ಇಂಗ್ಲೆಂಡ್ ಮಲ್ಯಗೆ 21 ವರ್ಷ ಹಳೆ ಒಪ್ಪಂದದ ಮೂಗುದಾರ?

Subscribe to Oneindia Kannada

ನವದೆಹಲಿ, ಆಗಸ್ಟ್, 18: ವಿವಿಧ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ತೆರಳಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆದುಕೊಂಡು ಬರುವುದು ಹೇಗೆ? ಎಂಬುದಕ್ಕೆ ಕೇಂದ್ರ ಸರ್ಕಾರವೇ ಉತ್ತರ ಕಂಡುಕೊಂಡಿದೆ.

ರೆಡ್ ಕಾರ್ನರ್ ನೋಟಿಸ್, ಸಮನ್ಸ್, ಘೋಷಿತ ಅಪರಾಧಿ, ಎಫ್ ಐಆರ್ ಇದ್ಯಾವುದಕ್ಕೂ ಜಗ್ಗದೇ ಮಗನ ಜತೆ ಐಪಿಎಲ್ ಪಂದ್ಯ ವೀಕ್ಷಣೆ ಮಾಡುವ ಮಲ್ಯರಿಗೆ 21 ವರ್ಷ ಹಳೆಯ ಕಾನೂನು ಮೂಗುದಾರವಾಗಲಿದೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

ಭಾರತ ಮತ್ತು ಇಂಗ್ಲೆಂಡ್ 21 ವರ್ಷಗಳ ಹಿಂದೆ ಅಂದರೆ 1995ರಲ್ಲಿ ಮಾಡಿಕೊಂಡ ಪರಸ್ಪರ ಕಾನೂನು ಸಹಕಾರ ಒಪ್ಪಂದ (ಎಂಎಲ್‌ಎಟಿ) ಈಗ ಕೆಲಸಕ್ಕೆ ಬರಲಿದೆ. ತನಿಖೆ ಅಥವಾ ವಿಚಾರಣೆಗಳಲ್ಲಿ ಪರಸ್ಪರ ಸಾಕ್ಷಿ ಒದಗಿಸಲು ಕಸ್ಟಡಿಯಲ್ಲಿದ್ದರೂ ವ್ಯಕ್ತಿಯನ್ನು ಹಸ್ತಾಂತರಿಸಲು ಬದ್ಧರಾಗಿರುವುದೇ ಈ ಒಪ್ಪಂದದ ಪ್ರಮುಖ ಅಂಶ. ಆದರೆ ವಿಜಯ್ ಮಲ್ಯ ಇಂಗ್ಲೆಂಡ್ ನಲ್ಲಿ ಕಸ್ಟಡಿಯಲ್ಲಿ ಇಲ್ಲ ಎಂಬ ತೊಡಕು ಸಹ ಇದೆ.

ಪಾಸ್ ಪೋರ್ಟ್ ಇಲ್ಲದೆಯೂ ವಾಸ

ಪಾಸ್ ಪೋರ್ಟ್ ಇಲ್ಲದೆಯೂ ವಾಸ

ಇಂಗ್ಲೆಂಡ್ ಗೆ ಪ್ರವೇಶ ಮಾಡುವ ವೇಳೆ ಮಲ್ಯ ಬಳಿ ಕಾನೂನಾತ್ಮಕ ಪಾಸ್ ಪೋರ್ಟ್ ಇತ್ತು. ನಂತರ ಇತ್ತ ಭಾರತ ಸರ್ಕಾರ ಅದನ್ನು ಮುಟ್ಟುಗೋಲಿಗೆ ಒಳಪಡಿಸಿದರೂ ಬ್ರಿಟನ್ ಕಾನೂನಿನ ಅನ್ವಯ ಮಲ್ಯ ಅಲ್ಲಿಯೇ ವಾಸ ಮಾಡಲು ಯಾವ ತೊಂದತರೆ ಇಲ್ಲ>

2 ದೇಶದ ಲೆಕ್ಕದಲ್ಲಿ ಅಪರಾಧಿಯಾಗಬೇಕು

2 ದೇಶದ ಲೆಕ್ಕದಲ್ಲಿ ಅಪರಾಧಿಯಾಗಬೇಕು

ಎಂಎಲ್‌ಎಟಿ ಒಂದು ವೇಳೆ ಒಂದು ದೇಶ ಮತ್ತೊಂದು ದೇಶಕ್ಕೆ ವ್ಯಕ್ತಿಯನ್ನು ಹಸ್ತಾಂತರ ಮಾಡಬೇಕಿದ್ದರೆ ಆ ವ್ಯಕ್ತಿ ಎರಡು ದೇಶದ ಲೆಕ್ಕದಲ್ಲಿ ಅಪರಾಧಿಯಾಗಿರಬೇಕು. ಆದರೆ ಮಲ್ಯ ಸದ್ಯ ಭಾರತದ ಲೆಕ್ಕದಲ್ಲಿ ಮಾತ್ರ ಅಪರಾಧಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಏನಿದು ಎಂಎಲ್‌ಎಟಿ ಒಪ್ಪಂದ

ಏನಿದು ಎಂಎಲ್‌ಎಟಿ ಒಪ್ಪಂದ

A mutual legal assistance treaty (MLAT) ಎಂದು ಕರೆಯುವ ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಂಡ್ 1995ರಲ್ಲಿ ಸಹಿ ಮಾಡಿವೆ. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳಲು ಅವಕಾಶ ಇದೆ.

 ಸುಪ್ರೀಂ ಅಂಗಳಲ್ಲಿ ಚೆಂಡು

ಸುಪ್ರೀಂ ಅಂಗಳಲ್ಲಿ ಚೆಂಡು

ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 17 ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ಇಂಗ್ಲೆಂಡಿಗೆ ಆಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ ಸಹ ಮುಂದಾಗಿತ್ತು. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದೆಲ್ಲದರ ನಡುವೆ ಬ್ಯಾಂಕ್ ಗಳು ನವೆಂಬರ್ ಒಳಗೆ ಸಾಲ ಮರುಪಾವತಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian government has tried several methods to bring loan defaulterVijay Mallya back to India, but to no avail. This forced the Enforcement Directorate to think of a 21-year-old treaty, called Mutual Legal Assistance Treaty (MLAT)(1995) to bring him back.
Please Wait while comments are loading...