Live
LIVE: ಮೇಘಾಲಯ : ಅತಂತ್ರ ಸ್ಥಿತಿಯಲ್ಲಿ ಮೇಘಾಲಯದ ಸರ್ಕಾರ ರಚನೆ
ಬೆಂಗಳೂರು, ಮಾರ್ಚ್ 03: ಮೋಡಗಳಿಂದ ಆವರಿಸಿರುವ ಸುಂದರ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಮೋದಿ ಅಲೆ ಬೀಸುವುದೇ ಅಥವಾ ದಶಕಗಳಿಂದ ನೆಲೆ ನಿಂತಿರುವ ಕಾಂಗ್ರೆಸ್ಸಿನ ಹಸ್ತಕ್ಕೆ ಮತ್ತೊಮ್ಮೆ ಮತದಾರರು ತಲೆ ಬಾಗುವರೇ ಫಲಿತಾಂಶ ಶನಿವಾರದಂದು ಪ್ರಕಟವಾಗಲಿದೆ.

ಮೇಘಾಲಯ ಅಸೆಂಬ್ಲಿ ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಸ್ ಇಲ್ಲಿದೆ...
ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಸ್ಥಾಪಕ ಪಿ.ಎ ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ ಹಾಗೂ ಪುತ್ರ ಜೇಮ್ಸ್ ಸಂಗ್ಮಾ ಇಬ್ಬರು ಕ್ರಮವಾಗಿ ಡೌತ್ ಟುರಾ ಹಾಗೂ ಡಡೆಂಗ್ರೆ ಕ್ಷೇತ್ರಗಳಿಂದ ಜಯಭೇರಿ.
ಮುಕುಲ್ ಸಂಗ್ಮಾ ಪತ್ನಿ ಡಿಕಾಂಚಿ ಡಿ ಶಿರಾ ಅವರು ಮಹೇಂದ್ರ ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರೇಮಾನಂದ್ ಕೋಚ್ ವಿರುದ್ಧ 6 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.
ಅತಂತ್ರ ಸ್ಥಿತಿಯಲ್ಲಿ ಮೇಘಾಲಯದ ಸರ್ಕಾರ ರಚನೆ
Meghalaya Chief Minister Mukul Sangma wins both from Ampati and Songsak constituencies. (File Pic) #MeghalayaElection2018 pic.twitter.com/eva4bm3Tbn
— ANI (@ANI) March 3, 2018
ಮೇಘಾಲಯ ಟ್ರೆಂಡ್, ಮುನ್ನಡೆ: ಕಾಂಗ್ರೆಸ್ 21, ಎನ್ ಪಿಪಿ 18, ಬಿಜೆಪಿ 03, ಯುಡಿಪಿ 6 ಹಾಗೂ ಇತರೆ 11
ಮೇಘಾಲಯ : ಮುಕುಲ್ ಸಂಗ್ಮಾ(ಕಾಂಗ್ರೆಸ್) ಗೆ ಸಂಗ್ಸಾಕ್ ನಲ್ಲಿ ಗೆಲುವು. ಚೆರಾಕ್ ಮೊಮಿನ್ (ಕಾಂಗ್ರೆಸ್) ಗೆ ಖಾರ್ಕುಟ್ಟದಲ್ಲಿ ಗೆಲುವು, ಎನ್ ಪಿಪಿಯ ಪೊಗ್ಸೆಂಗ್ ಮರಾಕ್ ಗೆ ಬಜೆಂಗ್ದೊಬಾದಲ್ಲಿ ಗೆಲುವು
ಶಿಲ್ಲಾಂಗ್ ನ ಪೋಲೋ ಮೈದಾನದ ಬಳಿ ದೊಡ್ಡ ಪರದೆಯಲ್ಲಿ ಫಲಿತಾಂಶ ವೀಕ್ಷಣೆಗೆ ಸೇರಿರುವ ಜನ ಸಂದಣಿ
#WATCH: Huge crowd at Shillong Polo ground where people can see counting trends through a projector #MeghalayaElection2018 pic.twitter.com/iBHVpy2pvl
— ANI (@ANI) March 3, 2018
ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರದ ಹಾಲಿ ವಿಧಾನಸಭೆಯ ಕಾಲಾವಧಿ ಕ್ರಮವಾಗಿ ಮಾರ್ಚ್ 6, 13 ಮತ್ತು 14 ರಂದು ಅಂತ್ಯಗೊಳ್ಳಲಿದೆ.
ಕಳೆದ 10 ವರ್ಷಗಳಿಂದ ಇಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಬಿಜೆಪಿ 60 ಸ್ಥಾನಗಳ ಪೈಕಿ 47 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಜತೆ ಮೈತ್ರಿ ಹೊಂದಿರುವ ಪಿ.ಎ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 52 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದೆ.
ಮೇಘಾಲಯದಲ್ಲಿ 60 ವಿಧಾನಸಭಾ ಸ್ಥಾನಗಳಿವೆ. ಮೇಘಾಲಯ, ತ್ರಿಪುರಾ ಹಾಗೂ ನಾಗಾಲ್ಯಾಂಡ್ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 03ರಂದು ಪ್ರಕಟವಾಗಲಿದೆ.
ಒಟ್ಟು 18.09 ಲಕ್ಷ ಮತದಾರರ ಪೈಕಿ 3.5 ಲಕ್ಷ ಮಂದಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು.












Click it and Unblock the Notifications