ಆನ್‌ಲೈನ್ ಲೈಂಗಿಕ ಕಿರುಕುಳ ಜಾಲದಿಂದ ಜನರ ಹಣ ರಕ್ಷಿಸಿದ MHA ಮಾಸ್ಟರ್ ಪ್ಲ್ಯಾನ್
ಇಂದಿನ AI-ಚಾಲಿತ ಡಿಜಿಟಲ್ ಜಗತ್ತಿನಲ್ಲಿ ಗೃಹ ವ್ಯವಹಾರಗಳ ಸಚಿವಾಲಯ (MHA) ಆನ್‌ಲೈನ್ ಲೈಂಗಿಕ ಕಿರುಕುಳ (Sextortion) ಮತ್ತು ಸಂಬಂಧಿತ ಸೈಬರ್ ಅಪರಾಧಗಳಿಂದ ಸಾರ್ವಜನಿಕರನ್ನು ರಕ್ಷಿಸಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮೂಲಕ, ಸಾಮಾಜಿಕ ಮಾಧ್ಯಮ, ಸಂದೇಶ ಅಪ್ಲಿಕೇಶನ್‌ಗಳು ಮತ್ತು ವೀಡಿಯೊ ಸಂವಹನ ವೇದಿಕೆಗಳ ಮೂಲಕ ಕಾರ್ಯನಿರ್ವಹಿಸುವ ಸಂಘಟಿತ ಸೈಬರ್ ಅಪರಾಧ ಜಾಲಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಸಚಿವಾಲಯವು ಕೇಂದ್ರ ಮತ್ತು ರಾಜ್ಯ ಕಾನೂನು ಜಾರಿ ಸಂಸ್ಥೆಗಳ ನಡುವೆ ಸಮನ್ವಯವನ್ನು ಬಲಪಡಿಸುತ್ತಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಮೂಲಕ ಆನ್‌ಲೈನ್ ಲೈಂಗಿಕ ಕಿರುಕುಳ ಮತ್ತು ಸೈಬರ್ ಅಪರಾಧವನ್ನು ಎದುರಿಸಲು ಗೃಹ ವ್ಯವಹಾರಗಳ ಸಚಿವಾಲಯವು ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಘಟನೆಗಳನ್ನು ವರದಿ ಮಾಡಲು ಮತ್ತು ಡಿಜಿಟಲ್ ಬೆದರಿಕೆಗಳ ವಿರುದ್ಧ ಜಾಗರೂಕರಾಗಿರಲು ಸಾರ್ವಜನಿಕರಲ್ಲೂ ಈ ವಿಚಾರವಾಗಿ ಜಾಗೃತಿ ಮೂಡಿಸಲಾಗುತ್ತಿದೆ.

ಲೈಂಗಿಕ ಕಿರುಕುಳ, ಮೋಸ ಮತ್ತು ಆರ್ಥಿಕ ವಂಚನೆಗೆ ಸಂಬಂಧಿಸಿದ ಹೆಚ್ಚುತ್ತಿರುವ ದೂರುಗಳನ್ನು ಪರಿಹರಿಸಲು MHA ಹಲವು ವಿನೂತನ ವಿಧಾನಗಳನ್ನು ಅಳವಡಿಸಿಕೊಂಡಿದೆ. 1930ರ ರಾಷ್ಟ್ರೀಯ ಸೈಬರ್ ವಂಚನೆ ಸಹಾಯವಾಣಿ ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (www.cybercrime.gov.in) ಸರ್ವಜನಿಕರು ಅದೇ ಸಮಯದಲ್ಲಿ ಘಟನೆಗಳನ್ನು ವರದಿ ಮಾಡಲು ಅನುವು ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ವಂಚನೆಯ ವಹಿವಾಟುಗಳನ್ನು ಪತ್ತೆಹಚ್ಚಲು ಮತ್ತು ಸ್ಥಗಿತಗೊಳಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸುತ್ತದೆ.
ಡಿಜಿಟಲ್ ಬ್ಲ್ಯಾಕ್‌ಮೇಲ್ ಪ್ರಯತ್ನಗಳನ್ನು ಗುರುತಿಸುವ ಮತ್ತು ತಪ್ಪಿಸುವ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಪೊಲೀಸ್ ಇಲಾಖೆಗಳು, ಶಾಲೆಗಳು ಮತ್ತು ಸಮುದಾಯ ಸಂಸ್ಥೆಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಅಲ್ಲದೆ, ವಂಚನೆಯ ಜಾಲವನ್ನು ತಿಳಿದುಕೊಳ್ಳಿ ಮತ್ತು ಜಾಗೃತರಾಗಿರಲು, ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ CYBERDOST ಅನ್ನು ಅನುಸರಿಸಲು ಸಾರ್ವಜನಿಕರಿಗೆ MHA ಸಲಹೆ ನೀಡುತ್ತದೆ.
ಇತ್ತೀಚಿನ ಒಂದು ಪ್ರಕರಣದಲ್ಲಿ, ಹೈದರಾಬಾದ್‌ನ ಎಪ್ಪತ್ತು ವರ್ಷದ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರು ಫೇಸ್‌ಬುಕ್ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುವ ಸಂಘಟಿತ ಲೈಂಗಿಕ ಕಿರುಕುಳ ನೀಡುವ ನೆಟ್‌ವರ್ಕ್‌ನಿಂದ ನಡೆದ ವಂಚನೆಯಲ್ಲಿ ₹39 ಲಕ್ಷ ಕಳೆದುಕೊಂಡರು. ಆರ್ಥಿಕ ತೊಂದರೆಯನ್ನು ಹೇಳಿಕೊಂಡು ಮಹಿಳೆಯೊಬ್ಬರು ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್‌ನೊಂದಿಗೆ ವಂಚನೆ ಪ್ರಾರಂಭವಾಯಿತು.
ತಿಂಗಳುಗಳಲ್ಲಿ ಅವರು ಮತ್ತು ಅವರ ಸಹಚರರು ಸೇರಿ ವಂಚನೆ ಜಾಲ ಬೀಸಿದ್ದರು. ಅಲ್ಲದೇ ಪೊಲೀಸ್ ಅಧಿಕಾರಿಗಳಂತೆ ನಟಿಸಿ, ಭಾವನಾತ್ಮಕ ಒತ್ತಡ ಮತ್ತು ಬೆದರಿಕೆಗಳ ಮೂಲಕ ಹಣವನ್ನು ಪಡೆದರು. ಅವರ ದೂರಿನ ನಂತರ, ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು ಮತ್ತು ತನಿಖೆಯು ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಜಾಲವನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಹೈದರಾಬಾದ್‌ನ ಇಪ್ಪತ್ತಮೂರು ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅಪರಿಚಿತ ಸಂಖ್ಯೆಯಿಂದ ಬಂದಿದ್ದ ವಾಟ್ಸಾಪ್ ವೀಡಿಯೊ ಕರೆಯನ್ನು ಸ್ವೀಕರಿಸಿದ ನಂತರ ಇದೇ ರೀತಿಯ ಜಾಲದಲ್ಲಿ ಸಿಲುಕಿದ್ದಾರೆ. ಕರೆ ಮಾಡಿದವರು ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಬೇರೆ ದೃಶ್ಯಗಳನ್ನು ಬಳಸಿದರು, ನಕಲಿ ವೀಡಿಯೊ ಬಿಡುಗಡೆ ಮಾಡಬಾರದು ಎಂದಾದರೆ ನೀವು ದುಡ್ಡು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸಹಾಯ ಕೇಳುವುದಕ್ಕೂ ಮೊದಲು ಸಂತ್ರಸ್ತೆ ₹2.6 ಲಕ್ಷ ವರ್ಗಾಯಿಸಿದ್ದಾಳೆ. ಸೈಬರಾಬಾದ್ ಸೈಬರ್ ಕ್ರೈಮ್ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಅಲ್ಲದೇ ಅನುಮಾನಾಸ್ಪದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ನಕಲಿ ಗುರುತುಗಳು ಮತ್ತು ಕೆಲವೊಂದು ನಿರ್ದಿಷ್ಟ ಖಾತೆಗಳನ್ನು ಬಳಸಿಕೊಂಡು ಲೈಂಗಿಕವಾಗಿ ಕಿರುಕುಳವನ್ನು ನೀಡುವ ಗುಂಪು ಬಹು ರಾಜ್ಯಗಳಲ್ಲಿ ಸಕ್ರಿಯವಾಗಿದೆ ಎನ್ನುವ ವಿಚಾರವು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
ಆನ್‌ಲೈನ್‌ನಲ್ಲಿ ಆಕ್ಟೀವ್ ಆಗಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಅಪರಿಚಿತ ವ್ಯಕ್ತಿಗಳಿಂದ ಫ್ರೆಂಡ್ ರಿಕ್ವೆಸ್ಟ್ ಅಥವಾ ವೀಡಿಯೊ ಕರೆಗಳನ್ನು ಸ್ವೀಕರಿಸದಂತೆ ಸಚಿವಾಲಯವು ಸಾರ್ವಜನಿಕರಿಗೆ ಸಲಹೆ ನೀಡಿದೆ. ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಛಾಯಾಚಿತ್ರಗಳು, ಬ್ಯಾಂಕಿಂಗ್ ವಿವರಗಳು ಅಥವಾ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳದಂತೆ ಬಳಕೆದಾರರನ್ನು ಕೋರಲಾಗಿದೆ.
I4C ಮೂಲಕ, ಅಪರಾಧ ಚಟುವಟಿಕೆಗಳಿಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ದುರುಪಯೋಗವನ್ನು ತಡೆಗಟ್ಟಲು ಸಚಿವಾಲಯವು ರಾಜ್ಯ ಸೈಬರ್ ಸೆಲ್, ಹಣಕಾಸು ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಿದೆ.
ಜಂಟಿ ಕಾರ್ಯಾಚರಣೆಗಳು ಲೈಂಗಿಕ ಕಿರುಕುಳ ಜಾಲ ಮತ್ತು ಇತರ ಆನ್‌ಲೈನ್ ವಂಚನೆಗಳಿಗೆ ಸಂಬಂಧಿಸಿದ ಹಲವಾರು ಮ್ಯೂಲ್ ಖಾತೆಗಳು / ವಂಚನೆಯ ಉದ್ದೇಶದಿಂದಲೇ ಬಳಸುವ ಖಾತೆಗಳು ಮತ್ತು ನಕಲಿ ಪ್ರೊಫೈಲ್‌ಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಕಾರಣವಾಗಿವೆ. ಅಲ್ಲದೆ, ಎಚ್ಚರಿಕೆ ಮತ್ತು ಜಾಗೃತರಾಗಿರಲು, ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ CYBERDOST ಅನ್ನು ಅನುಸರಿಸಲು MHA ನಾಗರಿಕರಿಗೆ ಸಲಹೆ ನೀಡಿದೆ.
YouTube - https://youtube.com/@cyberdosti4c
Instagram- https://www.instagram.com/cyberdosti4c?igsh=c2tteTd5Mjl2b2cw
Facebook- https://www.facebook.com/share/1KVuL1aJ9y/?mibextid=wwXIfr
X- https://x.com/cyberdost?s=11
Whatsapp- https://whatsapp.com/channel/0029Va3VAOY8fewrOtXqMw1V
Dailyhunt - https://m.dailyhunt.in/profile/I4C_MHA
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications