ಭಾರತದ ಆರ್ಥಿಕತೆಗೆ ಶಕ್ತಿ ತುಂಬಲು ವಿದ್ಯುತ್ ದರದಲ್ಲಿ ಇಳಿಕೆ
ದಿನದ ಇಪ್ಪತ್ನಾಲ್ಕು ಗಂಟೆಯೂ ವಿದ್ಯುತ್ ಪೂರೈಸಬೇಕು ಹಾಗೂ ಕೈಗೆಟುಕುವ ದರ ಇರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸಾಕಾರದೆಡೆಗೆ ಕೆಲಸ ಮಾಡಬೇಕು ಎಂಬುದರತ್ತ ಸರಕಾರದ ಯೋಜನೆಗಳು ರೂಪುಗೊಳ್ಳುತ್ತಿವೆ. ನವೀಕೃತ ಶಕ್ತಿ ಮೂಲಗಳ ಮೂಲಕ ವಿದ್ಯುತ್ ಉತ್ಪಾದಿಸಲು ಈಗಾಗಲೇ ಹಲವು ಕಡೆ ಕೆಲಸ ಆರಂಭವಾಗಿದೆ.
ದೇಶದ ಮೂಲೆಮೂಲೆಯಲ್ಲೂ ವಿದ್ಯುತ್ ದೀಪ ಬೆಳಗಬೇಕು ಎಂಬ ಘನವಾದ ಉದ್ದೇಶವಿದ್ದು, ಅದಕ್ಕಾಗಿ ಕಡಿಮೆ ದರದಲ್ಲಿ ವಿದ್ಯುತ್ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಸಹಕಾರಿ ತತ್ವದಲ್ಲಿ ಕೆಲಸ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದಕ್ಕೆ ಕಾರಣ ಎಂಬುದನ್ನು ಸ್ಮರಿಸಲೇಬೇಕು.[ವಿದ್ಯುತ್ ಆಕ್ಸೆಸಬಿಲಿಟಿ: ವಿಶ್ವಸಂಸ್ಥೆ ಪಟ್ಟಿಯಲ್ಲಿ 73 ಸ್ಥಾನ ಏರಿಕೆ ಕಂಡ ಭಾರತ]

ಇದಕ್ಕೆ ಅತ್ಯುತ್ತಮ ಉದಾಹರಣೆ ಅಂದರೆ ಛತ್ತೀಸ್ ಗಡ. ಅಲ್ಲಿ ವಿದ್ಯುತ್ ದರವನ್ನು ಶೇ ಹದಿನೆಂಟರಷ್ಟು ಇಳಿಸಲಾಗಿದೆ. ಇದೇ ರೀತಿ ಅರುಣಾಚಲ ಪ್ರದೇಶ, ಗುಜರಾತ್, ಹರಿಯಾಣ, ಜಾರ್ಖಂಡ್ ಮತ್ತು ರಾಜಸ್ತಾನದಲ್ಲಿ ವಿದ್ಯುತ್ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಈ ಎಲ್ಲ ರಾಜ್ಯಗಳನ್ನು ಮಾದರಿ ಆಗಿರಿಸಿಕೊಂಡು, ಇತರ ರಾಜ್ಯಗಳೂ ಸಹಕರಿಸಿದರೆ ಎಲ್ಲ ಭಾರತೀಯರಿಗೆ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸಬಹುದು.
ಎಲ್ಲ ಭಾರತೀಯರು ವಿದ್ಯುತ್ ಬೆಳಕು ಕಾಣಬೇಕು, ಯಾರೂ ಕತ್ತಲಲ್ಲಿ ಕಳೆಯಬಾರದು ಎಂಬ ಕಾರಣಕ್ಕೆ ಕಳೆದ ಮೂರು ವರ್ಷದಲ್ಲಿ ವಿದ್ಯುತ್ ಜಾಲದಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಲಾಗಿದೆ. ಕಲ್ಲಿದ್ದಲು ಪೂರೈಕೆಯಲ್ಲಿ ಮಹತ್ತರವಾದ ಏರಿಕೆ ಆಗಿದೆ. 2014ಕ್ಕೂ ಮೊದಲು ಕಲ್ಲಿದ್ದಲು ವಲಯ ಹಗರಣಗಳಿಗೆ ಸಿಲುಕಿ, ಉತ್ಪಾದನೆ ಹಾಗೂ ಸಂಪನ್ಮೂಲದಲ್ಲೇ ಭಾರೀ ನಷ್ಟವಾಗಿತ್ತು.
ಕಲ್ಲಿದ್ದಲು ಗಣಿಗಳನ್ನು ಪಾರದರ್ಶಕವಾಗಿ ಹರಾಜು ಹಾಕುವ ಮೂಲಕ ಸರಕಾರಕ್ಕೆ ಆದಾಯ ಬರುವಂತಾಯಿತು. ಮೂರನೇ ಎರಡು ಭಾಗದಷ್ಟು ಕೊರತೆ ಎದುರಿಸುತ್ತಿದ್ದ ಕಲ್ಲಿದ್ದಲು ಈಗ ಯಾವುದೇ ಸಮಸ್ಯೆ ಇಲ್ಲದೆ ಪೂರೈಕೆಯಾಗುತ್ತಿದೆ. ಕಲ್ಲಿದ್ದಲು ಹರಾಜು ಪ್ರಕ್ರಿಯೆ ಸಲೀಸು ಮಾಡಲು 'ಶಕ್ತಿ' ಎಂಬ ನೀತಿ ಪರಿಚಯಿಸಿದೆ.[24X7 ವಿದ್ಯುತ್ ಪೂರೈಕೆಗೆ ಹೇಗೆ ಅನುದಾನ ಸಿಗುತ್ತದೆ?]
ವಿದ್ಯುತ್ ಕೊರತೆ ಎದುರಿಸುತ್ತಿದ್ದ ನಾವು ಈಗ ಹೆಚ್ಚುವರಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಸಾಧ್ಯವಾಗಿದೆ. ಇದು ಮೂರು ವರ್ಷದಲ್ಲಿ ಆಗಿರುವ ಬದಲಾವಣೆ. ಐದು ವರ್ಷದ ಹಿಂದೆ ಗ್ರಿಡ್ ವೈಫಲ್ಯದಿಂದ ದೇಶದ ಉತ್ತರ ಹಾಗೂ ಪೂರ್ವ ಭಾಗದ ಹತ್ತಾರು ಕೋಟಿ ಮಂದಿ ಎರಡು ದಿನಗಳ ಕಾಲ ವಿದ್ಯುತ್ ಇಲ್ಲದೆ ಪರದಾಡಬೇಕಾಯಿತು.
ಆದರೆ, ಈಗ ಆ ಭಾಗದಲ್ಲಿ ಆಗ ಇದ್ದ ವಿದ್ಯುತ್ ದರಕ್ಕಿಂತ ಮೂರನೇ ಒಂದು ಭಾಗದಷ್ಟು ಕಡಿಮೆ ಬೆಲೆಗೆ ಯೂನಿಟ್ ವಿದ್ಯುತ್ ಪೂರೈಕೆ ಆಗುತ್ತಿದೆ. ಇದೀಗ ಸೌರ ಹಾಗೂ ಪವನ ಶಕ್ತಿ ಮೂಲಕ ಆಗುತ್ತಿರುವ ವಿದ್ಯುತ್ ಉತ್ಪಾದನೆ ಅತ್ಯಂತ ಕಡಿಮೆ ಬೆಲೆಗೆ ಆಗುತ್ತಿದೆ. ಇದರಿಂದ ವಿದ್ಯುತ್ ಉತ್ಪಾದನೆ ವೆಚ್ಚವೂ ಕಡಿಮೆ ಆಗಿದೆ. ಜತೆಗೆ ಪ್ರಕೃತಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿದೆ.
ವಿದ್ಯುತ್ ವಿತರಣೆಯಲ್ಲೂ ಶೇ ನಲವತ್ತರಷ್ಟು ಹೆಚ್ಚಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ವಿತರಿಸುವ ವಿದ್ಯುತ್ ಸಾಮರ್ಥ್ಯ ಶೇ ನೂರಾ ಹದಿನಾರರಷ್ಟು ಹೆಚ್ಚಾಗಿದೆ. 'ಒಂದು ದೇಶ, ಒಂದು ಗ್ರಿಡ್, ಏಕ ರೂಪದ ಬೆಲೆ' ಎಂಬ ಗುರಿ ಹಾಕಿಕೊಂಡಿರುವ ಸರಕಾರ ಅದಕ್ಕಾಗಿ ಶ್ರಮಿಸುತ್ತಿದೆ.
ಇನ್ನು ಉಜಾಲ ಯೋಜನೆಯಡಿ ಇಪ್ಪತ್ಮೂರು ಕೋಟಿಗೂ ಹೆಚ್ಚು ಎಲ್ ಇಡಿ ಬಲ್ಬ್ ವಿತರಿಸಿದ್ದು, ಇದರಿಂದ ವಾರ್ಷಿಕ ಹನ್ನೆರಡು ಸಾವಿರ ಕೋಟಿ ರುಪಾಯಿ ಉಳಿತಾಯ ಆಗುತ್ತಿದೆ. ಕೃಷಿಕರಿಗಾಗಿಯೇ ಯೋಜನೆಯೊಂದನ್ನು ತಂದಿದ್ದು, ಅದರ ಅಡಿಯಲ್ಲಿ ವಿದ್ಯುತ್ ಉಳಿತಾಯಕ್ಕೆ ಪೂರಕವಾದ ಕೃಷಿ ಪಂಪ್ ಸೆಟ್ ಗಳನ್ನು ಅಳವಡಿಸಲು ನೆರವು ನೀಡಲಾಗುತ್ತಿದೆ.[ಮೋದಿ ಸರ್ಕಾರಕ್ಕೆ ಮೂರು ವರ್ಷ: ಫಲ ನೀಡಿದ ಟಾಪ್ 20 ಯೋಜನೆಗಳು]
ಉದಯ್ ಎಂಬ ಯೋಜನೆ ಅಡಿ ಇಡೀ ವಿದ್ಯುತ್ ವಲಯದಲ್ಲೇ ಕ್ರಾಂತಿಕಾರಿ ಬದಲಾವಣೆ ತರಲಾಗುತ್ತಿದೆ. ಈ ಎಲ್ಲ ಕಾರಣದಿಂದಾಗಿ ವಿದ್ಯುತ್ ದರದಲ್ಲಿ ಭಾರೀ ಇಳಿಕೆಯಾಗಿದೆ. ವಿದ್ಯುತ್ ಸಂಪರ್ಕ, ಪೂರೈಕೆ ಎಂಬುದು ಆರ್ಥಿಕತೆಯ ಚಕ್ರ. ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಎಲ್ಲವೂ ಇದಕ್ಕೆ ತಳುಕು ಹಾಕಿಕೊಂಡಿದೆ. ಆದ್ದರಿಂದಲೇ ಪ್ರಧಾನಿ ಮೋದಿ ಅವರ 'ಉಜ್ವಲ್ ಭಾರತ್' ಗುರಿಯೆಡೆಗೆ ಸಾಗಲು ಸಾಧ್ಯವಾಗುತ್ತಿದೆ.
ಒನ್ಇಂಡಿಯಾ ನ್ಯೂಸ್
-
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications