Monsoon In Kerala: ಏಳು ದಿನ ನಂತರ ಕೇರಳ ಪ್ರವೇಶಿಸಿದ ಮುಂಗಾರು, ಐಎಂಡಿ ಹೇಳಿದ್ದೇನು?
Monsoon in Kerala: ಬೆಂಗಳೂರು, ಜೂನ್ 08: ದೇಶದಲ್ಲಿ ಬಿಪರ್‌ಜಾರ್ ಚಂಡಮಾರುತ ತೀವ್ರತೆ ಮಧ್ಯೆಯೂ ಕೇರಳ ರಾಜ್ಯಕ್ಕೆ ನಿರೀಕ್ಷೆ ಮುಂಗಾರು ಮಳೆ ಸುರಿಸುವ ಮಾರುತಗಳ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ.
ವಾಡಿಕೆಯಂತೆ ಕೇರಳಕ್ಕೆ ಜೂನ್ 1 ರಂದು ಮುಂಗಾರು ಮಾರುತಗಳ ಆಗಮನ ಮೂಲಕ ಪ್ರಸಕ್ತ ಮುಂಗಾರು ಆರಂಭವಾಗಬೇಕು. ಆದರೆ ಕಾರಣಾಂತರಗಳಿಂದ ಜೂನ್ 4ರಂದು ಆಗಮಿಸಬಹುದು ಎನ್ನಲಾಗಿದೆ. ಅದಲ್ಲದೆ ಬದಲಾದ ವೈಪರಿತ್ಯಗಳಿಂದ ಮತ್ತೆ ನಾಲ್ಕ ದಿನ ತಡವಾಗಬಹುದು ಎಂದು ಹವಾಮಾನ ತಜ್ಞರು ಹೇಳಿದ್ದರು.

ಇದೀಗ ಅಂದುಕೊಂಡಂತೆ ಒಟ್ಟು ಏಳು ದಿನಗಳ ನಂತರ ಮುಂಗಾರು ಆರಂಭವಾಗಿದೆ. ಇದಕ್ಕೆ ಬಿಪರ್‌ಜಾಯ್ ಚಂಡಮಾರುತದ ಅರಬ್ಬಿ ಸಮುದ್ರದಲ್ಲಿನ ದುರ್ಬಲ ಆರಂಭ ಎನ್ನಲಾಗಿದೆ. ಇಲ್ಲದಿದ್ದರೆ ಚಂಡಮಾರುತ ತೀವ್ರವಾಗಿದ್ದರೇ ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ ಇತ್ತು ಎಂದು ಸಹ ಊಹಿಸಲಾಗಿತ್ತು.
ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಕಳೆದ 24 ಗಂಟೆಗಳಲ್ಲಿ ಮೋಡಗಳು ಹೆಚ್ಚಾಗಿದ್ದವು. ಇಲ್ಲಿ ಉಂಟದಾದ ಒಂದಷ್ಟು ಬದಲಾವಣೆಗಳಿಂದ ಮತ್ತು ಮುಂಗಾರು ಮಾರುತಗಳ ಆಗಮನದಿಂದ ಕೇರಳದಲ್ಲಿ ಅಧಿಕ ಮಳೆ ದಾಖಲಾಗಿದೆ. ಮುಂದಿನ ಜೂನ್ 15ರ ಹೊತ್ತಿಗೆ ಇಡೀ ದೇಶವನ್ನು ಮುಂಗಾರು ಮಳೆ ಆವರಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂದಿನ ಎರಡು ದಿನ ಮಳೆಯಾರ್ಭಟ
ಮುಂದಿನ 48 ಗಂಟೆಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರದಿಂದ ತಮಿಳುನಾಡು, ಕರ್ನಾಟಕ, ಮತ್ತು ನೈಋತ್ಯ, ಮಧ್ಯ, ಈಶಾನ್ಯ ಬಂಗಾಳ ಕೊಲ್ಲಿ, ಈಶಾನ್ಯ ರಾಜ್ಯಗಳು ಮತ್ತು ಕೇರಳ ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರಿಸಲಿದೆ.

ಹವಾಮಾನ ತಜ್ಞರಾದ (ಸ್ಕೈಮೆಟ್ ವೆದರ್) ಮಹೇಶ್ ಪಲಾವತ್ ಅವರು, ಕೇರಳದ ಕೆಲವು ಭಾಗಗಳಲ್ಲಿ ಚಂಡಮಾರುತದ ಪ್ರಭಾವ ಉಂಟಾಗಿದೆ. ಇಲ್ಲಿನ ವೈಪರಿತ್ಯವು ಮುಂದಿನ ಎರಡು ಮೂರು ದಿನಗಳಲ್ಲಿ ಪಶ್ಚಿಮ ದಿಕ್ಕಿನೆಡೆಗೆ ಸಾಗಲಿವೆ. ಇದರಿಂದ ಹೆಚ್ಚು ಮಳೆಯಾಗಲಿದ್ದು, ಬಿತ್ತನೆಗೆ ಸಜ್ಜಾಗಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಲಿದೆ. ಆದರೆ ಜೂನ್ ತಿಂಗಳಿನಲ್ಲಿ ವಾಡಿಕೆಯಷ್ಟು ಮಳೆ ಅಗದಿರಬಹುದು ಎಂದು ಅವರು ಹೇಳಿದರು.
ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈಶಾನ್ಯ ಭಾರತದ ಮೇಲೆ ಮಳೆ ಬೀಳುವ ನಿರೀಕ್ಷೆಯಿದೆ, ಇದು ಮಾನ್ಸೂನ್ ಮಾರುತಗಳನ್ನು ಈಶಾನ್ಯ ಭಾರತಕ್ಕೆ ಎಳೆಯಲು ಸಹಾಯ ಮಾಡುತ್ತದೆ ಎಂದರು.
ಮಾನ್ಸೂನ್ ಮಳೆಯು ದೇಶದ ಆರ್ಥಿಕತೆಗೆ ನಿರ್ಣಾಯಕದ ಭಾಗವು ಆಗಿದೆ. ಕಾರಣ ಭಾರತದ ಕೃಷಿ ಪ್ರಧಾನ ದೇಶವಾಗಿದ್ದು, ಮಳೆಯಾಧಾರಿತ ಉತ್ಪಾದನೆ ಶೇಕಡಾ 51ರಷ್ಟಿದೆ. ದೇಶದ ಜನಸಂಖ್ಯೆಯ 47% ರಷ್ಟು ಜನರು ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಸಮೃದ್ಧ ಮಳೆಯು ಗ್ರಾಮೀಣ ಭಾಗದ ಜನರ ಜೀವನಸುಧಾರಣೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.












Click it and Unblock the Notifications