ಅಮೂಲ್ ಬಳಿಕ ಮದರ್ ಡೈರಿ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ
ನವದೆಹಲಿ, ಮಾರ್ಚ್ 05: ಅಮುಲ್ ಮತ್ತು ಪರಾಗ್ ಮಿಲ್ಕ್ ಫುಡ್ಸ್ ಹಾಲಿನ ದರದಲ್ಲಿ ಏರಿಕೆ ಮಾಡಿದ ನಂತರ, ಮದರ್ ಡೈರಿ ಹಾಲಿನ ದರ ಏರಿಕೆಯನ್ನು ಶನಿವಾರ ಘೋಷಣೆ ಮಾಡಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಭಾನುವಾರದಿಂದ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಿದೆ.
ಸಂಗ್ರಹಣೆ ವೆಚ್ಚದಲ್ಲಿ ಏರಿಕೆಯಾದ ಕಾರಣದಿಂದಾಗಿ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. "ಹೆಚ್ಚುತ್ತಿರುವ ಸಂಗ್ರಹಣೆ ಬೆಲೆಗಳು (ರೈತರಿಗೆ ಪಾವತಿಸಿದ ಮೊತ್ತ), ಇಂಧನ ವೆಚ್ಚಗಳು ಮತ್ತು ಪ್ಯಾಕೇಜಿಂಗ್ ವಸ್ತುಗಳ ವೆಚ್ಚಗಳ ದೃಷ್ಟಿಯಿಂದ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಏರಿಕೆ ಮಾಡಲಾಗುತ್ತದೆ," ಎಂದು ಮದರ್ ಡೈರಿ ಹೇಳಿದೆ.
Mother Dairy increases the price of milk by Rs 2. The prices will come into effect from tomorrow (March 6, 2022) pic.twitter.com/tuUy4u1Y6N
— ANI (@ANI) March 5, 2022
"ಮಾರ್ಚ್ 6, 2022 ರಿಂದ ಜಾರಿಗೆ ಬರುವಂತೆ ದೆಹಲಿ ಎನ್‌ಸಿಆರ್‌ನಲ್ಲಿ ಮದರ್ ಡೈರಿಯು ತನ್ನ ಹಾಲಿನ ಬೆಲೆಯನ್ನು 2/ಲೀಟರ್‌ಗೆ ಏರಿಸಲಿದೆ," ಎಂದು ಹೇಳಿಕೆಯಲ್ಲಿ ಕಂಪನಿಯು ಉಲ್ಲೇಖ ಮಾಡಿದೆ. ಕಂಪನಿಯು ವಿವಿಧ ವೆಚ್ಚಗಳಲ್ಲಿ ಏರಿಕೆಯನ್ನು ಕಂಡಿದೆ. ವೆಚ್ಚವು ಬಹುಪಟ್ಟು ಹೆಚ್ಚಾಗಿದೆ. ಜುಲೈ 2021 ರಿಂದ ಸಂಗ್ರಹಣೆ ಬೆಲೆಗಳು ಮಾತ್ರವೇ 8-9 ಪ್ರತಿಶತದಷ್ಟು ಹೆಚ್ಚಾಗಿದೆ. ಇತರ ವೆಚ್ಚಗಳು ಸಹ ಹೆಚ್ಚಾಗಿದೆ ಎಂದು ಸಂಸ್ಥೆಯು ಹೇಳಿದೆ.

ಹಣದುಬ್ಬರ, ಕೃಷಿ ಬೆಲೆಗಳ ಏರಿಕೆಯೇ ಕಾರಣ
"ಕೃಷಿ ಬೆಲೆಗಳಲ್ಲಿನ ಏರಿಕೆಯ ಹೊರೆಯನ್ನು ಭಾಗಶಃ ಗ್ರಾಹಕರ ಮೇಲೆ ಹಾಕುವಂತಾಗಿದೆ. ಕೇವಲ 4 ಪ್ರತಿಶತದಷ್ಟು ಮಾತ್ರ ಗ್ರಾಹಕರ ಮೇಲೆ ಹೊರೆ ಹಾಕಲಾಗಿದೆ. ಇದು ಕೃಷಿ ಬೆಲೆಗಳು ಮತ್ತು ಒಟ್ಟಾರೆ ಆಹಾರ ಹಣದುಬ್ಬರದಲ್ಲಿನ ಹೆಚ್ಚಳಕ್ಕಿಂತ ಕಡಿಮೆಯಾಗಿದೆ. ಇದರಿಂದಾಗಿ ಎರಡೂ ಪಾಲುದಾರರ ಹಿತಾಸಕ್ತಿಗಳನ್ನು ಭದ್ರಪಡಿಸುತ್ತದೆ," ಎಂದು ಮದರ್ ಡೈರಿ ತಿಳಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ, ಮದರ್ ಡೈರಿ ಹಾಲು 30 ಲಕ್ಷ ಲೀಟರ್‌ಗಿಂತ ಹೆಚ್ಚು ಮಾರಾಟವಾಗುತ್ತದೆ.
ಏರಿಕೆಯ ಬಳಿಕ ಎಷ್ಟಾಗಲಿದೆ ದರ?
ಕಂಪನಿಯ ಪೂರ್ಣ ಕೆನೆ ಹಾಲು ಭಾನುವಾರದಿಂದ ಲೀಟರ್‌ಗೆ 57 ರೂ.ನಿಂದ 59 ರೂ.ಗೆ ಏರಿಕೆ ಆಗಲಿದೆ. ಟೋನ್ಡ್ ಹಾಲಿನ ಬೆಲೆ ಲೀಟರ್‌ಗೆ 49 ರೂ.ಗೆ ಏರಿಕೆಯಾಗಲಿದೆ. ಡಬಲ್ ಟೋನ್ಡ್ ಹಾಲಿನ ದರ ಲೀಟರ್‌ಗೆ 43 ರೂ.ಗೆ ಏರಿಕೆಯಾಗಲಿದ್ದು, ಹಸುವಿನ ಹಾಲಿನ ದರ ಲೀಟರ್‌ಗೆ 49 ರೂ.ನಿಂದ 51 ರೂ. ಏರಲಿದೆ.
ಇನ್ನು ಮದರ್ ಡೈರಿಯು ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ ಹೆಚ್ಚಿಸಿದೆ. ಆದರೆ ಈ ಪ್ರದೇಶದಲ್ಲಿ ಮಾರುಕಟ್ಟೆಗಳಲ್ಲಿ ಬೆಲೆಗಳನ್ನು ಹಂತ ಹಂತವಾಗಿ ಪರಿಷ್ಕರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಮದರ್ ಡೈರಿ ಹಾಲು ದೇಶಾದ್ಯಂತ 100 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.
ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಮಾರ್ಚ್ 1 ರಿಂದ ಹಾಲಿನ ದರವನ್ನು ಲೀಟರ್‌ಗೆ 2 ರೂ. ಹೆಚ್ಚಳ ಮಾಡಿದೆ. ಡೈರಿ ಸಂಸ್ಥೆ ಪರಾಗ್ ಮಿಲ್ಕ್ ಫುಡ್ಸ್ ಲಿಮಿಟೆಡ್ ಗೋವರ್ಧನ್ ಬ್ರಾಂಡ್ ಹಸುವಿನ ಹಾಲಿನ ಬೆಲೆಯನ್ನು ಮಾರ್ಚ್ 1 ರಿಂದ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಿದೆ.
ಅಮೂಲ್ ಗೋಲ್ಡ್ ಗುಜರಾತ್‌ನ ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಗಳಲ್ಲಿ ಅರ್ಧ ಲೀಟರ್‌ಗೆ 30 ರೂಪಾಯಿ ನೀಡಬೇಕಾಗುತ್ತದೆ. ಅದೇ ಅಮೂಲ್ ತಾಜಾ ಹಾಲು ಪ್ರತಿ 500 ಎಂಎಲ್‌ಗೆ 24 ರೂ ಹಾಗೂ ಅಮೂಲ್ ಶಕ್ತಿ 500 ಎಂಎಲ್‌ಗೆ 27ರೂ. ಇದೆ. ಈ ಬೆಲೆಗಳು ಮಾರ್ಚ್ 1ರಿಂದ ಅನ್ವಯವಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications