ಆಸ್ಪತ್ರೆಯಲ್ಲಿ ಅತ್ಯಾಚಾರ: ಇಬ್ಬರು ಸಿಬ್ಬಂದಿಗಳ ಅರೆಸ್ಟ್

ಅನಾರೋಗ್ಯದ ನಿಮಿತ್ತ ತನ್ನ ಮಗಳನ್ನು ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದು, ಅಂದಿನಿಂದಲೂ ಆಕೆ ಮಗಳನ್ನು ನೋಡಿಕೊಂಡು ಆಸ್ಪತ್ರೆಯಲ್ಲಿ ಉಳಿದಿದ್ದರು.
ಅ. 19ರ ರಾತ್ರಿ ಮಹಿಳೆಯು ಶೌಚಾಲಯಕ್ಕೆ ಹೋಗಿ ಹೊರ ಬಂದಾಗ ಅಲ್ಲಿಯೇ ಇದ್ದ ವಾರ್ಡ್ ಬಾಯ್ ದೀಪಕ್ ಮಾಂಝಿ (28) ಮತ್ತು ಸೆಕ್ಯೂರಿಟಿಗಾರ್ಡ್ ಆದಿತ್ಯ ಬರ್ಗುಜಾರ್ (20) ಆಕೆಯನ್ನು ಆಸ್ಪತ್ರೆಯ ಪಕ್ಕದ ನಿರ್ಜನ ಕಟ್ಟಡವೊಂದಕ್ಕೆ ಎಳೆದೊಯ್ದು ಅತ್ಯಾಚಾರ ವೆಸಗಿದ್ದಾರೆ. ಆರೋಪಿಗಳಿಬ್ಬರೂ ವಿಷಯವನ್ನು ಯಾರಿಗೂ ಹೇಳದಂತೆ ಬಾಧಿತ ಮಹಿಳೆಗೆ ಪ್ರಾಣ ಬೆದರಿಕೆಯೊಡ್ಡಿದ್ದರು.
ಆದರೆ ಮಹಿಳೆಯು ಧೈರ್ಯ ಮಾಡಿ, ನಡೆದ ಘಟನೆಯನ್ನು ತನ್ನ ಗಂಡನಿಗೆ ತಿಳಿಸಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications