ಹೆಂಡತಿ ಜೊತೆಗೆ ತಾಜ್‌ಮಹಲ್ ಸುತ್ತಿದರು ಮಾಲ್ಡೀವ್ಸ್ ಅಧ್ಯಕ್ಷ!
ತಾಜ್‌ಮಹಲ್ ಅಂದ್ರೆ ಭಾರತೀಯರಿಗೆ ಹೆಮ್ಮೆ, ಜಗತ್ತಿನಾದ್ಯಂತ ಭಾರತದ ಹೆಸರು ಮತ್ತಷ್ಟು ಎತ್ತರಕ್ಕೆ ಹೋಗುವಂತೆ ಮಾಡಿದ್ದೇ ತಾಜ್‌ಮಹಲ್ ಎನ್ನುವವರು ಕೂಡ ಇದ್ದಾರೆ. ಅದೆಲ್ಲಾ ಏನೇ ಇರಲಿ, ಭಾರತದ ಅತ್ಯುತ್ತಮ ಶಿಲ್ಪಕಲೆಗೆ ಸಾಕ್ಷಿಯಾಗಿ ಇರುವ ಕಟ್ಟಡಗಳ ಪೈಕಿ ಈ ಪ್ರೇಮಸೌಧ ತಾಜ್‌ಮಹಲ್ ಕೂಡ ಒಂದು ಎಂಬುದು ಸತ್ಯ. ಹೀಗಿದ್ದಾಗಲೇ, ಭಾರತೀಯರ ಹೆಮ್ಮೆಯ ಪ್ರತೀಕ ತಾಜ್‌ಮಹಲ್ ಕಟ್ಟಡಕ್ಕೆ ಇಂದು ಮಾಲ್ಡೀವ್ಸ್ ದೇಶದ ಅಧ್ಯಕ್ಷ ಕೂಡ ಭೇಟಿ ನೀಡಿದ್ದರು.
ಪ್ರೇಮಿಗಳ ಪಾಲಿನ ನೆಚ್ಚಿನ ಜಾಗ, ಕೋಟ್ಯಂತರ ಪ್ರವಾಸಿಗರು ಭೇಟಿ ನೀಡುವ ಪ್ರದೇಶವಾದ ತಾಜ್‌ಮಹಲ್ ನೂರಾರು ವರ್ಷಗಳಿಂದ ಕೂಡ ಜನರನ್ನು ಕೈಬೀಸಿ ಕರೆಯುತ್ತಿದೆ. ಹೀಗಾಗಿ ಜೀವನದಲ್ಲಿ ಒಂದು ಬಾರಿಯಾದರೂ ತಾಜ್‌ಮಹಲ್ ನೋಡಬೇಕು ಎಂಬುದು ಕೋಟ್ಯಂತರ ಪ್ರೇಮಿಗಳ ಮಸ್ಸಿನ ಮಾತು. ಇದೇ ಕಾರಣಕ್ಕೆ ಸದಾ ತಾಜ್‌ಮಹಲ್ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಇಂತಹ ಅದ್ಭುತ ಜಾಗಕ್ಕೆ ಮಾಲ್ಡೀವ್ಸ್ ದೇಶದ ಅಧ್ಯಕ್ಷರು ಕೂಡ ಫಿದಾ ಆಗಿ ತಮ್ಮ ಪತ್ನಿಯ ಜೊತೆ ಭೇಟಿ ನೀಡಿದ್ದಾರೆ. ಅಲ್ಲದೆ ತಾಜ್‌ಮಹಲ್ ಎದುರು ಕೂತು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

ತಾಜ್‌ಮಹಲ್ ಸುತ್ತಮುತ್ತ ವಿಶೇಷ ಭದ್ರತೆ
ಮಾಲ್ಡೀವ್ಸ್ ದೇಶದ ಅಧ್ಯಕ್ಷರು ಪ್ರೇಮಸೌಧ ತಾಜ್‌ಮಹಲ್ ವೀಕ್ಷಣೆಗೆ ಬರಲಿದ್ದಾರೆ ಎನ್ನುವ ಸುದ್ದಿ ತಿಳಿದ ತಕ್ಷಣ ವಿಶೇಷ ಭದ್ರತೆ ಏರ್ಪಡಿಸಲಾಗಿತ್ತು. ಹಾಗೇ ತಾಜ್‌ಮಹಲ್ ಸುತ್ತಮುತ್ತ ವಿಶೇಷ ಭದ್ರತೆ ಕೂಡ ಕೈಗೊಳ್ಳಲಾಗಿತ್ತು. ಮತ್ತೊಂದು ಕಡೆ ಮಾಲ್ಡೀವ್ಸ್ ಅಧ್ಯಕ್ಷರು ಬಂದು ಹೋಗುವ ತನಕ ತಾಜ್‌ಮಹಲ್ ವೀಕ್ಷಣೆಗೆ ಸಾರ್ವಜಕರು ಬರದಂತೆ ನಿರ್ಬಂಧ ಹೇರಿದ್ದರು, ತಾಜ್‌ಮಹಲ್ ಕಟ್ಟಡದ ಭದ್ರತಾ ಅಧಿಕಾರಿಗಳು. ಹೀಗಾಗಿ ತಾಜ್‌ಮಹಲ್ ಪೂರ್ತಿ ಖಾಲಿ, ಖಾಲಿ ಆಗಿತ್ತು.
ಸಹಾಯ ಕೇಳಿದ ಮಾಲ್ಡೀವ್ಸ್ ಅಧ್ಯಕ್ಷ
ಮಾಲ್ಡೀವ್ಸ್ ದೇಶ ಸಾಲು ಸಾಲು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿರುವ ಸಮಯದಲ್ಲೇ, ಈ ವಿಚಾರವಾಗಿ ಬುದ್ಧಿ ಕಲಿತಿರುವ ಮಾಲ್ಡೀವ್ಸ್ ಇದೀಗ ಭಾರತದ ಬಳಿ ಬಂದು ಬೇಡಿಕೊಂಡು ಸಹಾಯ ಪಡೆಯಲು ಮುಂದಾಗಿದೆ. ಅಲ್ಲದೆ ಭಾರತದ ಸೇನೆಯನ್ನು ಮರಳಿ ತನ್ನ ನಾಡಿಗೆ ಅಂದ್ರೆ ಮಾಲ್ಡೀವ್ಸ್ ನೆಲಕ್ಕೆ ಕರೆಸಿಕೊಳ್ಳಲು ಈಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಒಪ್ಪಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಭಾರತ ಕೂಡ ಮಾಲ್ಡೀವ್ಸ್‌ಗೆ ಇದೀಗ ಆರ್ಥಿಕ ಸಹಾಯ ಮಾಡಲು ಒಪ್ಪಿಗೆ ಸೂಚಿಸಿದೆ.
ಒಟ್ನಲ್ಲಿ ಭಾರತವನ್ನು ಎದುರು ಹಾಕಿಕೊಂಡು ಪ್ರವಾಸಿಗರೇ ಇಲ್ಲದೆ ನಲುಗಿ ಹೋಗಿರುವ, ಕೈಯಲ್ಲಿ ಕಾಸು ಇಲ್ಲದೆ ಪರದಾಡುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಇದೀಗ ಭಾರತದ ಶಕ್ತಿಯ ಬಗ್ಗೆ ಅರಿವು ಉಂಟಾಗಿದೆ. ಇದೇ ಕಾರಣಕ್ಕೆ ಇದೀಗ ಮತ್ತೆ ಭಾರತದ ಜೊತೆಗೆ ಸಂಬಂಧವನ್ನ ಸುಧಾರಿಸಲು ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತಕ್ಕೆ ಬಂದಿದ್ದು ವಿಶೇಷವಾಗಿದೆ.












Click it and Unblock the Notifications