Get Updates
Get notified of breaking news, exclusive insights, and must-see stories!

1200 ಕಾರು, 5000 ಹಿಂಬಾಲಕರ ಜೊತೆ ಕಾಂಗ್ರೆಸ್‌ ಸೇರಿದ ಮಧ್ಯಪ್ರದೇಶ ಬಿಜೆಪಿ ನಾಯಕ: ಜ್ಯೋತಿರಾದಿತ್ಯ ಸಿಂಧಿಯಾಗೆ ಗೆಳೆಯನ ಗುನ್ನ

ಭೊಪಾಲ್, ಆಗಸ್ಟ್‌ 19: ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಬಿಜೆಪಿಯಲ್ಲಿ ಭಾರೀ ಕಲ್ಲೋಲ ಸೃಷ್ಟಿಯಾಗುತ್ತಿದೆ. ಕರ್ನಾಟಕದಂತೆಯೇ ಮಧ್ಯಪ್ರದೇಶದಲ್ಲೂ ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಬಿಜೆಪಿಗೆ ಹಿನ್ನೆಡೆಯಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜೊತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಪ್ರಭಾವಿ ನಾಯಕ ಹಾಗೂ ಶಾಸಕ ಸಮಂದರ್‌ ಪಟೇಲ್‌ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. ಸಾವಿರಾರು ಬೆಂಬಲಿಗರ ಜೊತೆ ಅವರು ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

Madhya Pradesh BJP leader joined Congress with 1200 cars and 5000 followers

ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಉಸಿರುಗಟ್ಟುವ ವಾತವರಣವಿದೆ ಎಂದು ಸಮಂದರ್‌ ಪಟೇಲ್‌ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಕಮಲ್‌ನಾಥ್‌ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಲು ತಮ್ಮ ಕ್ಷೇತ್ರ ಜವಾದ್‌ನಿಂದ ಭೋಪಾಲ್‌ಗೆ ಪಟೇಲ್‌ ಪ್ರಯಾಣಿಸಿದರು. ಈ ವೇಳೆ, ಅವರು 1200 ಕಾರುಗಳಲ್ಲಿ, 5000 ಜನರನ್ನು ಕರೆತಂದಿದ್ದರು. ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಕಮಲ್‌ನಾಥ್‌ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

Madhya Pradesh BJP leader joined Congress with 1200 cars and 5000 followers

ಕಾಂಗ್ರೆಸ್‌ಗೆ ಮರಳಿದ ಸಿಂಧಿಯಾ ನಿಷ್ಠಾವಂತರಲ್ಲಿ ಪಟೇಲ್‌ ಅವರು ಮೂರನೇ ಮುಖಂಡರಾಗಿದ್ದಾರೆ. ಈ ಹಿಂದಿನ ಇಬ್ಬರು ಮುಖಂಡರ ಸಹ ತಮ್ಮ ಶಕ್ತಿ ಪ್ರದರ್ಶನ ಮಾಡಲು ಇದೇ ರೀತಿಯ ನಡೆಯನ್ನು ಅನುಸರಿಸಿದ್ದರು.

ಜೂನ್ 14 ರಂದು ಶಿವಪುರಿ ಬಿಜೆಪಿ ನಾಯಕ ಬೈಜನಾಥ್ ಸಿಂಗ್ ಯಾದವ್ ಅವರು ಸಿಂಧಿಯಾ ಅವರೊಂದಿಗಿನ ಸಂಬಂಧವನ್ನು ಕಡಿತಗೊಂಡರು. 700 ಕಾರುಗಳೊಂದಿಗೆ ಬಂದು ಕಾಂಗ್ರೆಸ್‌ ಸೇರ್ಪಡೆಗೊಂಡರು. ಬಿಜೆಪಿ ಶಿವಪುರಿ ಜಿಲ್ಲಾ ಮಾಜಿ ಉಪಾಧ್ಯಕ್ಷ ರಾಕೇಶ್ ಕುಮಾರ್ ಗುಪ್ತಾ ಅವರು ಜೂನ್ 26 ರಂದು ಕಾರುಗಳ ರ್ಯಾಲಿಯ ಮೂಲಕ ಬಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

Madhya Pradesh BJP leader joined Congress with 1200 cars and 5000 followers

ಈ ವಿವಾರವಾಗಿ 'ಇಂಡಿಯನ್‌ ಎಕ್ಸ್‌ಪ್ರೆಸ್‌'ಗೆ ಮಾತನಾಡಿದ ಸಮಂದರ್‌ ಪಟೇಲ್‌, 'ನಾನು ಮಹಾರಾಜ್ (ಸಿಂಧಿಯಾ) ಅವರೊಂದಿಗೆ ಪಕ್ಷವನ್ನು ತೊರೆದಿದ್ದೆ. ಆದರೆ, ಬಿಜೆಪಿಯೊಳಗೆ ಉಸಿರುಗಟ್ಟಿದ ಅನುಭವವಾಯಿತು. ನನ್ನನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಿಲ್ಲ. ನನಗೆ ಗೌರವ ಮತ್ತು ಅಧಿಕಾರದ ಸ್ಥಾನವನ್ನು ನೀಡಲಾಗಿಲ್ಲ' ಎಂದು ಆರೋಪಿಸಿದ್ದಾರೆ.

ಈ ಮೂಲಕ ಪಟೇಲ್ ಅವರು ಕಾಂಗ್ರೆಸ್‌ಗೆ ಎರಡನೇ ಬಾರಿಗೆ ಮರಳಿದ್ದಾರೆ. 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ನಂತರ ಅವರು ಮೊದಲು ಕಾಂಗ್ರೆಸ್ ತೊರೆದರು. ಆ ವರ್ಷ ಅವರು ಸ್ವತಂತ್ರವಾಗಿ ಸ್ಪರ್ಧಿಸಿದರು. 35,000 ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್‌ಗೆ ಸೋಲಿಗೆ ಕಾರಣರಾದರು. ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

2019 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ಗೆ ಮರುಸೇರ್ಪಡೆಯಾದರು. ಆ ಬಳಿಕ, 2020 ರ ಮಾರ್ಚ್‌ನಲ್ಲಿ ಸಿಂಧಿಯಾ ಅವರ ಜೊತೆಗೆ ಬಿಜೆಪಿ ಸೇರ್ಪಡೆಗೊಂಡರು.

ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಂತೆ ಸಚಿವ ಓಂಪ್ರಕಾಶ್ ಸಕ್ಲೇಶ್‌ ಅವರೊಂದಿಗೆ ಸಾರ್ವಜನಿಕ ಸಂಘರ್ಷದಲ್ಲಿ ತೊಡಗಿಕೊಂಡರು.

'ಸಕ್ಲೇಶ್‌ ಅವರ ಗುಂಪು ನನ್ನ ಬೆಂಬಲಿಗರನ್ನು ನಿರಂತರವಾಗಿ ಅವಮಾನ ಮಾಡಿದೆ. ನಮ್ಮವರ ಮೇಲೆ ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಆಗ ನಾನು ಪಕ್ಷದಿಂದ ಹೊರಬರಲು ನಿರ್ಧರಿಸಿದೆ' ಎಂದು ಪಟೇಲ್ ಹೇಳಿದ್ದಾರೆ.

ನನಗೆ ಸಿಂಧಿಯಾ ಅವರೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಶಾಸಕರು ಹೇಳಿದ್ದಾರೆ.

'ನನಗೆ ಈಗಲೂ ಮಹಾರಾಜರ ಮೇಲೆ ಗೌರವವಿದೆ. ಅವರು ನನ್ನ ಸಮಸ್ಯೆಯನ್ನು ವೈಯಕ್ತಿಕವಾಗಿ ಪರಿಹರಿಸಲು ಪ್ರಯತ್ನಿಸಿದರು. ನನ್ನೊಂದಿಗೆ ದ್ವೇಷ ಸಾಧಿಸುವ ಬಿಜೆಪಿ ನಾಯಕರಿಗೆ ಬುದ್ದಿ ಹೇಳಿದರು. ಆದರೆ, ಅವರೀಗ ದೊಡ್ಡ ನಾಯಕ ಮತ್ತು ಕೇಂದ್ರ ಸಚಿವರಾಗಿದ್ದಾರೆ. ಅವರು ಯಾವಾಗಲೂ ನನ್ನ ಸಹಾಯಕ್ಕೆ ಬರಲು ಸಾಧ್ಯವಿಲ್ಲ' ಎಂದು ತಿಳಿದಿದ್ದಾರೆ.

ಪಟೇಲ್ ಅವರ ಈ ನಡೆಯಿಂದ ಬಿಜೆಪಿಗೆ ನಷ್ಟವಾಗಬಹುದು ಎಂದು ಸಿಂಧಿಯಾ ಬಣದ ನಾಯಕರೊಬ್ಬರು ಹೇಳಿದ್ದಾರೆ.

'ನೀಮುಚ್‌ನಲ್ಲಿ ಪಟೇಲ್ ದೊಡ್ಡ ನಾಯಕ. ಆರ್ಥಿಕವಾಗಿ ಸಬಲರಾಗಿದ್ದ ಅವರು ಪಕ್ಷವನ್ನು ಬೆಂಬಲಿಸಿದರು. ಸಿಂಧಿಯಾ ಅವರ ಗಾಡ್ ಫಾದರ್ ಆಗಿದ್ದರು. ಅವರು ಸಿಂಧಿಯ ಲೆಫ್ಟಿನೆಂಟ್ ಇದ್ದಂತೆ' ಎಂದು ತಿಳಿಸಿದ್ದಾರೆ.

'ಸಿಂಧಿಯಾ ಅವರ ಅನೇಕ ಬೆಂಬಲಿಗರು ಶೀಘ್ರದಲ್ಲೇ ಕಾಂಗ್ರೆಸ್‌ಗೆ ಮರಳುತ್ತಾರೆ' ಎಂದು ಹೇಳಿದ್ದಾರೆ.

ಪಟೇಲ್‌ ಅವರು ಧಕಡ್ ಸಮುದಾಯದಿಂದ ಬಂದವರು. ಈ ಸಮುದಾಯವನ್ನು ಇತರ ಹಿಂದುಳಿದ ವರ್ಗ ಎಂದು ವರ್ಗೀಕರಿಸಲಾಗಿದೆ. ಇದು ರಾಜ್ಯದಲ್ಲಿ ಶೇ 24ರಷ್ಟು ಮತ ಹಂಚಿಕೆಯನ್ನು ಹೊಂದಿದೆ. ಚುನಾವಣಾ ಅಫಿಡವಿಟ್‌ನಲ್ಲಿ 89 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿರುವ ಪಟೇಲ್‌ ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+