Mukesh Ambani: ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ದಿನ ಪ್ರಾರಂಭವೇ ಈ ಕೆಲಸದಿಂದ; ನೀತಾ ಅಂಬಾನಿಯೇ ಪೇರಣೆಯಂತೆ!
Mukhesh Ambani: ಭಾರತದ ಶ್ರೀಮಂತರ ಸಾಲಿನಲ್ಲಿ ನಿಲ್ಲುವವರು ಮುಖೇಶ್ ಅಂಬಾನಿ. ಅಂಬಾನಿ ಎಂದ ಕೂಡಲೇ ಇವರು ಬೆಳಗ್ಗೆ ಎದ್ದ ಕೂಡಲೇ ಷೇರು ಮಾರುಕಟ್ಟೆಯನ್ನು ಟ್ರ್ಯಾಕ್ ಮಾಡ್ತಾರೆ. ಬಿಸಿ ಬಿಸಿ ಕಾಫಿ ಕುಡಿಯೋ ಮೂಲಕ ದಿನ ಶುರು ಮಾಡ್ತಾರೆ ಅಂಥೆಲ್ಲಾ ಲೆಕ್ಕ ಹಾಕುವವರೇ ಹೆಚ್ಚು. ಆದ್ರೆ ಮುಖೇಶ್ ಅಂಬಾನಿ ಎದ್ದ ಕೂಡಲೇ ಬ್ಯುಸಿನೆಸ್ ಬಗ್ಗೆ ಯೋಚಿಸುವುದೂ ಇಲ್ಲ, ಕಾಫಿ, ಟೀ ಬಗ್ಗೆ ಕುಡಿಯುವುದೂ ಇಲ್ಲ. ಅವರ ದಿನ ಶುರುವಾಗುವುದೇ ಬೇರೆ ರೀತಿಯಲ್ಲಿ.
2017 ರಲ್ಲಿ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರೊಂದಿಗಿನ ಮಾತುಕತೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ತನ್ನ ದಿನ ಯಾವ ರೀತಿ ಶುರುವಾಗುತ್ತದೆ. ತಾನು ಎದ್ದ ಕೂಡಲೇ ಏನು ಮಾಡುತ್ತೇವೆ ಎನ್ನುವುದರ ಬಗ್ಗೆ ಮುಕ್ತಾವಾಗಿ ಮಾತಾಡಿದ್ದಾರೆ. ತಮ್ಮ ದಿನಕ್ಕೆ ಪಾಸಿಟಿವ್ ಎನರ್ಜಿ, ಸ್ಪಷ್ಟತೆ, ನೀಡುವ ಮುಖ್ಯ ಅಭ್ಯಾಸದೊಂದಿಗೆ ಇವರ ದಿನ ಆರಂಭವಾಗುವುದಂತೆ.

Mukhesh Ambani: ಅಂಬಾನಿ ದಿನ ಆರಂಭವಾಗುವುದೇ ಹೀಗೆ
ನೀತಾ ಅಂಬಾನಿ ಪ್ರಭಾವದಿಂದ, ಬೆಳಗ್ಗೆ ಎದ್ದ ಕೂಡಲೇ ನಾನು ಮಾಡುವ ಮೊದಲ ಕೆಲಸವೆಂದರೆ ದೇವರ ಪೂಜೆ ಮತ್ತು ಪ್ರಾರ್ಥನೆ ಎಂದು ಹೇಳಿದ್ದಾರೆ. ಇದು ಕೇವಲ ಅವರ ಅಭ್ಯಾಸವಾಗಿ ಉಳಿದಿಲ್ಲ. ಅವರ ಮಕ್ಕಳು, ಮೊಮ್ಮಕ್ಕಳು ಕೂಡಾ ಈ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆಯಂತೆ. ತನ್ನ ತಲೆಮಾಡಿನುದ್ದಕ್ಕೂ ಈ ಅಭ್ಯಾಸ ಮುಂದುವರೆಯುತ್ತದೆ ಎನ್ನುವುದು ಅವರ ನಂಬಿಕೆ.
Mukhesh Ambani: ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತದೆ
ನಾವು ಬೆಳಿಗ್ಗೆ ಮಾಡುವ ಪ್ರಾರ್ಥನೆ ಮನಸ್ಸಿನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದರ ಬಗ್ಗೆ ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ನ ಎಂಪವರ್‌ನ ಮನಶ್ಶಾಸ್ತ್ರಜ್ಞೆ ರುತುಜಾ ವಾಲಾವಾಲ್ಕರ್ ವಿವರಿಸಿದ್ದಾರೆ. ಬೆಳಿಗ್ಗೆ ನಾವು ಎದ್ದ ತಕ್ಷಣದ ಕೆಲವು ಸಮಯ ಅತ್ಯಂತ ಸೂಕ್ಷ್ಮ ಮತ್ತು ಪ್ರಾಮುಖ್ಯವಾಗಿರುತ್ತದೆ. ಮುಂಜಾನೆ ನಮ್ಮ ಮನಸ್ಸಿನಲ್ಲಿ ಬರುವ ಭಾವನೆಗಳು, ಆಲೋಚನೆಗಳು, ನಾವು ಮಾಡುವ ಕೆಲಸ ನಮ್ಮ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರಾರ್ಥನೆ ಮಾಡುವುದು, ದೇವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ದಿನದ ಆರಂಭ ಮಾಡಿದರೆ ಉತ್ಸಾಹಭರಿತ ವಾತಾವರಣ ಸೃಷ್ಟಿಯಾಗುತ್ತದೆ. ಮಾನಸಿಕ ಒತ್ತಡವನ್ನು ಸರಿಯಾಗಿ ನಿರ್ವಹಿಸುವ ಶಕ್ತಿ ಸಿಗುತ್ತದೆ ಎಂದು ಹೇಳಿದ್ದಾರೆ.
ಹೊಸ ಭರವಸೆ ಮೂಡಿಸಬಹುದು
ಪ್ರಾರ್ಥನೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅರ್ಥವಾಗಬಹುದು. ನಂಬಿಕೆ ಮತ್ತು ಭರವಸೆ ಇದ್ದವರಿಗೆ ಕಷ್ಟದ ಸಮಯದಲ್ಲಿ ಅಗತ್ಯವಿರುವ ಸಾಂತ್ವನ ಮತ್ತು ಭರವಸೆಯನ್ನು ಪ್ರಾರ್ಥನೆ ನೀಡುತ್ತದೆ. ಮಾತ್ರವಲ್ಲ ತನ್ನೊಂದಿಗೆ ಯಾರೂ ಇಲ್ಲ ತಾನು ಒಂಟಿ ಎನ್ನುವ ಭಾವನೆಯನ್ನು ಬರಲು ಈ ಪ್ರಾರ್ಥನೆ ಬಿಡುವುದಿಲ್ಲವಂತೆ. ಇದು ಧಾರ್ಮಿಕ ಅಂಶವಾದರೆ ನಾವು ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಚಿಂತಿಸಲು ಕೂಡಾ ಇದು ಅವಕಾಶ ನೀಡುತ್ತದೆ.
ಭಾವನೆಗಳು ನಿಯಂತ್ರಣದಲ್ಲಿ ಇರುವುದು
ಇನ್ನು ಯಾವ ವ್ಯಕ್ತಿ ಕೃತಜ್ಞತೆಯನ್ನು ತೋರಿಸುವ ಅಭ್ಯಾಸ ಹೊಂದಿರುತ್ತಾನೆಯೇ ಅವರು ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ. ಹೆಚ್ಚು ಆಶಾವಾದ ಮತ್ತು ಸಂತೋಷವನ್ನು ಹೊಂದಿರುತ್ತಾರೆ ಎನ್ನುವ ಅಂಶ ಹಲವಾರು ಸಂಶೋಧನೆಗಳಲ್ಲಿ ಸಾಬೀತಾಗಿದೆ ಎಂದು ವಾಲಾವಾಲ್ಕರ್ ಹೇಳಿದ್ದಾರೆ. ನಿತ್ಯ ಪ್ರಾರ್ಥನೆ ಮೂಲಕ ದಿನದ ಆರಂಭ ಮಾಡುವವರು ತಮ್ಮ ಭಾವನೆಗಳನ್ನು ಚೆನ್ನಾಗಿ ನಿಯಂತ್ರಿಸಿಕೊಳ್ಳುತ್ತಾರೆ.ಇವರು ಉತ್ತಮ ಸಂಬಂಧಗಳನ್ನು ಹೊಂದಿರುತ್ತಾರೆ.
ಪ್ರಾರ್ಥನೆ ಮೂಲಕ ದಿನದ ಆರಂಭದಲ್ಲೇ ನರಮಂಡಲವನ್ನು ಶಾಂತಗೊಳಿಸಬಹುದು. ಈ ಮೂಲಕ ದಿನವಿಡೀ ಎದುರಾಗುವ ಸವಾಲುಗಳು ಒತ್ತಡ ಮತ್ತು ನಿರಾಶೆಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಸಿಗುತ್ತದೆ.ಕೆಲಸ ಕಾರ್ಯಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಸಾಧ್ಯವಾಗುತ್ತದೆ. ಏನೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಮನಸ್ಸು ಸಿದ್ದವಾಗಿರುತ್ತದೆ.
ಪ್ರಾರ್ಥನೆ ಬದಲು ಹೀಗೂ ಮಾಡಬಾರದು
ಇನ್ನು ಇಷ್ಟವಿಲ್ಲದಿದ್ದರೂ ಬೆಳಗ್ಗೆ ಎದ್ದು ಎಲ್ಲರೂ ಪ್ರಾರ್ಥನೆ ಮಾಡಲೇ ಬೇಕು ಎಂದು ಹೇಳುವುದಿಲ್ಲ. ಪ್ರಾರ್ಥನೆಯ ಪ್ರಮುಖ ಉದ್ದೇಶವೆಂದರೆ ದಿನವನ್ನು ಉತ್ತಮ ರೀತಿಯಲ್ಲಿ ಕಳೆಯಲು ಮನಸ್ಸನ್ನು ಸಿದ್ದಪಡಿಸುವುದು. ಹಾಗಾಗಿ ಅದೇ ಮಾನಸಿಕ ಫಲಿತಾಂಶ ನೀಡುವ ಬೇರೆ ಅಭ್ಯಾಸಗಳನ್ನು ಕೂಡಾ ಮೈಗೂಢಿಸಿಕೊಳ್ಳಬಹುದು.
Mukhesh Ambani ಪ್ರಾರ್ಥನೆಯ ಗುಟ್ಟು!
ಐದು ನಿಮಿಷಗಳ ಕಾಲ ಮೌನವಾಗಿ ಕುಳಿತುಕೊಳ್ಳುವುದು.
ನೀವು ಕೃತಜ್ಞರಾಗಿರುವ ಮೂರು ವಿಷಯಗಳನ್ನು ಬರೆದಿಟ್ಟುಕೊಳ್ಳುವುದು. ದಿನಕ್ಕೆ ಒಂದು ಉದ್ದೇಶಪೂರ್ವಕ ಚಿಂತನೆ ಮಾಡುವುದು.
ಸ್ಟ್ರೆಚಿಂಗ್.
ಕೆಲವು ನಿಮಿಷಗಳ ಕಾಲ ಹೊರಗೆ ನಡೆಯುವುದು
ಎದ್ದ ಕೂಡಲೇ ಸುಮಾರು ಅರ್ಧ ಗಂಟೆಯವರೆಗೆಯಾದರೂ ಫೋನ್‌ನಿಂದ ದೂರ ಇರಿ.
ಇವೆಲ್ಲವೂ ಕೂಡಾ ಮಾನಸಿಕವಾಗಿ ನಮ್ಮನ್ನು ಗಟ್ಟಿಯಾಗಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಹೀಗೆಲ್ಲ ಮಾಡುವ ಮೂಲಕ ನಮ್ಮ ಮುಂಜಾನೆಯನ್ನು ಉತ್ತಮ ರೀತಿಯಲ್ಲಿ ಶುರು ಮಾಡುವುದಷ್ಟೇ ಉದ್ದೇಶವಾಗಿರಬಾರದು. ಬದಲಿಗೆ ಗೊತ್ತು ಗುರಿಯಿಲ್ಲದೆ ದಿನವನ್ನು ಆರಂಭಿಸುವ ಬದಲು ಪ್ರಜ್ಞಾಪೂರ್ವಕವಾಗಿ ದಿನವನ್ನು ಪ್ರಾರಂಭಿಸುತ್ತಿದ್ದೀರಿ ಎನ್ನುವುದನ್ನು ಮನಸ್ಸಿಗೆ ನೆನಪಿಸಲು ಕೆಲವು ನಿಮಿಷಗಳನ್ನು ಮೀಸಲಿಡುವುದು ಒಳ್ಳೆಯದು.


Click it and Unblock the Notifications
