Get Updates
Get notified of breaking news, exclusive insights, and must-see stories!

Manipur violence: ಮಣಿಪುರದಿಂದ 5,800ಕ್ಕೂ ಹೆಚ್ಚು ಜನ ಪಲಾಯನ!

ಇಂಫಾಲ ಮೇ 15: ನೆರೆಯ ರಾಜ್ಯ ಮಣಿಪುರದಲ್ಲಿ ಹಿಂಸಾಚಾರದಿಂದಾಗಿ 5,800ಕ್ಕೂ ಹೆಚ್ಚು ಜನರು ಮಿಜೋರಾಂಗೆ ಓಡಿಹೋಗಿ ವಿವಿಧ ಜಿಲ್ಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಚಿನ್-ಕುಕಿ-ಮಿಜೋ ಸಮುದಾಯಕ್ಕೆ ಸೇರಿದ ಒಟ್ಟು 5,822 ಜನರು ಮಿಜೋರಾಂನ ಆರು ಜಿಲ್ಲೆಗಳಲ್ಲಿ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆಂದು ತಿಳಿದು ಬಂದಿದೆ.

ನೆರೆಯ ರಾಜ್ಯದಲ್ಲಿ ಮೈತೈಗಳು ಮತ್ತು ಬುಡಕಟ್ಟು ಜನಾಂಗದವರ ನಡುವಿನ ಇತ್ತೀಚಿನ ಹಿಂಸಾತ್ಮಕ ಘರ್ಷಣೆಯ ನಂತರ ಮಣಿಪುರದಿಂದ 5,800 ಕ್ಕೂ ಹೆಚ್ಚು ಜನರು ಮಿಜೋರಾಂಗೆ ಓಡಿಹೋಗಿ ವಿವಿಧ ಜಿಲ್ಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Manipur violence

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ. ಆದರೆ ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ ಇನ್ನೂ ಅಧಿಕವಾಗಿದೆ. ಇಂಫಾಲ ಕಣಿವೆಯಲ್ಲಿ ಸದ್ಯ ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಅಂಗಡಿಗಳು ಮತ್ತು ಮಾರುಕಟ್ಟೆಗಳು ತೆರೆದಿದ್ದು, ರಸ್ತೆಗಳಲ್ಲಿ ವಾಹನಗಳ ಸಂಚಾರ ಮತ್ತೆ ಆರಂಭವಾಗಿದೆ. ಆದರೆ ಎಲ್ಲ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳು, ರಸ್ತೆಗಳಲ್ಲಿ ಮತ್ತಷ್ಟು ಸೇನಾ ಪಡೆಗಳು, ತ್ವರಿತ ಕ್ರಿಯಾ ಪಡೆ ಮತ್ತು ಕೇಂದ್ರ ಪೊಲೀಸ್ ಪಡೆಗಳ ಹಾಜರಾತಿಯಲ್ಲಿ ಬಿಗಿ ಭದ್ರತೆ ಮುಂದುವರಿದಿದೆ.

ಐಜ್ವಾಲ್ ಜಿಲ್ಲೆಯಲ್ಲಿ ಪ್ರಸ್ತುತ ಅತಿ ಹೆಚ್ಚು ಸ್ಥಳಾಂತರಗೊಂಡ ಜನರಿದ್ದಾರೆ, ಕೊಲಾಸಿಬ್ ನಲ್ಲಿ 1,847 ಮತ್ತು ಸೈಚುವಲ್ ನಲ್ಲಿ 1,790 ಜನ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Manipur violence

ಮಣಿಪುರ ಹಿಂಸಾಚಾರಕ್ಕೆ ಕಾರಣವೇನು?

ರಾಜ್ಯದಲ್ಲಿ ಸುಮಾರು ಶೇ. 53ರಷ್ಟಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡದ (ST) ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇತ್ತು. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳಲ್ಲಿ ಶಿಫಾರಸು ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಇತ್ತೀಚೆಗೆ ಸೂಚಿಸಿತ್ತು.

ಆದರೆ ಶೇ 40ರಷ್ಟಿರುವ ಬುಡಕಟ್ಟು ಸಮುದಾಯಗಳಿಂದ ಈ ಬೇಡಿಕೆಗೆ ತೀವ್ರ ಆಕ್ಷೇಪವಿತ್ತು. ಅಖಿಲ ಭಾರತ ಮಣಿಪುರ ವಿದ್ಯಾರ್ಥಿ ಸಂಘಟನೆ(ಎಟಿಎಸ್‌ಯುಎಂ) ನೃತೃತ್ವದಲ್ಲಿ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯದವರು ಪ್ರತಿಭಟನೆ ಹಾಗೂ 'ಬುಡಕಟ್ಟು ಜನರ ಏಕತಾ ಜಾಥಾ'ವನ್ನು ಮೇ 3ರಂದು ಆಯೋಜಿಸಿದ್ದರು.

ಜಾಥಾ ನಡೆಯುವಾಗಲೇ ಚುರ್ಚಾಂದ್ಪುರ ಜಿಲ್ಲೆಯ ತೋರ್ಬುಂಗ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಮೈತೇಯಿ ಸಮುದಾಯಕ್ಕೆ ಸೇರಿದ ಕೆಲವರ ಮೇಲೆ ಹಲ್ಲೆ ನಡೆಸಿತ್ತು. ಇದು ದ್ವೇಷದ ಕಿಡಿಯನ್ನು ಹೊತ್ತಿಸಿತು. ಇದಕ್ಕೆ ಪ್ರತೀಕಾರವಾಗಿ ಎಂಟು ಜಿಲ್ಲೆಗಳಲ್ಲಿ ಹಲ್ಲೆ ಘಟನೆಗಳು ನಡೆದವು. ಹಿಂಸೆ ಹೆಚ್ಚಿದಂತೆ ಸೇನೆ, ಅಸ್ಸಾಂ ರೈಫಲ್‌ಗೆ ಸೇರದ ಹಲವು ತುಕಡಿಗಳನ್ನು ರಾತ್ರಿಯೇ ಕರೆಸಿಕೊಳ್ಳಲಾಯಿತು. ಸೇನೆ ಅಸ್ಸಾಂ ರೈಫಲ್ ತುಕಡಿಗಳನ್ನು ನಿಯೋಜನೆಯಾದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಮಣಿಪುರ ಸರ್ಕಾರದ ಅಡಿಯಲ್ಲಿ ಬುಡಕಟ್ಟು ಜನರು ಇನ್ನು ಮುಂದೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಬಿಜೆಪಿಯ ಏಳು ಮಂದಿ ಸೇರಿದಂತೆ 10 ಕುಕಿ ಶಾಸಕರು ಶುಕ್ರವಾರ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಆಡಳಿತವನ್ನು ರಚಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+