Madhya Pradesh Opinion Poll: ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳುವುದೇನು? ಕುತೂಹಲಕರ ಅಂಕಿಅಂಶ
ನವದೆಹಲಿ, ನವೆಂಬರ್ 04: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯು ತೀವ್ರ ಕುತೂಹಲ ಕೆರಳಿಸಿದೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷವು ಹಲವು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಬಿಜೆಪಿಗೆ ಟಕ್ಕರ್ ನೀಡಲು ಹೊರಟಿದೆ. ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾನ್ ಅವರು ಐದನೇ ಬಾರಿ ತಮ್ಮ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ.
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳುವುದೇನು?
ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಮತದಾನ ನಡೆಯಲಿದೆ. ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳ ಪೈಕಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) 119 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ಗೆಲ್ಲುವ ಮೂಲಕ ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ.

230 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಐದು ವರ್ಷಗಳ ಹಿಂದೆ ಗೆದ್ದಿದ್ದ ಬಿಜೆಪಿ 109 ಸ್ಥಾನಗಳನ್ನು ಗೆದ್ದಿತ್ತು. ಈಗ ಬಿಜೆಪಿ 119 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯು ಹೇಳಿದೆ. ಕಳೆದ ಚುನಾವಣೆಯಲ್ಲಿ 114 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್ 107 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಪಕ್ಷೇತರರು ನಾಲ್ಕು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲಿ ಏಳು ಸ್ಥಾನಗಳನ್ನು ಸ್ವತಂತ್ರ ಮತ್ತು ಸ್ಥಳೀಯ ಪಕ್ಷಗಳು ಗೆದ್ದಿದ್ದವು.
ಬಿಜೆಪಿ ಶೇ 46.33, ಕಾಂಗ್ರೆಸ್ ಶೇ 43.24 ಮತ್ತು ಪಕ್ಷೇತರರು ಶೇ 10.43 ಮತಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ಶೇ 41.02, ಕಾಂಗ್ರೆಸ್ ಶೇ 40.89 ಮತ್ತು ಪಕ್ಷೇತರರು ಶೇ 18.09 ಮತಗಳನ್ನು ಪಡೆದಿದ್ದರು.

ಪ್ರದೇಶವಾರು ಲೆಕ್ಕಾಚಾರ
51 ಸ್ಥಾನಗಳನ್ನು ಹೊಂದಿರುವ ಬಾಘೇಲ್‌ಖಂಡ್‌ನಲ್ಲಿ ಬಿಜೆಪಿ 29 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ 21 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಇತರರು ಒಂದು ಸ್ಥಾನವನ್ನು ಗೆಲ್ಲಬಹುದು.
24 ಸ್ಥಾನಗಳನ್ನು ಹೊಂದಿರುವ ಭೋಪಾಲ್‌ನಲ್ಲಿ ಬಿಜೆಪಿ 16 ಸ್ಥಾನಗಳನ್ನು ಗೆಲ್ಲಬಹುದು, ಉಳಿದ ಎಂಟು ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಬಹುದು.
34 ಸ್ಥಾನಗಳನ್ನು ಹೊಂದಿರುವ ಚಂಬಲ್‌ನಲ್ಲಿ ಕಾಂಗ್ರೆಸ್ 19 ಸ್ಥಾನಗಳನ್ನು ಗೆಲ್ಲಬಹುದು. ಬಿಜೆಪಿಗೆ 15 ಸ್ಥಾನಗಳು ಬರಹುದು.
47 ಸ್ಥಾನಗಳನ್ನು ಹೊಂದಿರುವ ಮಹಾಕೌಶಲ್‌ನಲ್ಲಿ ಕಾಂಗ್ರೆಸ್ 26 ಸ್ಥಾನಗಳನ್ನು ಗೆಲ್ಲಬಹುದು, ಬಿಜೆಪಿ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಮತ್ತು ಇತರರು ಎರಡು ಸ್ಥಾನಗಳನ್ನು ಗೆಲ್ಲಬಹುದು.

46 ಸ್ಥಾನಗಳನ್ನು ಹೊಂದಿರುವ ಮಾಲ್ವಾದಲ್ಲಿ ಬಿಜೆಪಿ 28 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 18 ಸ್ಥಾನಗಳನ್ನು ಗೆಲ್ಲಬಹುದು.
28 ಸ್ಥಾನಗಳನ್ನು ಹೊಂದಿರುವ ನಿಮಾರ್‌ನಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಗೆಲ್ಲಬಹುದು, ಬಿಜೆಪಿ 12 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಉಳಿದ ಒಂದು ಸ್ಥಾನವು 'ಇತರರಿಗೆ' ಹೋಗಬಹುದು.
ಮುಖ್ಯಮಂತ್ರಿಗೆ ಆದ್ಯತೆ
ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಶೇ 42.5 ಜನರು ಬಯಸಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರು ಮುಖ್ಯಮಂತ್ರಿಯಾಗಬೇಕೆಂದು ಶೇ 39.61 ರಷ್ಟು ಜನರು ತಮ್ಮ ಒಲವನ್ನು ತೋರಿಸಿದ್ದಾರೆ. ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶೇಕಡಾ 11.47, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಶೇಕಡಾ 1 ಮತ್ತು 'ಇತರರಿಗೆ' ಶೇಕಡಾ 5.42 ರಷ್ಟು ಜನರು ಆದ್ಯತೆ ನೀಡಿದ್ದಾರೆ.
ಶೇ 52.39 ರಷ್ಟು ಬಿಜೆಪಿ ಬೆಂಬಲಿಗರು ನರೇಂದ್ರ ಮೋದಿ ಅವರ ಮುಖ ನೋಡಿ ಮತ ಹಾಕುವುದಾಗಿ ಹೇಳಿದ್ದರೆ, ಶೇ 42.06 ರಷ್ಟು ಜನರು ಶಿವರಾಜ್ ಸಿಂಗ್ ಚೌಹಾಣ್ ಅವರ ಮುಖ ನೋಡಿ ಮತ ಹಾಕುವುದಾಗಿ ಹೇಳಿದ್ದಾರೆ. ಶೇ 5.55 ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ಹೊಂದಿಲ್ಲ. ಈ ಪ್ರಶ್ನೆಯನ್ನು ಬಿಜೆಪಿ ಬೆಂಬಲಿಗರಿಗೆ ಮಾತ್ರ ಕೇಳಲಾಗಿದೆ.
ಶೇ 48.77 ರಷ್ಟು ಮತದಾರರು ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಬುದ್ಧಿವಂತಿಕೆ ತೋರಿಸಿದೆ ಎಂದು ಹೇಳಿದರೆ, ಶೇ 39.52 ರಷ್ಟು ಜನರು ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಬುದ್ಧಿವಂತಿಕೆ ತೋರಿಸಿದೆ ಎಂದು ಹೇಳಿದ್ದಾರೆ.
ಶೇ 35.06 ರಷ್ಟು ಮತದಾರರು ಕಾಂಗ್ರೆಸ್ ನಾಯಕರಲ್ಲಿ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರವನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಿದರೆ, ಶೇ 34.85 ರಷ್ಟು ಜನರು ಕಮಲ್ ನಾಥ್ ಎಂದು ಹೇಳಿದ್ದಾರೆ. 13.5 ರಷ್ಟು ಮಂದಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಶೇ 47.01 ರಷ್ಟು ಮತದಾರರು ಬಿಜೆಪಿಯ ಕಲ್ಯಾಣ ಯೋಜನೆಗಳನ್ನು (ಖಾತರಿಗಳನ್ನು) ನಂಬುವುದಾಗಿ ಹೇಳಿದ್ದಾರೆ. ಶೇ 40.66 ರಷ್ಟು ಜನರು ಕಾಂಗ್ರೆಸ್ ಪರ ಒಲವು ತೋರಿಸಿದ್ದಾರೆ.
ಶೇ 46.99 ರಷ್ಟು ಮತದಾರರು ಕಾಂಗ್ರೆಸ್ ಪಕ್ಷದ ಜಾತಿ ಆಧಾರಿತ ಜನಗಣತಿ ಭರವಸೆ ಕೇವಲ ಚುನಾವಣಾ ಗಿಮಿಕ್ ಎಂದು ಹೇಳಿದ್ದಾರೆ. ಶೇ 42.18 ರಷ್ಟು ಮತದಾರರು ಇದು ನಿಜವಾದ ಉಪಕ್ರಮ ಎಂದು ಹೇಳಿದ್ದಾರೆ. ಶೇ 10.83 ರಷ್ಟು ಜನರು ಯಾವುದೇ ಅಭಿಪ್ರಾಯವನ್ನು ಹೊಂದಿಲ್ಲ.
ಶೇ 52.91 ರಷ್ಟು ಮತದಾರರು ಬಿಜೆಪಿಯಲ್ಲಿ ಹೆಚ್ಚಿನ ಆಂತರಿಕ ಸಂಘರ್ಷಗಳಿವೆ ಎಂದು ಹೇಳಿದರೆ, ಶೇ 36.7 ರಷ್ಟು ಮತದಾರರು ಕಾಂಗ್ರೆಸ್‌ನಲ್ಲಿ ಹೆಚ್ಚು ಆಂತರಿಕ ಕಚ್ಚಾಟವಿದೆ ಎಂದು ಹೇಳಿದ್ದಾರೆ.
ಶೇ 47.45 ರಷ್ಟು ಮತದಾರರು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಅನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಶೇ 35 ರಷ್ಟು ಮತದಾರರು ಪಿಎಂ ಮೋದಿ ಪ್ಯಾಲೆಸ್ತೀನ್ ಅನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಶೇ 17.55 ರಷ್ಟು ಜನರು ಯಾವುದೇ ಆಯ್ಕೆಯನ್ನು ಬಯಸಿಲ್ಲ.
ಶೇ 51 ರಷ್ಟು ಮತದಾರರು ಇಸ್ರೇಲ್ ಸರಿ ಎಂದು ಹೇಳಿದರೆ, ಶೇ 38.39 ರಷ್ಟು ಮತದಾರರು ಪ್ಯಾಲೆಸ್ತೀನ್ ಸರಿ ಎಂದು ಹೇಳಿದ್ದಾರೆ. ಶೇ 10.61 ರಷ್ಟು ಮತದಾರರು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications