ನಾಪತ್ತೆಯಾಗಿದ್ದ ಸೇನಾ ಹೆಲಿಕಾಪ್ಟರ್ ಅವಶೇಷ ಪತ್ತೆ: ಸಿಬ್ಬಂದಿ ಸಾವು
ಪಂಪನ್ಪೇರ್ (ಅರುಣಾಚಲ ಪ್ರದೇಶ), ಜುಲೈ 06: ಮಂಗಳವಾರ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ನ ಅವಶೇಷ ಅರುಣಾಚಲ ಪ್ರದೇಶದ ಪಂಪನ್ಪೇರ್ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಹೆಲಿಕಾಪ್ಟರ್ನಲ್ಲಿದ್ದ ಮೂವರೂ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವಾಯು ಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಪಪುಂಪಾರೆ ಜಿಲ್ಲೆಯ ಸಗಾಲಿಯಲ್ಲಿ ಮಂಗಳವಾರ ವಾಯು ಸೇನೆಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು.

ಅಸ್ಸಾಂನ ಚಬುವಾ ಬಳಿ ಪ್ರಯಾಣಿಸುತ್ತಿದ್ದ ವೇಳೆ ಹೆಲಿಕಾಪ್ಟರ್ ಸಂಪರ್ಕ ಕಡಿದುಕೊಂಡಿತ್ತು. ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯವನ್ನು ಕೂಡ ಆರಂಭಿಸಲಾಗಿತ್ತು.












Click it and Unblock the Notifications