ಪತ್ನಿಯೊಂದಿಗೆ ಪ್ರವಾಸಕ್ಕೆ ಕೂಡಿಟ್ಟ ₹25 ಲಕ್ಷ ಸೇನೆಗೆ ದೇಣಿಗೆ; ಪತಿಯ ದೇಶಪ್ರೇಮಕ್ಕೆ ನೆಟ್ಟಿಗರ ಸೆಲ್ಯೂಟ್
ಮದುವೆಯಾದ ದಂಪತಿಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲಿ ದಂಪತಿ ಜೊತೆಯಾಗಿ ದೇಶ ಸುತ್ತಬೇಕು, ವಿದೇಶಿ ಪ್ರವಾಸ ಮಾಡಬೇಕೆಂಬ ಹೆಬ್ಬಯಕೆಯು ಒಂದು. ಅಂಥಹ ಕನಸಿನ ಪ್ರವಾಸಕ್ಕೆ ಪತ್ನಿ ಕರೆದೊಯ್ಯಲು ದುಡಿದು ಕೂಡಿಟ್ಟಿದ್ದ ಹಣವನ್ನು ಪತಿ ಮಹತ್ಕಾರ್ಯಕ್ಕೆ ಬಳಕೆ ದೇಣಿಗೆ ರೂಪದಲ್ಲಿ ನೀಡುವ ಮೂಲಕ ದೇಶಪ್ರೇಮಿಗಳ ಮನಗೆದ್ದಿದ್ದಾರೆ. ಪತ್ನಿ ಮೇಲಿನ ಅಪಾರ ಪ್ರೀತಿ ಹೊಂದಿದ ಪ್ರತಿ ಪುರಷರಿಗೂ ಇವರ ಕಥೆ ಪ್ರೇರಣೆಯಾಗಲಿದೆ.
ಕೆಲವು ಕಥೆಗಳು ಮಾನವೀಯತೆಯನ್ನು ಬಡೆದೆಪ್ಪಿಸುತ್ತವೆ. ಪತ್ನಿಯೊಂದಿಗೆ ಕನಸಿನ ಪ್ರವಾಸಕ್ಕಾಗಿ ಅವರ ಪತಿಯೊಬ್ಬರು ₹25 ಲಕ್ಷ ರೂಪಾಯಿ ಹಣ ಉಳಿತಾಯ ಮಾಡಿದ್ದರು. ಆದರೆ ದುರದೃಷ್ಟವಶಾತ್ ಅವರ ಪತ್ನಿ ಸಾವಿನಿಂದಾಗಿ ಅವರು ಕನಸಿನ ಪ್ರವಾಸ ಕನಸಾಗೇ ಉಳಿಯಿತು. ಆದರೆ ಪತ್ನಿ ಮೇಲಿನ ಪ್ರೀತಿಯನ್ನು, ಅವರೊಂದಿಗೆ ತೆರಲು ಕೂಡಿಟ್ಟಿದ್ದ ₹25 ಲಕ್ಷ ರೂ ಹಣವನ್ನು ದೇಶದ ಸೇನೆಗೆ ನೀಡಲು ಪತಿ ನಿರ್ಧರಿಸಿದರು.

ಪತ್ನಿಯೊಂದಿಗೆ ಒಟ್ಟಿಗೆ ಪ್ರವಾಸ ಕೈಗೊಳ್ಳುವ ಸೌಲಭ್ಯ ತಮ್ಮದಾಗಲಿಲ್ಲ. ಆದರೆ ಆ ಬಯಕೆ, ಆಸೆಗೂ ಮುಖ್ಯವಾಗಿ ಪತ್ನಿ ಮೇಲಿನ ಪ್ರೀತಿ ಚಿರಸ್ಥಾಯಿ ಆಗಿರಬೇಕೆಂದು ಪತಿಯು ಭಾರತೀಯ ಸೇನೆಗೆ ದೇಣಿ ನೀಡಿದ ಘಟನೆ ಇತ್ತೀಚೆಗೆ ನಡೆದಿದೆ. ಅವರ ಈ ಕಾರ್ಯಕ್ಕೆ ಜನಮನ ಗೆದ್ದಿದೆ, ನೆಟ್ಟಿಗರು ಸೆಲ್ಯೂಟ್ ಹೊಡೆದಿದ್ದಾರೆ.
ಒಟ್ಟಿಗೆ ಸಾಗಬೇಕಿದ್ದ ದಂಪತಿಯ ಪ್ರಯಾಣವು ದೇಶಸೇವೆ, ತ್ಯಾಗ ಮತ್ತು ದೇಶಪ್ರೇಮದ ಗೌರವಾರ್ಪಣೆಯಾಗಿ ಬದಲಾಯಿತು. ಈ ಕಾರ್ಯವು ಆನ್‌ಲೈನ್‌ನಲ್ಲಿ ಸಾವಿರಾರು ಜನರ ಮನ ಮುಟ್ಟಿದೆ. ಅನೇಕರು ಇದನ್ನು ವೈಯಕ್ತಿಕ ದುಃಖವನ್ನು ಒಂದು ಉದಾತ್ತ ಉದ್ದೇಶಕ್ಕಾಗಿ ಅರ್ಥಪೂರ್ಣ ಕಾರ್ಯವನ್ನಾಗಿ ಪರಿವರ್ತಿಸಿದ ಒಂದು ಶಕ್ತಿಯುತ ಉದಾಹರಣೆ ಎಂದು ಬಣ್ಣಿಸಲಾಗಿದೆ.
ಸ್ವಾರ್ಥವೇ ತುಂಬಿರುವ ಜಗತ್ತಿನಲ್ಲಿ ಇಂಥವರು ವಿರಳ
ಸ್ವಾರ್ಥವೇ ಹೆಚ್ಚಿರುವ ಜಗತ್ತಿನಲ್ಲಿ ಇಂತಹ ಬೆಳವಣಿಗೆಗಳು, ದಯೆ ತೋರುವ, ಸಾರ್ಥಕ ಸೇವಾ ಮನೋಭಾವವುಳ್ಳವರ ಕಥೆಗಳು ಅತ್ಯಂತ ವಿರಳ. ಅವರ ಪತಿ ಮೇಲಿನ ಪ್ರೀತಿಯು ದೇಶಪ್ರೇಮದ ಮೂಲಕ ಇನ್ನಷ್ಟು ಜೀವಂತವಾಗಿಸಿದೆ. ಇಂಥಹ ಕಾರ್ಯ ಅತೀವ ದೇಶಪ್ರೇಮ, ಮಾನವೀಯ ಮೌಲ್ಯಗಳು ಹೊಂದಿರುವ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂದು ನೆಟ್ಟಿಗರು ತಿಳಿಸಿದ್ದಾರೆ.
ಒಬ್ಬರು, 'ನಿಮ್ಮ ಈ ಉದಾತ್ತ ಕಾರ್ಯಕ್ಕೆ ನನ್ನ ಗೌರವಪೂರ್ವಕ ನಮನಗಳು (ಸಲ್ಯೂಟ್) ಸರ್ ಎಂದಿದ್ದಾರೆ. ಅವರ ಪ್ರವಾಸದ ಹಣವು ನಮ್ಮ ಹುತಾತ್ಮ ವೀರರ ಕುಟುಂಬಗಳಿಗೆ ಶಿಕ್ಷಣ ಅಥವಾ ಆರ್ಥಿಕ ನೆರವು ನೀಡಲು ಸಹಕಾರಿಯಾಗಲಿದೆ. ಇಲ್ಲವೇ ಅತ್ಯಂತ ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುವ ನಮ್ಮ ಸೇನೆಗೆ ಅಗತ್ಯವಿರುವ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕಾರ್ಯಗಳಿಗೆ ಬಳಕೆಯಾಗಲಿ ಎಂದು ಆಶಿಸುತ್ತೇನೆ, ಜೈ ಹಿಂದೆ' ಎಂದು ಹೇಳಿದರು.
'ನಿಮ್ಮ ಪ್ರವಾಸದ ಹಿಂದಿನ ಕಥೆಗಳು, ನಿಮ್ಮ ದೇಶಪ್ರೇಮಕ್ಕೆ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿವೆ, ಹ್ಯಾಟ್ ಆಫ್ ಯು ಸರ್.. ಜೈ ಹಿಂದ್' ಅಂತಲೂ ಕೆಲವರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
