ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನ ನೀಡಿದ ಉತ್ತರವೇನು?

ನವದೆಹಲಿ, ಫೆಬ್ರವರಿ 27 : ಭಾರತದ ವಾಯುಪಡೆಯ ಪೈಲೆಟ್ ತನ್ನ ವಶದಲ್ಲಿರುವುದಾಗಿ ಪಾಕಿಸ್ತಾನ ಹೇಳಿದೆ. ಪೈಲೆಟ್ ಬಗ್ಗೆ ಮಾಹಿತಿ ನೀಡುವಂತೆ ಭಾರತದ ವಿದೇಶಾಂಗ ಸಚಿವಾಲಯ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.

ಬುಧವಾರ ಸಂಜೆ ಪಾಕಿಸ್ತಾನದ ಡೆಪ್ಯೂಟಿ ಹೈ ಕಮೀಷನರ್ ಸೈಯದ್ ಹೈದರ್‌ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘನೆ ಮಾಡಿ ಪಾಕಿಸ್ತಾನ ನಡೆಸುತ್ತಿರುವ ದಾಳಿಯನ್ನು ಖಂಡಿಸಲಾಗಿದೆ.

ಪುಲ್ವಮಾ ದಾಳಿ, ಗಡಿ ರೇಖೆ ನಿಯಂತ್ರಣ ಉಲ್ಲಂಘನೆ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಲಾಯಿತು. ಭಾರತೀಯ ವಾಯುಪಡೆ ಪೈಲೆಟ್ ತನ್ನ ವಶದಲ್ಲಿದ್ದಾನೆ ಎಂದು ಪಾಕ್ ಹೇಳಿತ್ತು. ಈ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚನೆ ನೀಡಲಾಯಿತು.

MEA summons Pakistan Deputy High Commissioner

ಬುಧವಾರ ಬೆಳಗ್ಗೆ ಪಾಕಿಸ್ತಾನದ ವಿಮಾನಗಳು ಭಾರತವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಮುಂದಾಗಿದ್ದವು. ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಲು ಶ್ರೀನಗರದ ವಾಯುನೆಲೆಯಿಂದ 6 ಮಿಗ್ 21 ವಿಮಾನಗಳನ್ನು ಕಳುಹಿಸಲಾಗಿತ್ತು.

ಇವುಗಳಲ್ಲಿ 5 ವಿಮಾನಗಳು ವಾಯುನೆಲೆಗೆ ವಾಪಸ್ ಆಗಿವೆ. ವಿಂಗ್ ಕಮಾಂಡ್ ಅಭಿನಂದನ್ ಪೈಲೆಟ್ ಆಗಿದ್ದ ಮಿಗ್ 21 ಬೈಸನ್ ಜೆಟ್ ಇನ್ನೂ ವಾಪಸ್ ಆಗಿಲ್ಲ. ಅಭಿನಂದನ್ ತನ್ನ ವಶದಲ್ಲಿದ್ದಾನೆ ಎಂದು ಪಾಕ್ ಹೇಳುತ್ತಿದೆ.

ವಿಂಗ್ ಕಮಾಂಡ್ ಅಭಿನಂದನ್ ಪೈಲೆಟ್ ಆಗಿದ್ದ ಮಿಗ್ 21 ಬೈಸನ್ ಜೆಟ್ ಇನ್ನೂ ವಾಪಸ್ ಆಗಿಲ್ಲ. ಅಭಿನಂದನ್ ಅವರನ್ನು ವಾಪಸ್ ಕರೆ ತರಬೇಕು ಎಂಬ ಕೂಗು ಭಾರತದಲ್ಲಿ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಕುರಿತು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+