ಗೋವಾ ಬಳಿಕ ದೇಶದ ಮತ್ತೊಂದು ರಾಜ್ಯ ಕೊರೊನಾ ಮುಕ್ತ

ನವದೆಹಲಿ, ಏಪ್ರಿಲ್ 20 : ಮಣಿಪುರ ರಾಜ್ಯ ಕೊರೊನಾ ಮುಕ್ತವಾಗಿದೆ. ರಾಜ್ಯದಲ್ಲಿ ಎರಡು ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ಈಗ ಇಬ್ಬರು ಗುಣಮುಖರಾಗಿದ್ದಾರೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಘೋಷಣೆ ಮಾಡಿದ್ದಾರೆ.

ಭಾನುವಾರ ಗೋವಾ ಕೊರೊನಾ ಮುಕ್ತ ರಾಜ್ಯ ಎಂದು ಘೋಷಣೆ ಮಾಡಲಾಗಿತ್ತು. ಈಗ ಮಣಿಪುರ ಸಹ ಕೊರೊನಾ ಮುಕ್ತವಾಗಿದ್ದು, ಕೇಂದ್ರ ಗೃಹ ಇಲಾಖೆ ಲಾಕ್ ಡೌನ್ ತೆರವುಗೊಳಿಸಲು ಅನುಮತಿ ನೀಡಿದೆ.

ಮಣಿಪುರದಲ್ಲಿ ಬ್ರಿಟನ್‌ನಿಂದ ಮರಳಿದ್ದ 23 ವರ್ಷದ ಮಹಿಳೆಗೆ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್‌ನಲ್ಲಿ ಪಾಲ್ಗೊಂಡಿದ್ದ 65 ವರ್ಷದ ವ್ಯಕ್ತಿ 2ನೇ ಸೋಂಕಿತನಾಗಿದ್ದ.

Manipur Is Now Corona Free State

ಇಬ್ಬರೂ ಸೋಂಕಿತರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಈಗ ಇಬ್ಬರ ವರದಿಯೂ ನೆಗೆಟೀವ್ ಎಂದು ಬಂದಿದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಮುಣಿಪುರ ಕೊರೊನಾ ಮುಕ್ತ ಎಂದು ಘೋಷಣೆ ಮಾಡಲು ಸಂತಸವಾಗುತ್ತದೆ ಎಂದು ಹೇಳಿದ್ದಾರೆ.

ಗೋವಾ ರಾಜ್ಯದಲ್ಲಿ 7 ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಇವರಲ್ಲಿ 6 ಜನರು ವಿದೇಶಕ್ಕೆ ಪ್ರಯಾಣ ಮಾಡಿದವರು. ಒಬ್ಬರು ಸೋಂಕಿತರ ಸಹೋದರನಾಗಿದ್ದ. ಎಲ್ಲರೂ ಗುಣಮುಖರಾಗಿದ್ದು ಭಾನುವಾರ ಗೋವಾ ಕರೊನಾ ಮುಕ್ತವಾಗಿತ್ತು. ಏಪ್ರಿಲ್ 3ರ ಬಳಿಕ ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.

ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿ ಅನ್ವಯ ಎರಡೂ ರಾಜ್ಯಗಳಲ್ಲಿ ಲಾಕ್ ಡೌನ್ ಸೋಮವಾರದಿಂದ ತೆರವಾಗಿದೆ. ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಆದರೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+