Maharashtra: ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು- ವಿಭಿನ್ನ ಶಿಕ್ಷೆ ನೀಡಿದ ಕೋರ್ಟ್!
'ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು' ಮಹಾರಾಷ್ಟ್ರದ ಮಾಲೆಗಾಂವ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಸ್ಲಿಂ ವ್ಯಕ್ತಿಗೆ ವಿಭಿನ್ನ ಶಿಕ್ಷೆಯನ್ನು ನೀಡಿದೆ.
ಮಹಾರಾಷ್ಟ್ರದ ಮಾಲೆಗಾಂವ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಸ್ಲಿಂ ವ್ಯಕ್ತಿಗೆ ವಿಭಿನ್ನ ಶಿಕ್ಷೆಯನ್ನು ನೀಡಿದೆ. 21 ದಿನಗಳವರೆಗೆ ಐದು ಬಾರಿ ನಾಮಾಜ್ ಮಾಡಲು ಮತ್ತು ಸ್ವಯಂಪ್ರೇರಣೆಯಿಂದ ಎರಡು ಸಸಿಗಳನ್ನು ನೆಡಲು ಆದೇಶಿಸಿದೆ. ರಸ್ತೆ-ಅಪಘಾತ ಜಗಳ ಪ್ರಕರಣದಲ್ಲಿ ಕೋರ್ಟ್ ಈ ಆದೇಶವನ್ನು (ಸೆಕ್ಷನ್ 323 ಐಪಿಸಿ) ಹೊರಡಿಸಿದೆ.
1958ರ ಅಪರಾಧಿಗಳ ಪ್ರೊಬೇಶನ್ ಆಕ್ಟ್ನ ಸೆಕ್ಷನ್ ಮೂರು ಅಪರಾಧವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲು ಮ್ಯಾಜಿಸ್ಟ್ಏಟ್‌ಗೆ ಅಧಿಕಾರವನ್ನು ನೀಡುತ್ತದೆ. ಇದರ ಅಡಿಯಲ್ಲಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ತೇಜ್ವಂತ್ ಸಿಂಗ್ ಸಂಧು ಆದೇಶದಲ್ಲಿ ಹೇಳಿದ್ದಾರೆ.

ಕೇವಲ ಎಚ್ಚರಿಕೆ ಸಾಕಾಗುವುದಿಲ್ಲ ಮತ್ತು ಅಪರಾಧಿಯು ತನ್ನ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆಯನ್ನು ಮತ್ತು ಅವನ ಅಪರಾಧವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆ ಮುಸ್ಲಿಂ ಧರ್ಮ ಆಚರಿಸುವ ವ್ಯಕ್ತಿಗೆ ನಮಾಜ್ ಮಾಡುವ ಹಾಗೂ ಸಸಿ ನಡುವ ಜವಬ್ದಾರಿ ನೀಡಿದೆ. ಇದರಿಂದ ಪ್ರತಿ ದಿನವೂ ಆತನಿಗೆ ತನ್ನ ತಪ್ಪಿನ ಅರಿವಾಗಿದೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ.
ವಿಚಾರಣೆ ವೇಳೆ ಅಪರಾಧಿಯೂ ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ವ್ಯಕ್ತಿಯಾಗಿದ್ದರೂ, ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಿದಂತೆ ತಾನೂ ನಿಯಮಿತವಾಗಿ ನಮಾಜ್ ಮಾಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಇದೇ ಕಾರಣಕ್ಕೆ ಮುಂದಿನ 21 ದಿನಗಳ ಕಾಲ ಐದು ಹೊತ್ತಿನ ನಮಾಜ್ ಮಾಡಲು ಹಾಗೂ ಅಪರಾಧ ಎಸಗಿದ ಸೋನಾಪುರ ಮಸೀದಿಯ ಆವರಣದಲ್ಲಿ ಎರಡು ಮರಗಳನ್ನು ನೆಡಲು ಆದೇಶಿಸಿದೆ.

ಅಪರಾಧಿ 2010 ರ ಪ್ರಕರಣವೊಂದರಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಆರೋಪದ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ಸ್ 323 (ಸ್ವಯಂಪ್ರೇರಣೆಯಿಂದ ನೋಯಿಸುವುದು), 325 (ಸ್ವಯಂಪ್ರೇರಣೆಯಿಂದ ತೀವ್ರ ನೋವನ್ನು ಉಂಟುಮಾಡುವುದು), 504 (ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications