ಕರ್ನಾಟಕದ ಕರಾವಳಿ, ಮುಂಬೈಯಲ್ಲಿ ಇಂದು ಸಹ ಭಾರೀ ಮಳೆ ಸಂಭವ
Recommended Video

ಬೆಂಗಳೂರು, ಜೂನ್ 26: ಉಡುಪಿ, ಬೈಂದೂರು, ಕೊಲ್ಲೂರು, ಹೆಬ್ರಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಇಂದು ಸಹ ವರುಣನ ಆರ್ಭಟ ಮುಂದುವರಿಯಲಿದೆ.
ಕರಾವಳಿಯಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಈಗಾಗಲೇ ನಾಡದೋಣಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ನಿನ್ನೆ ಸಹ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿತ್ತು. ವಾಣಿಜ್ಯ ರಾಜಧಾನಿ ಮುಂಬೈಯಲ್ಲೂ ಇಂದು ಸಾಕಶಶ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುಜರಾತ್ ಮತ್ತು ಗೋವಾದಲ್ಲಿ ಸಹ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ನೈರುತ್ಯ ಮಾರುತಗಳು ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಬಿಹಾರ ಮತ್ತು ಜಾರ್ಖಂಡ್ ಪ್ರದೇಶಗಳಲ್ಲಿ ಮಳೆ ತರಿಸಲಿವೆ.
ಹತ್ತುದಿನಗಳಿಂದ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರಿನ ಮಾರುತಗಳು ಈಗ ಚುರುಕು ಪಡೆದಿದ್ದು, ಮಹಾರಾಷ್ಟ್ರ ಮತ್ತು ಭಾರತದ ಕೇಂದ್ರ ಭಾಗಗಳಲ್ಲಿ ಪ್ರಬಲವಾಗುತ್ತಿವೆ.
ಜೂನ್ 29 ರಿಂದ ಜುಲೈ 1ರ ಅವಧಿಯಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಗವನ್ನು ಮುಂಗಾರು ಮಾರುತಗಳು ಆವರಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ನೈಋತ್ಯ ಮಾರುತಗಳು ಉತ್ತರ ಅರಬ್ಬಿ ಸಮುದ್ರ, ಗುಜರಾತ್ ರಾಜ್ಯಗಳ ಹೆಚ್ಚಿನ ಭಾಗ; ಮಹಾರಾಷ್ಟ್ರದ ಉಳಿದ ಭಾಗಗಳು; ಮಧ್ಯಪ್ರದೇಶ, ಛತ್ತೀಸಗಡದ ಇನ್ನಷ್ಟು ಭಾಗಗಳು; ಒಡಿಶಾ, ಪಶ್ಚಿಮ ಬಂಗಾಳದ ಉಳಿದ ಭಾಗಗಳು ಮತ್ತು ಜಾರ್ಖಂಡ್ ಹಾಗೂ ಬಿಹಾರದ ಮತ್ತಷ್ಟು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಚುರುಕಾಗಲು ಅನುಕೂಲಕರವಾದ ವಾತಾವರಣವಿದೆ ಎಂದು ಹವಾಮಾನ ಇಲಾಖೆಯ ಇತ್ತೀಚಿನ ವರದಿ ತಿಳಿಸಿದೆ.












Click it and Unblock the Notifications