯಾಣಿಕ ಈ ದೂರು ನೀಡಿದ್ದಾರೆ. ಕುಡಿದ ಅಮಲಿನಲ್ಲಿದ್ದ ಚಾಲಕ ಪ್ರಯಾಣಿಕನನ್ನು ಗೊಂದಲಗೊಳಿಸಿದ್ದಾನೆ. ಪ್ರಯಾಣಿಕ ತಲುಪಬೇಕಿದ್ದ ಸ್ಥಳಕ್ಕೆ ತಲುಪಿಸುವ ವೇಳೆ ಆಟೋವನ್ನು ಸುಖಾಸುಮ್ಮನೆ ಸುತ್ತಾಡಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಒಂದು ಗಂಟೆಯ ನಂತರ ಪ್ರಯಾಣಿಕನು ಅಂತಿಮವಾಗಿ ರಿಕ್ಷಾದಿಂದ ಇಳಿದರು. ಚಾಲಕ ರೂ. 250 ಶುಲ್ಕವನ್ನು ಪಾವತಿಸಲು ಕೇಳಿದ್ದಾನೆ. ಆದರೆ ಪ್ರಯಾಣಿಕ ಆಟೋ ಮೀಟರ್‌ನಲ್ಲಿ ತೋರಿಸದ ರೂ. 100 ಹಣವನ್ನು ಮುಂದಾಗಿದ್ದಾರೆ. ಆಗ ಇದು ವಾಗ್ವಾದಕ್ಕೆ ಕಾರಣವಾಗಿದೆ. ಕೋಪದ ಭರದಲ್ಲಿ ಚಾಲಕನು ಬಲವಂತವಾಗಿ ವ್ಯಕ್ತಿಯನ್ನು ಕರೆದೊಯ್ದಿದ್ದಾನೆ. ಹತ್ತಿರದ ಉದ್ಯಾನದಲ್ಲಿ ಪ್ರತ್ಯೇಕವಾದ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
ತರುವಾಯ ಚಾಲಕನು ಆ ವ್ಯಕ್ತಿಯನ್ನು ಎಟಿಎಂ ಕಿಯೋಸ್ಕ್‌ಗೆ ಕರೆದುಕೊಂಡು ಹೋದನು ಮತ್ತು ರೂ 200 ಕೊಡುವಂತೆ ಒತ್ತಾಯಿಸಿದ್ದಾನೆ. ಚಾಲಕನು ಅವನನ್ನು ಬಿಡುವ ಮೊದಲು ಅವನ ಮೊಬೈಲ್ ಫೋನ್ ಮತ್ತು ಎಟಿಎಂ ಕಾರ್ಡ್ ಅನ್ನು ಕಸಿದುಕೊಂಡಿದ್ದಾನೆ ಚಾಲಕ ಕಳುಹಿಸಿದ್ದಾನೆ.
ಮಂಗಳವಾರ ಪ್ರಯಾಣಿಕ ತಮ್ಮ ಮೊಬೈಲ್ ಫೋನ್ ಕಳ್ಳತನದ ಬಗ್ಗೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ್ದಾನೆ. ಆರಂಭದಲ್ಲಿ ಸುಮ್ಮನಿದ್ದ ಆತ ಕೊನೆಗೆ ಇಡೀ ಘಟನೆಯನ್ನು ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ 377 (ಸಮ್ಮತಿಯಿಲ್ಲದ ಅಸ್ವಾಭಾವಿಕ ಲೈಂಗಿಕ ಸಂಭೋಗ) ಮತ್ತು 394 (ದರೋಡೆ ಮಾಡುವಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು) ಸೇರಿದಂತೆ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ ಚಾಲಕನನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಅಪಹರಣ ಘಟನೆ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಅಪಹರಿಸಲು ಕಾರಿನಲ್ಲಿ ಬಂದ ಕೆಲವು ವ್ಯಕ್ತಿಗಳು ಇಬ್ಬರು ವಿದ್ಯಾರ್ಥಿನಿಯರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಬಂದ ದೂರುಗಳ ಆಧಾರದ ಮೇಲೆ ದೆಹಲಿ ಪೊಲೀಸರು ಬುಧವಾರ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಒಂದು ಪ್ರಕರಣವನ್ನು ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ದಾಖಲಿಸಿದ್ದರೆ, ಇನ್ನೊಂದು ಕಿರುಕುಳ ಮತ್ತು ಅಪಹರಣ ಯತ್ನಕ್ಕೆ ಸಂಬಂಧಿಸಿದಂತೆ ದಾಖಲಾಗಿದೆ.
ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಬಳಸಿದ ವಾಹನವನ್ನು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬುಧವಾರ ಮುಂಜಾನೆ, ವಾರ್ಸಿಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಹಲ್ಲೆಯ ನಂತರ ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಮತ್ತು ಒಗ್ಗಟ್ಟಿನ ಮೆರವಣಿಗೆಯನ್ನು ನಡೆಸಿದವು.












Click it and Unblock the Notifications