ದೆಹಲಿಗೆ ಹೊರಟ ಮೋದಿಗೆ ತಾಯಿಯ ಆಶೀರ್ವಾದ
ಬೆಂಗಳೂರು, ಮೇ 22 : ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಗುರುವಾರ ಗುಜರಾತ್ ರಾಜ್ಯಕ್ಕೆ ಶುಭ ವಿದಾಯ ಹೇಳಿದ್ದಾರೆ. ಪ್ರಧಾನಿ ಗದ್ದುಗೆ ಏರಲು ದೆಹಲಿಗೆ ಹೊರಟ ಮಗನನ್ನು ತಾಯಿ ಹೀರಾಬೆನ್ ಸಿಹಿ ತಿನ್ನಿಸುವ ಮೂಲಕ ಆಶೀರ್ವಾದ ಮಾಡಿ ಬೀಳ್ಕೊಟ್ಟರು.
ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ಬುಧವಾರ ರಾಜೀನಾಮೆ ನೀಡಿದ್ದ ನರೇಂದ್ರ ಮೋದಿ, ಗುರುವಾರ ಆನಂದಿ ಬೆನ್ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಂತರ ಸಂಜೆ ಗಾಂಧಿನಗರದಲ್ಲಿರುವ ತಾಯಿಯ ಬಳಿ ತೆರಳಿದ ಮೋದಿ ಅವರ ಆಶೀರ್ವಾದ ಪಡೆದು ದೆಹಲಿಗೆ ಹೊರಟರು.
ಮೇ. 26ರ ಸೋಮವಾರ ಸಂಜೆ ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದ್ದರಿಂದ ಇಂದು ಮೋದಿ ತಾಯಿಯ ಆಶೀರ್ವಾದ ಪಡೆದರು. ಶುಕ್ರವಾರದಿಂದ ಮೋದಿ ಅಧಿಕೃತವಾಗಿ ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಚಿತ್ರಗಳಲ್ಲಿ ನೋಡಿ ಮೋದಿಗೆ ತಾಯಿ ಆಶೀರ್ವಾದ [ಪಿಟಿಐ ಚಿತ್ರಗಳು]

ಗುಜರಾತ್ ಗೆ ವಿದಾಯ ಹೇಳಿದ ಮೋದಿ
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಗುರುವಾರ ಗುಜರಾತ್ ರಾಜ್ಯಕ್ಕೆ ಶುಭ ವಿದಾಯ ಹೇಳಿದ್ದಾರೆ. ಪ್ರಧಾನಿ ಗದ್ದುಗೆ ಏರಲು ದೆಹಲಿಗೆ ಹೊರಟ ಮಗನನ್ನು ತಾಯಿ ಹೀರಾಬೆನ್ ಸಿಹಿ ತಿನ್ನಿಸುವ ಮೂಲಕ ಆಶೀರ್ವಾದ ಮಾಡಿ ಬೀಳ್ಕೊಟ್ಟರು.

ತಾಯಿ ಭೇಟಿ ಮಾಡಿದ ಮೋದಿ
ಗುಜರಾತ್ ರಾಜ್ಯಕ್ಕೆ ವಿದಾಯ ಹೇಳಿದ ಮೋದಿ ಗಾಂಧಿನಗರದಲ್ಲಿರುವ ತಾಯಿ ಹೀರಾಬೆನ್ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.

ಎರಡು ದಿನ ಗುಜರಾತ್ ನಲ್ಲಿದ್ದ ಮೋದಿ
ಮಂಗಳವಾರ ಸಂಜೆ ಗುಜರಾತ್ ಗೆ ಆಗಮಿಸಿದ್ದ ಮೋದಿ, ಬುಧವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇಂದು ಆನಂದಿ ಬೆನ್ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗುರುವಾರ ಸಂಜೆ ತಾಯಿ ಭೇಟಿ ಬಳಿಕ ದೆಹಲಿಗೆ ಹೊರಟರು.

ಸಿಹಿ ತಿನ್ನಿಸಿ ಮೋದಿಗೆ ಆಶೀರ್ವಾದ
ಸೋಮವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರಿಗೆ ತಾಯಿ ಹೀರಾಬೆನ್ ಸಿಹಿ ತಿನ್ನಿಸುವ ಮೂಲಕ ಆಶೀರ್ವಾದ ಮಾಡಿದರು.

ಸೋಮವಾರ ಪ್ರಮಾಣ ವಚನ
ಮೇ.26ರ ಸೋಮವಾರ ಸಂಜೆ ನಡೆಯಲಿರುವ ಸಮಾರಂಭದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.












Click it and Unblock the Notifications