ಕೇರಳವನ್ನು ಪ್ರವೇಶಿಸಿದ ಮುಂಗಾರು: ಕರ್ನಾಟಕದಲ್ಲೂ ಮಳೆ ಸಾಧ್ಯತೆ
ಬೆಂಗಳೂರು, ಮೇ 29: ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿದ್ದು, ಕೇರಳದಾದ್ಯಂತ ಭಾರೀ ಮಳೆಯಾಗಿತ್ತಿದೆ. ಈ ನಿಟ್ಟಿನಲ್ಲಿ ಜೂನ್3ರಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೇರಳ ಮಾತ್ರವಲ್ಲದೇ ತಮಿಳುನಾಡಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳಲ್ಲೂ ನೈರುತ್ಯ ಮುಂಗಾರು ಮಳೆ ಸುರಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಕಳೆದ ಕೆಲ ವರ್ಷಗಳಿಂದ ಬರದಿಂದ ಬಸವಳಿದಿರುವ ರಾಜ್ಯಕ್ಕೆ ಮಳೆಯು ನವ ಉತ್ಸಾಹ ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಕಷ್ಟು ಮಳೆಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಂತೂ ಬೇಸಿಗೆಯ ಬಿಸಿಲೇ ಜನರಿಗೆ ತಾಗದಿರುವಂತೆ ನೋಡಿಕೊಂಡಿದೆ.

ಮುಂಗಾರು ಮೇ 27ರಂದು ಶ್ರೀಲಂಕಾವನ್ನು ಪ್ರವೇಶಿಸಿತ್ತು. ಮೇ 29ರಂದು ಕೇರಳವನ್ನು ಪ್ರವೇಶಿಸಿದೆ. ಇಂದೇ ಅಥವಾ ಒಂದು ದಿನ ತಡವಾಗಿ ಕರ್ನಾಟಕವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ. ಮೇ 29ರಂದು ಕೇರಳ ಪ್ರವೇಶಿಸಿದ್ದು. ಮುಂಗಾರು ಮಾರುತಗಳು ಪ್ರಬಲವಾಗಿದೆ ಮೇ 29ರಂದು ಅಥವಾ 30 ರಂದು ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಕ್ಕೂ ಪ್ರವೇಶಿಸುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯ ಆರ್ಭಟ ಆರಂಭವಾಗಿದೆ.
ಹವಾಮಾನ ಇಲಾಖೆ ಈ ಹಿಂದೆ ಪ್ರಕಟಿಸಿದಂತೆ ಮುಂಗಾರು ಕೇರಳವನ್ನು ಪ್ರವೇಶಿಸಿದೆ. ರೈತಾಪಿ ವರ್ಗದ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ. ಕೇರಳದಲ್ಲಿ ಈಗಾಗಲೇ ಮುಂಗಾರು ಮಾರುತಗಳ ವಾತಾವರಣವಿದ್ದು, ಇಂದಿನಿಂದ ಪ್ರವೇಶ ಪಡೆದಿದೆ ಎಂದು ಖಾಸಗಿ ಸ್ಕೈಮೆಟ್ ಸಂಸ್ಥೆ ಸಿಇಒ ಜತಿನ್ ಸಿಂಗ್ ತಿಳಿಸಿದ್ದಾರೆ.












Click it and Unblock the Notifications