Meghalaya Election Results 2023 : ಮೇಘಾಲಯದಲ್ಲಿ ಮತ ಎಣಿಕೆಗೂ ಮುನ್ನ ಭದ್ರತೆ ಹೆಚ್ಚಳ!
ಇಂದು ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತಗಳ ಎಣಿಕೆ ನಡೆಯಲಿದೆ. ಮೇಘಾಲಯದಲ್ಲಿ ಮತ ಎಣಿಕೆಗೂ ಮುನ್ನ ಭದ್ರತೆ ಹೆಚ್ಚಿಸಲಾಗಿದೆ.
ಮಾರ್ಚ್ 2 ರಂದು ಮೇಘಾಲಯ ವಿಧಾನಸಭಾ ಚುನಾವಣೆಯ ಮತ ಎಣಿಕೆಗಾಗಿ ಭಾರತೀಯ ಚುನಾವಣಾ ಆಯೋಗವು 13 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದ್ದು, ರಾಜ್ಯಾದ್ಯಂತ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಇವಿಎಂ ಸ್ಟ್ರಾಂಗ್ ರೂಮ್‌ಗಳಲ್ಲಿ ಮೂರು ಹಂತದ ಭದ್ರತೆಯೊಂದಿಗೆ ಭದ್ರತೆಯನ್ನು ಬಲಪಡಿಸಲಾಗಿದೆ.
ಮೇಘಾಲಯ ವಿಧಾನಸಭೆಯ 59 ವಿಧಾನಸಭಾ ಕ್ಷೇತ್ರಗಳಿಗೆ ಫೆ.27ರಂದು ಮತದಾನ ನಡೆದಿದ್ದು, ಶೇ.85.17ರಷ್ಟು ಮತದಾನವಾಗಿದೆ. ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಮೇಘಾಲಯದ ಮುಖ್ಯ ಚುನಾವಣಾ ಅಧಿಕಾರಿ ಎಫ್‌ಆರ್ ಖಾರ್ಕೊಂಗೊರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನಾವು ಎಲ್ಲಾ 12 ಜಿಲ್ಲೆಗಳಲ್ಲಿ ಮತ್ತು ಒಂದು ಉಪವಿಭಾಗದಲ್ಲಿ 13 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಮತ ಎಣಿಕೆಗೆ 27 ಎಣಿಕೆ ವೀಕ್ಷಕರು ಮತ್ತು 500 ಮೈಕ್ರೊ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ" ಎಂದು ಮುಖ್ಯ ಚುನಾವಣಾಧಿಕಾರಿ ಎಫ್‌ಆರ್ ಖಾರ್ಕೊಂಗೊರ್ ಹೇಳಿದರು.
11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ದಾಕೋಪ್ಗ್ರೆ ಪ್ರದೇಶದಲ್ಲಿ ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇವಿಎಂ ಸ್ಟ್ರಾಂಗ್ ರೂಂ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಣಿಕೆ ಹಾಲ್‌ಗಳು ಸಿದ್ಧವಾಗಿವೆ ಮತ್ತು ಅಗತ್ಯವಿರುವ ಭದ್ರತಾ ಸಿಬ್ಬಂದಿ ಅಲ್ಲಿದ್ದಾರೆ ಎಂದು ವೆಸ್ಟ್ ಗರೊ ಹಿಲ್ಸ್ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಸ್ವಪ್ನಿಲ್ ಟೆಂಬೆ ತಿಳಿಸಿದ್ದಾರೆ.
"ಎಣಿಕೆ ಮಾಡುವವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಭದ್ರತೆಗಾಗಿ ಇಸಿಐನ ಪ್ರಮಾಣಿತ ಪ್ರೋಟೋಕಾಲ್ ಇದೆ ಮತ್ತು ಮೂರು ಹಂತದ ಭದ್ರತೆ ಇದೆ. ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ಕ್ಷೇತ್ರಗಳ ಪ್ರತಿ ಎಣಿಕೆ ಹಾಲ್‌ನಲ್ಲಿ 10 ಟೇಬಲ್‌ಗಳಿವೆ. ಪ್ರತಿ ಟೇಬಲ್‌ಗೆ ಮೂರು ಜನರು ಇರುತ್ತಾರೆ" ಎಂದು ಸ್ವಪ್ನಿಲ್ ಟೆಂಬೆ ಹೇಳಿದರು.

ವೀಕ್ಷಕರು, ಚುನಾವಣಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದು, ಯಾವುದೇ ಸಮಸ್ಯೆ ತಲೆದೂರಲು ಸಾಧ್ಯವಿಲ್ಲ ಎಂದರು. ತ್ರಿಪುರ ಮತ್ತು ನಾಗಾಲ್ಯಾಂಡ್ ಜೊತೆಗೆ ಮೇಘಾಲಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಲಿದೆ.












Click it and Unblock the Notifications