'ಮನ್ ಕಿ ಬಾತ್ ಜನರನ್ನು ಆರಾಧಿಸುವ ಒಂದು ಮಾರ್ಗ': 100 ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ ಏಪ್ರಿಲ್ 30: ಪ್ರಸಾರ ಭಾರತಿಯ 'ಮನ್‌ ಕೀ ಬಾತ್' ಕಾರ್ಯಕ್ರಮಕ್ಕೆ ಇಂದು ಶತಕದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ರೇಡಿಯೋ ಕಾರ್ಯಕ್ರಮ "ಮನ್ ಕೀ ಬಾತ್" ನ 100 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮ ಹಿಂದಿನ ಸಂಚಿಕೆಗಳಲ್ಲಿ ಕಾಣಿಸಿಕೊಂಡ ಅತಿಥಿಗಳನ್ನು ಒಳಗೊಂಡಿತ್ತು. ಅವರು ಮಾಡಿದ ಪ್ರಗತಿಯ ಕುರಿತು ಪ್ರಧಾನ ಮಂತ್ರಿ ಅವರೊಂದಿಗೆ ಸಂವಾದ ನಡೆಸಿದರು.

'ಮನ್ ಕೀ ಬಾತ್' ಕೋಟ್ಯಂತರ ಭಾರತೀಯರ ' ಮನ್ ಕೀ ಬಾತ್' ನ ಪ್ರತಿಬಿಂಬವಾಗಿದೆ. ಇದು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ. ಜೊತೆಗೆ ಜನರನ್ನು ಆರಾಧಿಸುವ ಒಂದು ಮಾರ್ಗ ಎಂದು ಪ್ರಧಾನಮಂತ್ರಿ ತಮ್ಮ ಆರಂಭಿಕ ಭಾಷಣದಲ್ಲಿ ಹೇಳಿದರು.

Mann Ki Baat is a way to worship people: PM Modi on 100th episode

'ಇದನ್ನು ಯಶಸ್ಸುಗೊಳಿಸಿದ್ದಕ್ಕಾಗಿ ದೇಶದ ಜನರಿಗೆ ಧನ್ಯವಾದಗಳು. ಮನ್ ಕೀ ಬಾತ್ ಹಲವಾರು ಜನ ಚಳುವಳಿಗಳನ್ನು ಹುಟ್ಟುಹಾಕುವಲ್ಲಿ ವೇಗವರ್ಧಕವಾಗಿದೆ. ಇದು 'ಹರ್ ಘರ್ ತಿರಂಗ' ಅಥವಾ 'ಕ್ಯಾಚ್ ದಿ ರೈನ್' ಆಗಿ ಬೆಳಿದಿದೆ. ಮನ್ ಕೀ ಬಾತ್ ಸಾಮೂಹಿಕ ಚಳುವಳಿಗಳಿಗೆ ವೇಗವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ' ಎಂದು ಅವರು ಹೇಳಿದರು.

ಆತ್ಮನಿರ್ಭರ್ ಭಾರತ್ ಅನ್ನು ಉತ್ತೇಜಿಸುವುದರಿಂದ ಮೇಕ್ ಇನ್ ಇಂಡಿಯಾ ಮತ್ತು ಬಾಹ್ಯಾಕಾಶ ಸ್ಟಾರ್ಟ್ಅಪ್‌ಗಳವರೆಗೆ ಮನ್ ಕಿ ಬಾತ್ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ವ್ಯಕ್ತಿಗಳ ಕಥೆಗಳನ್ನು ಪ್ರದರ್ಶಿಸಿದೆ. ಜೊತೆಗೆ ಇದು ಜನರೊಂದಿಗೆ ಸಂಪರ್ಕ ಸಾಧಿಸಿ ಅವರಿಗೆ ಪರಿಹಾರವನ್ನು ನೀಡಿದೆ.

Mann Ki Baat is a way to worship people: PM Modi on 100th episode

"ನನಗೆ 'ಮನ್ ಕೀ ಬಾತ್' ದೇಶವಾಸಿಗಳ ಗುಣಗಳನ್ನು ಆರಾಧಿಸುವ ಒಂದು ಮಾರ್ಗ ಆಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಮನ್ ಕೀ ಬಾತ್ ಅನ್ನು ಮೊದಲ ಬಾರಿಗೆ ಅಕ್ಟೋಬರ್ 3, 2014 ರಂದು ಪ್ರಸಾರ ಮಾಡಲಾಯಿತು. ಮನ್ ಕೀ ಬಾತ್ ನ 100ನೇ ಸಂಚಿಕೆಯ ಐತಿಹಾಸಿಕ ಕ್ಷಣವನ್ನು ಆಚರಿಸಲು ಬಿಜೆಪಿ ಆಡಳಿತವಿರುವ ರಾಜ್ಯಗಳು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದವು. ಪಕ್ಷಗಳು ತಮ್ಮ ಕಚೇರಿಗಳು ಮತ್ತು ಬೂತ್‌ಗಳಲ್ಲಿ ಪ್ರಧಾನಿಯವರ ರೇಡಿಯೋ ಭಾಷಣವನ್ನು ಪ್ರಸಾರ ಮಾಡಿವೆ.

ಮಾತ್ರವಲ್ಲದೆ ಮನ್ ಕೀ ಬಾತ್‌ನ 100 ನೇ ಸಂಚಿಕೆಯನ್ನು ಗುರುತಿಸಲು ಪ್ರವಾಸೋದ್ಯಮ ಸಚಿವಾಲಯ "100 days of action" ಯನ್ನು ಘೋಷಿಸಿದೆ. ಇದು ಪ್ಲಾಸ್ಟಿಕ್ ವಸ್ತುಗಳಿಗೆ ಬದಲಿ ವಸ್ತುಗಳನ್ನು ಅಭಿವೃದ್ಧಿಪಡಿಸಲು ಉದ್ಯಮಿಗಳಿಗೆ ವಿನ್ಯಾಸ ಸವಾಲನ್ನು ಹಾಕುವ ಚಟುವಟಿಕೆಗಳು ಒಳಗೊಂಡಿದೆ.

ರೇಡಿಯೋ ಕಾರ್ಯಕ್ರಮ ಸ್ವಾವಲಂಬಿ ಭಾರತವನ್ನು ಸೃಷ್ಟಿಸುವಲ್ಲಿ ಸ್ಟಾರ್ಟ್-ಅಪ್‌ಗಳು ಮತ್ತು ಸಣ್ಣ ಉದ್ಯಮಗಳ ಪಾತ್ರವನ್ನು ಒತ್ತಿಹೇಳುತ್ತದೆ. ಇದು ಎಲ್ಲಾ ವಯಸ್ಸಿನ ಜನರಿಗೆ ಹೆಚ್ಚು ಮುಖ್ಯವಾದ ವಿಷಯಗಳನ್ನು ಮುಟ್ಟಿಸುವ ಮೂಲಕ ಪ್ರೋತ್ಸಾಹಿಸುತ್ತದೆ. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮನ್ ಕಿ ಬಾತ್‌ನ 100 ನೇ ಸಂಚಿಕೆಯ ವಿಶೇಷ ಪ್ರದರ್ಶನವನ್ನು ಸಹ ಆಯೋಜಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+