ಪ್ರಾಪ್ತವಯಸ್ಸಿಗೂ ಮುನ್ನ ಲಿವಿಂಗ್ ಟುಗೆದರ್ ಸಲ್ಲ

Subscribe to Oneindia Kannada

ಕೊಲ್ಲಂ, ಜುಲೈ, 19: ಲಿವಿಂಗ್ ಟು ಗೆದರ್ ಮತ್ತೆ ಚರ್ಚೆಗೆ ಬಂದಿದೆ. ಪದವಿಪೂರ್ವ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲೇ ಲಿವಿಂಗ್ ಟುಗೆದರ್ ಮಾದರಿಯಲ್ಲಿ ವಾಸಿಸುತ್ತಿದ್ದ ಜೋಡಿಯೊಂದರ ಸಂಬಂಧ ವಿಚಾರಣೆ ನಡೆಸಿದ ಕೇರಳ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪ್ರಾಪ್ತ ವಯಸ್ಕರಾಗುವ ಮುನ್ನವೇ ಲಿವಿಂಗ್ ಟುಗೆದರ್ ಅನುಸರಿಸುವುದು ತಪ್ಪು. ಪ್ರೀತಿ, ಪ್ರೇಮ ಎಂದು ಸ್ವೇಚ್ಛಾಚಾರ ಮಾಡಿದರೆ ಅದು ಕಾನೂನು ಬಾಹಿರ. ಈ ಬಗೆಯ ವಾಸವನ್ನು ಕಾನೂನು ಬೆಂಬಲಿಸುವುದಿಲ್ಲ ಎಂದು ಕೇರಳ ಕೋರ್ಟ್ ಹೇಳಿದೆ.[ಮದುವೆ, ಲಿವಿಂಗ್ ಟುಗೆದರ್ ಬೇರೆ ಬೇರೆಯಲ್ಲ]

Minors Living Together is not acceptable : Kerala High Court

ಕೊಲ್ಲಂನ ಮಾರ್ ಥಾಮಸ್ ಕಾಲೇಜಿನ ಪದವಿಪೂರ್ವ ವಿಭಾಗದ ವಿದ್ಯಾರ್ಥಿನಿ ಮತ್ತು ಅದೇ ವಿಭಾಗದ ವಿದ್ಯಾರ್ಥಿಯೊಬ್ಬ ಲಿವಿಂಗ್ ಟುಗೆದರ್ ಮಾದರಿಯಲ್ಲಿ ವಾಸ ಮಾಡುತ್ತಿದ್ದರು. ಈ ಪ್ರಕರಣ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ಬಂದು ಇಬ್ಬರನ್ನೂ ಕಾಲೇಜಿನಿಂದ ಹೊರ ಹಾಕಲಾಗಿತ್ತು. ಇದಾದ ಮೇಲೆ ಮಗಳು ನಾಪತ್ತೆಯಾಗಿದ್ದಾಳೆ ವಿದ್ಯಾರ್ಥಿನಿ ಪಾಲಕರು ದೂರು ದಾಖಲು ಮಾಡಿದ್ದರು.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]

ನಂತರ ಪ್ರಕರಣ ಕೇರಳ ಹೈಕೋರ್ಟ್ ಮೆಟ್ಟಿಲು ಏರಿತ್ತು. ನಾನು ಪ್ರೀತಿಸಿದ್ದು ಹೌದು ಆದರೆ ಎಲ್ಲ ವಿಭಾಗದಲ್ಲೂ ಉನ್ನತ ಶ್ರೇಣಿ ಪಡೆದಿದ್ದೇನೆ. ನನ್ನ ಪ್ರೀತಿ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿಲ್ಲ ಎಂದು ವಿದ್ಯಾರ್ಥಿನಿ ವಾದ ಮುಂದಿಟ್ಟಿದ್ದಳು.

ಆದರೆ ಇದಕ್ಕೆ ಉತ್ತರಿಸಿದ ನ್ಯಾಯಾಲಯ, ಕಾಲೇಜು ಆಡಳಿತ ಮಂಡಳಿ ಶಿಕ್ಷೆ ನೀಡಿದ್ದು ಸರಿಯಾಗಿದೆ. ಪ್ರಾಪ್ತ ವಯಸ್ಸಿಗೂ ಮುನ್ನ ಈ ಬಗೆಯ ವಾಸ ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತದೆ ಎಂದು ಸ್ಪಷ್ಟವಾಗಿ ಹೇಳಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Minors Living Together is not acceptable said by Kerala High Court. This is not a mere case of falling in love; but two students taking the drastic step of eloping and living together without even contracting a marriage. In India this kind of behavior is not acceptable Kerala court said.
Please Wait while comments are loading...