"ಅನಂತ್-ರಾಧಿಕಾ ಪ್ರೀ ವೆಡ್ಡಿಂಗ್" ಶೂಟ್ ಮಾಡಿದ ಫೋಟೋಗ್ರಾಫರ್ ಸಂಭಾವನೆ ಎಷ್ಟು?
ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಜುಲೈ 12 ರಂದು ನಡೆಯಲಿದೆ. ಅವರು ರಾಧಿಕಾ ಮರ್ಚೆಂಟ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಸಂಭ್ರಮ ಭರದಿಂದ ಸಾಗಿದೆ.
ಇವರ ಎರಡನೇ ವಿವಾಹಪೂರ್ವ ಪಾರ್ಟಿಯನ್ನು ಯುರೋಪ್‌ನ ಐಷಾರಾಮಿ ಬೋಟ್‌ನಲ್ಲಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯ ಫೋಟೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಪಾರ್ಟಿ ಎಷ್ಟು ಗ್ರ್ಯಾಂಡ್ ಆಗಿತ್ತು ಎಂಬುದು ತಿಳಿಯ ಬಹುದು. ಈ ಫೋಟೋಗಳನ್ನು ಜೋಸೆಫ್ ರಾಧಿಕ್ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ಯಾರು ಈ ಜೋಸೆಫ್ ರಾಧಿಕ್?
ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿರುವ ಫೋಟೋಗಳನ್ನು ಜೋಸೆಫ್ ರಾಧಿಕ್ ಸೆರೆ ಹೆಡಿದಿದ್ದಾರೆ. ಈ ಜೋಡಿ ಫೋಟೋಗಳಲ್ಲಿ ಸಖತ್ ಕ್ಯೂಟ್ ಆಗಿ ಕಾಣುತ್ತದೆ. ಇವರು ತಮ್ಮ ಕೆಲಸಕ್ಕೆ ಭಾರಿ ಸಂಭವಾನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.
ಜೋಸೆಫ್ ಈ ಮೊದಲು ಏನ್ ಮಾಡ್ತಾ ಇದ್ದರು
ಜೋಸೆಫ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಳ್ಳುವ ಮೊದಲು, ಎಲ್ಲರಂತೆ ಉದ್ಯಗವನ್ನು ಮಾಡುತ್ತಿದ್ದರು. ಛಾಯಾಗ್ರಹಣ ಮಾಡುವ ಮೊದಲು ಜೋಸೆಫ್ ಮೂರು ವರ್ಷಗಳ ಕಾಲ ಕಾರ್ಪೊರೇಟ್ ಕೆಲಸದಲ್ಲಿ ಕೆಲಸ ಮಾಡಿದರು. ಇದಕ್ಕಾಗಿ ಅವರು ಆರು ವರ್ಷಗಳ ಕಾಲ ಎಂಜಿನಿಯರಿಂಗ್ ಮತ್ತು ವ್ಯವಹಾರ ಅಧ್ಯಯನ ಮಾಡಿದ್ದಾರೆ. ಆದರೆ, ಅವರು ಕಾರ್ಪೊರೇಟ್ ಉದ್ಯೋಗದಲ್ಲಿ ಕೆಲಸ ಮಾಡಿದಾಗ ಆ ಕೆಲಸ ಅವರಿಗೆ ಖುಷಿ ನೀಡಲಿಲ್ಲ. ಬದಲಿಗೆ ತಮ್ಮ ಇಷ್ಟದ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡರು.
ಜೋಸೆಫ್ ಸಂಭಾವನೆ ಎಷ್ಟು?
ಛಾಯಾಗ್ರಾಹಕ ಜೋಸೆಫ್ ರಾಧಿಕ್ ಅವರು ದಿನಕ್ಕೆ 1.25 ಲಕ್ಷದಿಂದ 1.50 ಲಕ್ಷ ರೂಪಾಯಿಗಳವರೆಗೆ ಭಾರಿ ಶುಲ್ಕವನ್ನು ವಿಧಿಸುತ್ತಾರೆ. ಇದಲ್ಲದೆ, ಅವರ ಪ್ರಯಾಣದ ವೆಚ್ಚವನ್ನು ಸಹ ಗ್ರಾಹಕರು ಭರಿಸಬೇಕು. ಇದನ್ನು ಬಿಟ್ಟು ಅವರಿಗೆ ಊಟ, ಇರಲು ವ್ಯವಸ್ಥೆಯನ್ನು ಸಹ ಕರೆದುಕೊಂಡು ಹೋದವರೇ ಮಾಡಬೇಕು. ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ಫೋಟೋಗಳಲ್ಲಿ ಕಾರ್ಯಕ್ರಮದ ಭವ್ಯತೆ ಕಣ್ಣು ಮುಂದೆ ಬರುತ್ತದೆ.

ಕ್ರಿಕೆಟ್ ಜಗತ್ತಿನ ಅನೇಕ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳ ಮದುವೆಯ ಫೋಟೋಗಳನ್ನು ತೆಗೆದಿದ್ದಾರೆ. ಇವರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸೇರಿದ್ದಾರೆ. ಇದಲ್ಲದೇ ಅತಿಯಾ ಶೆಟ್ಟಿ, ಕೆಎಲ್ ರಾಹುಲ್ ಸೇರಿದಂತೆ ಹಲವು ತಾರೆಯರ ಮದುವೆಯನ್ನು ತಮ್ಮ ಕ್ಯಾಮರಾದಲ್ಲಿ ಇವರು ಸೆರೆ ಹಿಡಿದಿದ್ದಾರೆ.
ಬಜೆಟ್ ಎಷ್ಟು?
ವರದಿಗಳ ಪ್ರಕಾರ, ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೊದಲ ವಿವಾಹಪೂರ್ವ ಪಾರ್ಟಿಯ ಬಜೆಟ್ 1200 ಕೋಟಿ ರೂಪಾಯಿಗಳು, ಇದರಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಾರೆಗಳು ಭಾಗವಹಿಸಿದ್ದರು. ತಮ್ಮ ಎರಡನೇ ವಿವಾಹ ಪೂರ್ವ ಪಕ್ಷದ ಬಗ್ಗೆ ಮಾತನಾಡುತ್ತಾ, 'ಟೈಮ್ಸ್ ಆಫ್ ಇಂಡಿಯಾ' ವರದಿ ಪ್ರಕಾರ, ಅವರು ಸುಮಾರು 7,500 ಕೋಟಿ ರೂ.ಗೆ ಪಾರ್ಟಿಗಾಗಿ ಕ್ರೂಸ್ ಅನ್ನು ಬುಕ್ ಮಾಡಿದ್ದರು ಎಂದು ವರದಿ ಆಗಿದೆ.
ಅನಂತ್ ಮತ್ತು ರಾಧಿಕಾ ವಿವಾಹ ಪೂರ್ವ ಸಮಾರಂಭ ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ನಡೆದಿದೆ. ಇಟಲಿಯ ಪೋರ್ಟೊಫಿನೊದಲ್ಲಿ ಐಷಾರಾಮಿ ವಿಹಾರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿಸಿಲಿಯ ಪಲೆರ್ಮೊದಲ್ಲಿ ಅತಿಥಿಗಳನ್ನು ಮೊದಲ ದಿನ ಆಹಾರದೊಂದಿಗೆ ಸ್ವಾಗತಿಸಲಾಯಿತು. ಅದರ ನಂತರ ಇಟಾಲಿಯನ್ ಥೀಮ್ ಪಾರ್ಟಿ ಇತ್ತು. ಅದಕ್ಕೆ 'ಸ್ಟಾರಿ ನೈಟ್' ಎಂದು ಹೆಸರಿಸಲಾಯಿತು. ಈ ಪಾರ್ಟಿಯೊಂದಿಗೆ ಮೊದಲ ದಿನ ಕೊನೆಗೊಂಡಿತು. ಹೀಗೆ ನಾಲ್ಕು ದಿನ ಭರ್ಜರಿ ಪಾರ್ಟಿ ಮಾಡಲಾಯಿತು.












Click it and Unblock the Notifications