'ಬ್ಲೂ ವೇಲ್' ಗೇಮ್ ಬ್ಲಾಕ್ ಮಾಡುವಂತೆ ಮೇನಕಾ ಗಾಂಧಿ ಪತ್ರ
ನವದೆಹಲಿ, ಆಗಸ್ಟ್ 14: ಸಾಮಾಜಿಕ ಜಾಲತಾಣಗಳಿಂದ 'ಬ್ಲೂ ವೇಲ್ ಚಾಲೆಂಜ್' ಆನ್ಲೈನ್ ಗೇಮ್ ಬ್ಲಾಕ್ ಮಾಡುವಂತೆ ಗೃಹ ಸಚಿವರು ಮತ್ತು ಐಟಿ ಸಚಿವರಿಗೆ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಪತ್ರ ಬರೆದಿದ್ದಾರೆ.
ಕಳೆದ ವಾರ ಪಶ್ಚಿಮ ಮಿಡ್ನಾಪುರ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ಬ್ಲೈ ವೇಲ್ ಆಟಕ್ಕೆ ಬಲಿಯಾದ ನಂತರ ಸಚಿವರು ಈ ಪತ್ರ ಬರೆದಿದ್ದಾರೆ.

ಚೀನಾ, ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ಈ ಗೇಮ್ ಗೆ 100ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಈ ಹಿಂದೆ ಮೂರು ಬಾರಿ ಪತ್ರ ಬರೆದಿದೆ ಎಂದೂ ಮೇನಕಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Smt @Manekagandhibjp has taken cognizance of the self-destructive Blue Whale challenge that has claimed the lives of over 100 youngsters.1/4
— Ministry of WCD (@MinistryWCD) August 14, 2017
ಇದೇ ರೀತಿ ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ಈ ಗೇಮ್ ರದ್ದುಗೊಳಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದರು.












Click it and Unblock the Notifications